ಬೆಂಗಳೂರು,ಆ.12- ಮಳೆಗಾಲದಲ್ಲಿ ಫ್ಲೆಕ್ಸ್ ನಿಂದ ಅವಘಡಗಳಾಗದಂತೆ ತಡಗಟ್ಟಬೇಕು, ಫುಟ್ಪಾತ್ ಹಾಗೂ ಜನಸಂದಣಿ ಇರುವೆಡೆ ಫ್ಲೆಕ್ಸ್ ಅಳವಡಿಸದಂತೆ ಎಚ್ಚರಿಕೆ ವಹಿಸಬೇಕೆಂದು ಹೈಕೋರ್ಟ್ ವಿಭಾಗೀಯ ಪೀಠ ಬಿಬಿಎಂಪಿ ಮತ್ತು ಪೊಲೀಸ್ ಇಲಾಖೆಗೆ ಸೂಚನೆ ನೀಡಿದೆ.
ಬೆಂಗಳೂರಿನಲ್ಲಿ ಅನಧಿಕೃತ ಫ್ಲೆಕ್ಸ್ ಮತ್ತು ಹೋರ್ಡಿಂಗ್ಸ್ ಹಾವಳಿ ಹಿನ್ನಲೆಯಲ್ಲಿ ಹೈಕೋರ್ಟ್ ವಿಭಾಗೀಯ ಪೀಠದಲ್ಲಿ ನಡೆದ ಪಿಐಎಲ್ ವಿಚಾರಣೆ ಕೈಗೆತ್ತಿಕೊಂಡ ಹೈಕೋರ್ಟ್ ವಿಭಾಗೀಯ ಪೀಠ, ಅಕ್ರಮ ಜಾಹಿರಾತು ಫಲಕಗಳು ಅಳವಡಿಸದಂತೆ ಅಧಿಕಾರಿಗಳು ನಿಗಾವಹಿಸಬೇಕು. ಈ ಬಗ್ಗೆ ಬಿಬಿಎಂಪಿ ಹಾಗೂ ಪೊಲೀಸ್ ಇಲಾಖೆಗೆ ಸೂಚನೆ ನೀಡಿದೆ.
ಮಳೆಗಾಲದ ಸಂದರ್ಭದಲ್ಲಿ ಫ್ಲೆಕ್ಸ್ ಗಳಿಂದ ಅವಘಡಗಳಾಗುವ ಸಂಭವವಿರುತ್ತದೆ. ಫುಟ್ಪಾತ್ ಮತ್ತು ಜನಸಂಚಾರ ಇರುವ ಕಡೆ ಫ್ಲೆಕ್‌್ಸ ಅಳವಡಿಸದಂತೆ ಹೈಕೋರ್ಟ್ ಸೂಚಿಸಿದೆ.
ಈ ಕುರಿತು ಪ್ರಮಾಣಪತ್ರ ಸಲ್ಲಿಸುವಂತೆ ಬಿಬಿಎಂಪಿ ಮುಖ್ಯ ಆಯುಕ್ತರಿಗೆ ಸೂಚನೆ ನೀಡಿತು. ಮುಂದಿನ 15 ದಿನಗಳಲ್ಲಿ ಜಾಹಿರಾತು ನೀತಿ ಅನುಷ್ಠಾನಗೊಳಿಸಲಾಗುವುದು ಎಂದು ಹೈಕೋರ್ಟ್‌ಗೆ ಸರ್ಕಾರದ ಪರ ಎಎಜಿ ಪ್ರತಿಮಾ ಹೊನ್ನಾಪುರ್ ಅವರು ಮಾಹಿತಿ ನೀಡಿದರು.