Thursday, January 8, 2026
Homeಮನರಂಜನೆದಳಪತಿ ವಿಜಯ್‌ ಅಭಿನಯದ ಜನನಾಯಗನ್‌ ತೆಲುಗಿನ 'ಭಗವಂತ ಕೇಸರಿ' ರಿಮೇಕ್..?!

ದಳಪತಿ ವಿಜಯ್‌ ಅಭಿನಯದ ಜನನಾಯಗನ್‌ ತೆಲುಗಿನ ‘ಭಗವಂತ ಕೇಸರಿ’ ರಿಮೇಕ್..?!

Jana Nayagan: Is Thalapathy Vijay's film a remake of Bhagavanth Kesari?

ಚೆನ್ನೈ, ಜ. 5- ಭಾರಿ ನಿರೀಕ್ಷೆ ಮೂಡಿಸಿದ್ದ ದಳಪತಿ ವಿಜಯ್‌ ಅವರ ಕೊನೆ ಚಿತ್ರ ಜನನಾಯಗನ್‌ ತೆಲುಗು ಚಿತ್ರ ಭಗವಂತ ಕೇಸರಿ ಇರಬಹುದೇ ಎಂಬ ಅನುಮಾನ ಕಾಡತೊಡಗಿರುವುದರಿಂದ ಆ ಚಿತ್ರದ ಬಗ್ಗೆಗಿನ ಕ್ರೇಜ್‌ ಕಡಿಮೆಯಾಗತೊಡಗಿದೆ.

ಜನ ನಾಯಗನ್‌ ಚಿತ್ರದ ಟ್ರೇಲರ್‌ ಬಿಡುಗಡೆಯ ನಂತರ ವಿಜಯ್‌ ಅಭಿಮಾನಿಗಳಲ್ಲಿ ಇದು ಭಗವಂತ ಕೇಸರಿ ಚಿತ್ರದ ರಿಮೇಕ್‌ ಎಂಬ ಅಂಶ ತಿಳಿಯತೊಡಗಿರುವುದು ದೊಡ್ಡ ವಿವಾದಕ್ಕೊಳಗಾಗಿದೆ.

ಜೊತೆಗೆ ಟ್ರೇಲರ್‌ನಲ್ಲಿ ಎಐ ತಂತ್ರಜ್ಞಾನದ ಶಾಟ್‌ ಬಳಕೆ ಆಗಿದೆ. ಇದು ಪ್ರೇಕ್ಷಕರನ್ನು ಮತ್ತಷ್ಟು ಕೆರಳಿಸಿದೆ. ಇದಕ್ಕೆ ಅನೇಕರು ಕೋಪ ಹೊರಹಾಕಿದ್ದಾರೆ.ಜನ ನಾಯಗನ್‌‍ ಇದು ದಳಪತಿ ವಿಜಯ್‌ ವೃತ್ತಿ ಜೀವನದ ಅತಿ ದೊಡ್ಡ ಸಿನಿಮಾ. ಇದು ಅವರ ಕೊನೆಯ ಚಿತ್ರ ಕೂಡ ಹೌದು.

ಹೀಗಾಗಿ, ಸಹಜವಾಗಿಯೇ ನಿರೀಕ್ಷೆ ಇದೆ. ಸಿನಿಮಾಗೆ ಹೈಪ್‌ ಸಿಗಬೇಕು ಎಂದರೆ ಚಿತ್ರದ ಟ್ರೇಲರ್‌ ಬಿಡುಗಡೆ ಆಗಬೇಕು. ಆದರೆ, ಜನ ನಾಯಗನ್‌‍ ವಿಷಯದಲ್ಲಿ ಅದು ಉಲ್ಟಾ ಆಗಿದೆ.
ಜನ ನಾಯಗನ್‌ ಚಿತ್ರ ಭಗವಂತ ಕೇಸರಿಯ ರಿಮೇಕ್‌ ಎಂದು ಹೇಳಲಾಗುತ್ತಾ ಬರುತ್ತಿತ್ತು.

ಆದರೆ, ತಂಡ ಇದನ್ನು ಒಪ್ಪಿಲ್ಲ. ಈಗ ಸಿನಿಮಾದ ಟ್ರೇಲರ್‌ ನೋಡಿದ ಬಳಿಕ ಇದು ಸ್ಪಷ್ಟವಾಗಿದೆ. ಇದರ ಜೊತೆಗೆ ಒಂದು ಶಾಟ್‌ನ ಜೆಮಿನಿ ಎಐ ಬಳಸಿ ರಚಿಸಲಾಗಿದೆ. ದುರಂತ ಎಂದರೆ ಜೆಮಿನಿ ಎಐ ಲೋಗೋನ ತೆಗೆಯಲು ತಂಡದವರು ಮರೆತಿದ್ದಾರೆ.ಈ ವಿಷಯ ಸೋಶಿಯಲ್‌ ಮೀಡಿಯಾದಲ್ಲಿ ಚರ್ಚೆ ಆಗುತ್ತಿದೆ. ನೂರಾರು ಕೋಟಿ ರೂಪಾಯಿ ಹಾಕಿ ಮಾಡೋ ಸಿನಿಮಾದಲ್ಲಿ ಈ ರೀತಿಯ ತಪ್ಪುಗಳು ಆದರೆ ಪ್ರೇಕ್ಷಕರಿಗೆ ಅದು ಕೋಪ ತರಿಸುತ್ತದೆ. ಇನ್ನು ಕೆಲವು ಶಾಟ್‌ಗಳಿಗೆ ನಿರ್ದೇಶಕ ಎಐ ಮೊರೆ ಹೋಗುತ್ತಾನೆ ಎಂದಾದರೆ ಅಸಲಿ ಸಿನಿಮಾದ ಮಜ ಹೇಗೆ ಸಿಗೋಕೆ ಸಾಧ್ಯ ಎಂಬ ಪ್ರಶ್ನೆ ಮೂಡಿದೆ.

ನಿರ್ದೇಶಕ ಎಚ್‌. ವಿನೋದ್‌ ಅವರು ಜನ ನಾಯಗನ್‌ ನಿರ್ದೇಶನ ಮಾಡಿದ್ದಾರೆ. ಅವರು ರಿಮೇಕ್‌ ಮಾಡೋದ್ರಲ್ಲಿ ಎತ್ತಿದ ಕೈ. ಈ ಮೊದಲು ಕೂಡ ಅವರು ರಿಮೇಕ್‌ ಸಿನಿಮಾಗಳಿಗೆ ನಿರ್ದೇಶನ ಮಾಡಿದ್ದು ಇದೆ. ಆದರೆ, ಅವರು ಕಥೆಯಲ್ಲಿ ಬದಲಾವಣೆಗಳನ್ನು ಮಾಡಿಕೊಂಡಿದ್ದರು. ಆದರೆ, ಇಲ್ಲಿ ಆ ರೀತಿ ಮಾಡಿಲ್ಲ ಎನ್ನಲಾಗುತ್ತಿದೆ. ಕೆವಿಎನ್‌ ಸಂಸ್ಥೆ ನಿರ್ಮಾಣದ ಈ ಚಿತ್ರ ಜನವರಿ 14ರಂದು ರಿಲೀಸ್‌‍ ಆಗುತ್ತಿದೆ.

RELATED ARTICLES

Latest News