ಬೆಂಗಳೂರು,ಅ.9- ಬಿಜೆಪಿ ಸರ್ಕಾರ ಅವಧಿಯ ಮತ್ತೊಂದು ಹಗರಣದ ಬೆನ್ನು ಬಿದ್ದಿದೆ ಕಾಂಗ್ರೆಸ್ ಸರ್ಕಾರ. ಕೊರೊನಾ ಟೈಮ್ ನಲ್ಲಿ ನೂರಾರೂ ಕೋಟಿ ಹಗರಣವಾಗಿದೆ ಅಂತ ದೂರು ಬಂದ ಹಿನ್ನೇಲೆಯಲ್ಲಿ ಹಗರಣದ ತನಿಖೆ ನಡೆಸಲಾಗುತ್ತಿದೆ. ಹಗರಣದಲ್ಲಿ ಮಾಜಿ ಸಚಿವರು ಸೇರಿದಂತೆ ಹಿರಿಯ ಅಧಿಕಾರಿಗಳು ಭಾಗಿಯಾಗಿದ್ದಾರೆ ಎಂಬ ಅರೋಪ ಕೇಳಿಬಂದಿರುವುದರಿಂದ ತನಿಖಾ ಸಮಿತಿ ಅಧ್ಯಕ್ಷ ನಿವೃತ್ತ ನ್ಯಾಯಮೂರ್ತಿ ಜಾನ್ ಮೈಕಲ್ ಕುನ್ಹಾ ಅವರು ವಿಚಾರಣೆ ತೀವ್ರಗೊಳಿಸಿದ್ದಾರೆ.
ಸಮಿತಿ ಅಧ್ಯಕ್ಷ ನಿವೃತ ನ್ಯಾಯಮೂರ್ತಿ ಜಾನ್ ಮೈಕಲ್ ಕುನ್ಹಾ ಅವರು ಹಗರಣದ ಇಂಚಿಂಚು ಮಾಹಿತಿ ಸಂಗ್ರಹ ಮಾಡುತ್ತಿರುವುದರಿಂದ ತಪ್ಪಿತಸ್ಥರಲ್ಲಿ ನಡುಕ ಆರಂಭವಾಗಿದೆ. ಕಳೆದ ಮೂರು ದಿನಗಳಿಂದ ಪಾಲಿಕೆ ಅಯುಕ್ತರ ವಿಚಾರಣೆ ನಡೆಸ್ತಿರೋ ತನಿಖಾ ಸಮಿತಿ ಕೋವಿಡ್ ಟೈಮ್ ನಲ್ಲಿ ಬಿಬಿಎಂಪಿ ಮಾಡಿರುವ ಖರ್ಚು, ವೆಚ್ಚಗಳ ಬಗ್ಗೆ ದಾಖಲೆ ನೀಡುವಂತೆ ಸೂಚನೆ ನೀಡಿದೆ. 2019 ರಿಂದ 2022 ರವೆಗೆ ಪಾಲಿಕೆಯಲ್ಲಿ ಖರ್ಚು ಮಾಡಿರೋ ಪೈಲ್ ಗಳನ್ನೂ ನೀಡುವಂತೆಯೂ ಆದೇಶಿಸಿದ್ದಾರೆ.
ಬ್ರಾಂಡ್ ಬೆಂಗಳೂರಿಗೆ ಸಾರ್ವಜನಿಕ ಸಹಭಾಗಿತ್ವಕ್ಕಾಗಿ ಮಹತ್ವದ ಸುಧಾರಣೆಗಳ ಜಾರಿ : ಡಿಸಿಎಂ
ಈ ಅದೇಶದ ಹಿನ್ನೆಲೆಯಲ್ಲಿ ದಾಖಲೆಗಳ ಪಟ್ಟಿ ಮಾಡಿ ತನಿಖಾ ಸಂಸ್ಥೆಗೆ ಬಿಬಿಎಂಪಿ ಅರೋಗ್ಯ ಇಲಾಖೆ ಅಧಿಕಾರಿಗಳು ಹಸ್ತಾಂತರ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಇನ್ನೂ ಪಾಲಿಕೆ ಅಯುಕ್ತರಿಗೆ ಸಮಿತಿ ಅಧ್ಯಕ್ಷರಿಂದ ಪ್ರಶ್ನೇಗಳ ಸುರಿಮಳೆ ಸುರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
2019 ರಿಂದ 2022 ರವರೆಗೆ ಕೋವಿಡ್ ಟೈಮ್ ನಲ್ಲಿ ಪಾಲಿಕೆಯಿಂದ ಎಷ್ಟು ಖರ್ಚು ಮಾಡಲಾಗಿದೆ, ಯಾವ,ಯಾವ ಕೋವಿಡ್ ಉಪಕರಣಗಳನ್ನೂ ಪರ್ಚೆಸ್ ಮಾಡಿದಿರಿ, ಅದಕ್ಕೆ ಸಂಬಂಧಿಸಿದ ಬಿಲ್ ಗಳನ್ನೂ ಸಲ್ಲಿಸಿ, ಪಾಲಿಕೆ ವ್ಯಾಪ್ತಿಯಲ್ಲಿ ಎಷ್ಟು ಅಂಬುಲೆನ್ಸ್ ಗಳನ್ನೂ ಬಾಡಿಗೆಗೆ ಪಡೆದಿದ್ರಿ,ಅವುಗಳ ಲಾಗ್ ಬುಕ್ ಹಾಗೂ ಬಾಡಿಗೆ ನೀಡಿರೋ ದಾಖಲೆ ನೀಡಿ.
ಸ್ಯಾನಿಟೈಸರ್ , ಮಾಸ್ಕ್, ಸಿಲಿಂಡರ್, ಹಾಸಿಗೆ, ಸೇರಿದಂತೆ ಇತರೆ ವಸ್ತುಗಳ ಖರೀದಿ ಬಿಲ್ ಗಳನ್ನೂ ನೀಡಿ, ಕೋವಿಡ್ ಟೈಮ್ ನಲ್ಲಿ ಅಸ್ಪತ್ರೆಗಳಿಗೆ , ಕೋವಿಡ್ ವಾರಿಯರ್ಸ್ ಗಳಿಗೆ ಹಾಗೂ ಅನಾಥರಿಗೆ ನೀಡಿದ ಊಟದ ಲೆಕ್ಕ ನೀಡಿ, ಇನ್ನೂ ಕೋರೋನಾ ಸೊಂಕಿತರಿಗೆ ಖಾಸಗಿ ಅಸ್ಪತ್ರೆಯಲ್ಲಿ ಎಷ್ಟು ಜನಕ್ಕೆ ಚಿಕಿತ್ಸೆ ನೀಡಿದ್ದೀರಾ ಹಾಗೂ ಎಷ್ಟು ಹಣ ಖರ್ಚು ಮಾಡಲಾಗಿದೆ ಎಂಬ ಮಾಹಿತಿ ಕೇಳಲಾಗಿದೆಯಂತೆ.
BIG NEWS : ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆ ಘೋಷಣೆ
ಇದರ ಜತೆಗೆ ಖಾಸಗಿ ಅಸ್ಪತ್ರೆಗೆ ನೀಡಿರೋ ಬಿಲ್ ಗಳ ದಾಖಲೆ ನೀಡಿ,,ಹೀಗೆ ಹತ್ತು ಹಲವು ಪ್ರಶ್ನೇಗಳನ್ನೂ ಕೇಳಿ, ಒಂದು ವಾರದೋಳಗೆ ಕೇಳಿರೋ ಎಲ್ಲಾ ದಾಖಲೆಗಳನ್ನೂ ನೀಡುವಂತೆ ಸೂಚನೆ ನೀಡಿರುವುದರಿಂದ ಪಾಲಿಕೆ ಅರೋಗ್ಯ ಅಧಿಕಾರಿಗಳು ಬಿಲ್‍ಗಳ ಹುಡುಕಾಟ ನಡೆಸಿ ಹಲವು ಬಿಲ್ ಗಳ ಪಟ್ಟಿ ರೆಡಿ ಮಾಡಿದ್ದಾರಂತೆ.