Saturday, December 20, 2025
Homeಮನರಂಜನೆಕೆನಡಾದಲ್ಲಿ '45' ಚಿತ್ರದ ಶೋಗಳು ಸೋಲ್ಡೌಟ್

ಕೆನಡಾದಲ್ಲಿ ’45’ ಚಿತ್ರದ ಶೋಗಳು ಸೋಲ್ಡೌಟ್

'45' movie shows sold out in Canada

ಅರ್ಜುನ್ ಜನ್ಯಾ ನಿರ್ದೇಶನದ ’45’ ಸಿನಿಮಾ ದೊಡ್ಡಮಟ್ಟದಲ್ಲಿ ಸದ್ದು ಮಾಡ್ತಿದೆ. ಕ್ರಿಸ್ಮಸ್ ಸಂಭ್ರಮದಲ್ಲಿ 45 ತೆರೆಗಪ್ಪಳಿಸಲಿದೆ. ಮತ್ತೊಂದು ಖುಷಿಯ ವಿಚಾರ ಅಂದ್ರೆ ತೆಲುಗು, ತಮಿಳು, ಹಿಂದಿ, ಮಲಯಾಳಂ ರೈಟ್ಸ್ ಭರ್ಜರಿ ಬೆಲೆಗೆ ಆಗಲೇ ಸೇಲ್ ಆಗಿದೆ. ಕರ್ನಾಟಕ ಹಾಗೂ ವಿದೇಶಗಳಲ್ಲಿ ಬಿಡುಗಡೆಯಾದ ಒಂದು ವಾರ ತಡವಾಗಿ ಬೇರೆ ರಾಜ್ಯಗಳಲ್ಲಿ ಬಿಡುಗಡೆಯಾಗಲಿದೆ. ಕನ್ನಡದಲ್ಲಿ ಸಿನಿಮಾ ಬಿಡುಗಡೆ ಬಳಿಕ ಚಿತ್ರತಂಡ ಬೇರೆ ಬೇರೆ ರಾಜ್ಯಗಳಿಗೆ ತೆರಳಿ ಪ್ರಚಾರ ಮಾಡಲಿದೆ. ಈಗಾಗಲೇ ಹೈದರಾಬಾದ್ ಸೇರಿದಂತೆ ಹಲವು ಕಡೆಗಳಲ್ಲಿ ಪ್ರಮೋಷನ್ ಶುರುವಾಗಿದೆ.

ದೊಡ್ಡ ದೊಡ್ಡ ಸಂಸ್ಥೆಗಳು ಬೇರೆ ಬೇರೆ ಭಾಷೆಗಳಲ್ಲಿ ’45’ ಚಿತ್ರದ ವಿತರಣೆ ಹಕ್ಕು ಕೊಂಡುಕೊಂಡಿದ್ದಾರೆ. ಕರ್ನಾಟಕದಲ್ಲಿ ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆ ಭರ್ಜರಿ ಬೆಲೆಗೆ ರೈಟ್ಸ್ ಖರೀದಿಸಿದ್ದು , ಆಂಧ್ರ, ತೆಲಂಗಾಣ ರೈಟ್ಸ್ ಮೈತ್ರಿ ಮೂವಿ ಮೇಕರ್ಸ್ ಪಾಲಾಗಿದೆ. ’45’ ಚಿತ್ರದ ಕ್ರೇಜ್ ನೋಡಿ ಸಿನಿಮಾ ಕ್ವಾಲಿಟಿ ನೋಡಿ ಭಾರೀ ಮೊತ್ತಕ್ಕೆ ತೆಲುಗು ರಾಜ್ಯಗಳ ಹಕ್ಕುಗಳನ್ನು ಸ್ವಂತ ಮಾಡಿಕೊಂಡಿದ್ದಾರೆ.

ಕೆನಡಾದಲ್ಲಿ 2 ದಿನ ಮುನ್ನ ಅಂದರೆ ಡಿಸೆಂಬರ್ 23ರಂದೇ ’45’ ಸಿನಿಮಾ ತೆರೆಗೆ ಬರಲಿದೆ. ಈಗಾಗಲೇ ಒಂದೆರಡು ಶೋಗಳ ಟಿಕೆಟ್ ಸೋಲ್ಡೌಟ್ ಆಗೋಗಿದೆ. ಇದು ಸಹಜವಾಗಿಯೇ ಚಿತ್ರತಂಡದ ಸಂತಸಕ್ಕೆ ಕಾರಣವಾಗಿದೆ ಓವರ್ಸೀಸ್ ಮಾರ್ಕೆಟ್ನಲ್ಲಿ ಸಿನಿಮಾ ದೊಡ್ಡದಾಗಿ ಸದ್ದು ಮಾಡುವ ಸುಳಿವು ಸಿಕ್ಕಿದೆ. ’45’ ಚಿತ್ರದ ಟ್ರೈಲರ್ ಇದೀಗ 25 ಮಿಲಿಯನ್ಗೂ ಅಧಿಕ ವೀವ್ಸ್ ಸಾಧಿಸಿ ಟ್ರೈಲರ್ ದಾಖಲೆ ಬರೆದಿದೆ.

RELATED ARTICLES

Latest News