Saturday, December 6, 2025
Homeಮನರಂಜನೆಚಿತ್ರೀಕರಣ ವೇಳೆ ಹೃದಯಾಘಾತದಿಂದ ನಿರ್ದೇಶಕ ಸಂಗೀತ್‌ ಸಾಗರ್‌ ನಿಧನ

ಚಿತ್ರೀಕರಣ ವೇಳೆ ಹೃದಯಾಘಾತದಿಂದ ನಿರ್ದೇಶಕ ಸಂಗೀತ್‌ ಸಾಗರ್‌ ನಿಧನ

Director Sangeet Sagar dies of heart attack during filming

ತೀರ್ಥಹಳ್ಳಿ,ಡಿ.4-ಸಿನಿಮಾ ಚಿತ್ರೀಕರಣ ವೇಳೆ ಹೃದಯಾಘಾತದಿಂದ ನಿರ್ದೇಶಕ ಸಂಗೀತ್‌ ಸಾಗರ್‌ ಸಾವನ್ನಪ್ಪಿದ್ದಾರೆ.ಪಾತ್ರಧಾರಿ ಸಿನಿಮಾದ ಚಿತ್ರೀಕರಣ ನಡೆಸುತ್ತಿದ್ದ ವೇಳೆ ಹರಿಹರಪುರದಲ್ಲಿ ಈ ಘಟನೆ ನಡೆದಿದೆ.

ಸಕಲೇಶಪುರದ ದೊಡ್ಡನಾಗರ ಮೂಲದ ಸಂಗೀತ್‌ ಸಾಗರ್‌ ಚಿತ್ರರಂಗದಲ್ಲಿ ಹೊಸ ಭರವಸೆ ಮೂಡಿಸಿದ್ದರು ಎಂಟಕ್ಕೂ ಹೆಚ್ಚು ಕನ್ನಡ ಚಿತ್ರಗಳನ್ನು ನಿರ್ದೇಶಿಸಿದ್ದರು.ಹಾಸ್ಯ ಸನ್ನಿವೇಶ ಚಿತ್ರೀಕರಣ ಸಂದರ್ಭದಲ್ಲಿ ಅಸ್ವಸ್ಥಗೊಡು ಕುಸಿದುಬಿದ್ದರು.ತಕ್ಷಣ ಅವರನ್ನು ಕೊಪ್ಪ ಆಸ್ಪತ್ರೆಗೆ ದಾಖಲಿದಲಾಗಿತ್ತು ಆದರೆ ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ನೀಡುವಾಗ ಕೊನೆಯುಸಿರೆಳೆದಿದ್ದಾರೆ.

ಪಾತ್ರಧಾರಿ ಸಿನಿಮಾದ ಸಿನಿಮಾದ ನಿರ್ದೇಶಕ ಹಾಗೂ ಸಂಗೀತ ನಿರ್ದೇಶಕರಾಗಿ ಸಂಗೀತ್‌ ಸಾಗರ್‌ ಕೆಲಸ ಮಾಡುತ್ತಿದ್ದರು.ಕಳೆದ 20 ದಿನಗಳಿಂದ ಹರಿಹರಪುರ, ತೀರ್ಥಹಳ್ಳಿ ತಾಲೂಕು ಸುತ್ತಮುತ್ತ ಸಿನಿಮಾ ಚಿತ್ರೀಕರಣ ನಡೆಯುತ್ತಿತ್ತು. ನಾಳೆ ಕುಂಬಳಕಾಯಿ ಶಾಸ್ತ್ರ ಮಾಡಿ ಚಿತ್ರೀಕರಣ ಕೊನೆಗೊಳ್ಳಬೇಕಿತ್ತು.ಸಾಗರ್‌ ಅಕಾಲಿಕ ನಿಧನಕ್ಕೆ ಸಿನಿಮಾ ತಂಡ ಆಘಾತ ವ್ಯಕ್ತಪಡಿಸಿದೆ.

RELATED ARTICLES

Latest News