Thursday, September 11, 2025
Homeರಾಜ್ಯಶೈಕ್ಷಣಿಕ, ಸಾಮಾಜಿಕ, ಹಾಗೂ ಆರ್ಥಿಕ ಸಮೀಕ್ಷೆಯಲ್ಲಿ ಒಕ್ಕಲಿಗ ಎಂದು ನಮೂದಿಸಿ : ನಿರ್ಮಲಾನಂದನಾಥ ಸ್ವಾಮೀಜಿ

ಶೈಕ್ಷಣಿಕ, ಸಾಮಾಜಿಕ, ಹಾಗೂ ಆರ್ಥಿಕ ಸಮೀಕ್ಷೆಯಲ್ಲಿ ಒಕ್ಕಲಿಗ ಎಂದು ನಮೂದಿಸಿ : ನಿರ್ಮಲಾನಂದನಾಥ ಸ್ವಾಮೀಜಿ

Enter as Vokkaliga in Educational, Social and Economic Survey: Nirmalanandanath Swamiji

ಮೈಸೂರು,ಸೆ.11- ಕರ್ನಾಟಕ ರಾಜ್ಯ ಸರ್ಕಾರದಿಂದ ಸೆ.22ರಿಂದ 15 ದಿನಗಳ ಕಾಲ ನಡೆಯುವ ಹಿಂದುಳಿದ ವರ್ಗಗಳ ಆಯೋಗದ ಶೈಕ್ಷಣಿಕ, ಸಾಮಾಜಿಕ, ಹಾಗೂ ಆರ್ಥಿಕ ಸಮೀಕ್ಷೆಯಲ್ಲಿ ಒಕ್ಕಲಿಗ ಜನಾಂಗ ಒಕ್ಕಲಿಗ ಎಂದೇ ನಮೂದಿಸುವಂತೆ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ತಿಳಿಸಿದರು.

ಮೈಸೂರಿನ ಹೆಬ್ಬಾಳದ ಆದಿಚುಂಚನಗಿರಿ ಶಾಖಾ ಮಠದಲ್ಲಿ ಜಾತಿಗಣತಿ ಸಂಬಂಧ ಪೂರ್ವಭಾವಿಯಾಗಿ ಜಿಲ್ಲೆಯ ಒಕ್ಕಲಿಗ ಜನಾಂಗದ ಮುಖಂಡರ ಸಭೆಯ ಸಾನ್ನಿಧ್ಯವಹಿಸಿ ಅವರು ಮಾತನಾಡಿದರು. ಮುಂಬರುವ ಸಮೀಕ್ಷೆಯಲ್ಲಿ ಜಾತಿ ಕಲಂ ನಲ್ಲಿ ಒಕ್ಕಲಿಗ ಎಂದೇ ನಮೂದಿಸಬೇಕು. ಉಪ ಜಾತಿ ಕಲಂನಲ್ಲಿ ಉಪಪಂಗಡ ಬಗ್ಗೆ ಮಾಹಿತಿ ಇದರೇ ನಮೂದಿಸಬೇಕು ಇಲ್ಲದಿದ್ದರೆ ಒಕ್ಕಲಿಗ ಎಂದೇ ನಮೂದಿಸಬೇಕು ಎಂದು ತಿಳಿಸಿದರು.

ತಮ ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಸ್ಥಿತಿಗತಿಗಳ ಬಗ್ಗೆ ನಿಖರವಾದ ಮಾಹಿತಿಯನ್ನು ನೀಡಬೇಕು. ಪ್ರತಿ ಗ್ರಾಮಕ್ಕೂ ಈ ಮಾಹಿತಿಯನ್ನು ನೀಡುವ ಜವಾಬ್ದಾರಿಯನ್ನು ಮುಖಂಡರುಗಳು ಸ್ವಯಂ ಪ್ರೇರಿತವಾಗಿ ಮಾಡಬೇಕು ಎಂದು ಸೂಚಿಸಿದರು. ಎಲ್ಲರೂ ಈ ಸಮೀಕ್ಷೆಯಲ್ಲಿ ಪ್ರತಿಯೊಬ್ಬರು ಪಾಲ್ಗೊಳ್ಳುವಂತೆ ಕ್ರಮ ವಹಿಸಬೇಕೆಂದು ಹೇಳಿದರು.

ಈ ಜವಾಬ್ದಾರಿಯನ್ನು ಆಯಾ ಗ್ರಾಮ, ತಾಲ್ಲೂಕು, ಜಿಲ್ಲಾ ಮುಖಂಡರುಗಳು ವಹಿಸಿಕೊಂಡು ಸಮೀಕ್ಷೆಗೆ ಸಹಕರಿಸುವಂತೆ ಕೋರಿದರು. ಈ ಸಂದರ್ಭದಲ್ಲಿ ಮೈಸೂರು ಶಾಖಾಮಠದ ಶ್ರೀ ಸೋಮೇಶ್ವರನಾಥ ಸ್ವಾಮೀಜಿ, ಆದಿಚುಂಚನಗಿರಿ ಮಠದ ಕಾರ್ಯದರ್ಶಿ ಶ್ರೀ ಪ್ರಸನ್ನನಾಥ ಸ್ವಾಮೀಜಿ, ಶಾಸಕ ಜಿ.ಡಿ.ಹರೀಶ್‌ ಗೌಡ, ಒಕ್ಕಲಿಗರ ಮೀಸಲಾತಿ ಹೋರಾಟ ಸಮಿತಿಯ ಆಡಿಟರ್‌ ನಾಗರಾಜ್‌, ಮೈಸೂರು ಹಾಗೂ ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಸಿ.ಮರಿಸ್ವಾಮಿ, ಗೌರವಾಧ್ಯಕ್ಷ ಅಲತೂರು ಜಯರಾಮ್‌, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕರಾದ ಕೆ.ವಿ.ಶ್ರೀಧರ್‌, ಸಿ.ಜಿ.ಗಂಗಾಧರ್‌, ಎಂ.ಬಿ.ಮಂಜೇಗೌಡ, ಜಿಲ್ಲಾ ಒಕ್ಕಲಿಗ ಸಂಘದ ಪ್ರಧಾನ ಕಾರ್ಯದರ್ಶಿ ಈ.ಎಂ. ಚೇತನ್‌, ಉಪಾಧ್ಯಕ್ಷ ಮಹೇಶ್‌, ಖಚಾಂಚಿ ಆರ್‌.ಲೋಕೇಶ್‌, ನಿರ್ದೇಶಕರಾದ ಪ್ರಶಾಂತ್‌ ಗೌಡ, ಕೆ.ಪಿ.ನಾಗಣ್ಣ, ಬಿ.ಪಿ.ಬೋರೇಗೌಡ, ಎ.ರವಿ, ಗುರುರಾಜ್‌, ಯಳಂದೂರು ಕುಮಾರ್‌, ಮೈಸೂರು ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಎಸ್‌‍.
ಅರುಣ್‌ಕುಮಾರ್‌, ನಗರಪಾಲಿಕೆ ಮಾಜಿ ಸದಸ್ಯರಾದ ಪ್ರೇಮ ಶಂಕರೇಗೌಡ, ಮುಖಂಡರಾದ ಕಾವೇರಿ ಆಸ್ಪತ್ರೆಯ ಡಾ.ಚಂದ್ರಶೇಖರ್‌, ಡಾ.ಎಸ್‌‍.ಪಿ ಯೋಗಣ್ಣ,
ಡಾ.ಸುಶ್ರೂತ್‌ ಗೌಡ, ಹೆಚ್‌.ಕೆ. ರಮೇಶ್‌, ಸವಿತಾ ಗೌಡ, ಹೇಮಾ ನಂದೀಶ್‌, ಯೋಗೇಶ್‌, ಕುಮಾರ್‌, ಕೀಲಾರ ಜಯರಾಮ್‌ ಇನ್ನಿತರರು ಉಪಸ್ಥಿತರಿದ್ದರು.

RELATED ARTICLES

Latest News