ಬೆಂಗಳೂರು, ಜ.8- ರಾಕಿಂಗ್ ಸ್ಟಾರ್ ಯಶ್ ಅವರ 40ನೇ ವರ್ಷದ ಹುಟ್ಟುಹಬ್ಬದ ಸಲುವಾಗಿ ಇಂದು ಬಿಡುಗಡೆಗೊಂಡಿರುವ ಟಾಕ್ಸಿಕ್ ಸಿನಿಮಾದ ಟೀಸರ್ ಅಭಿಮಾನಿಗಳಲ್ಲಿ ಕಿಕ್ಕೇರಿಸಿದೆ.ಇದೇ ಮೊದಲ ಬಾರಿಗೆ ಕೆವಿಎನ್ ಪ್ರೊಡಕ್ಷನ್ಸ್ ಜೊತೆಗೆ ಚಿತ್ರ ನಿರ್ಮಿಸಲು ಯಶ್ ಮುಂದಾಗಿದ್ದರಿಂದ ಟಾಕ್ಸಿಕ್ ಸಿನಿಮಾದ ಬಗ್ಗೆ ಅಭಿಮಾನಿಗಳು ಹಿಂದೆಂದಿಗಿಂತಲೂ ಹೆಚ್ಚಿನ ಕ್ರೇಜ್ ಇತ್ತು.
ಇಂದು ಬಿಡುಗಡೆಗೊಂಡಿರುವ ಚಿತ್ರದ ಟೀಸರ್ ಸಿನಿಮಾದ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ. ಹಾಲಿವುಡ್ ರೇಂಜ್ ನಲ್ಲಿರುವ ಟೀಸರ್ ನಲ್ಲಿ ಯಶ್ (ರಾಯ) ಬೋಲ್ಡ್ ಆ್ಯಂಡ್ ಮಾಸ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದು,`ಡ್ಯಾಡ್ ಈಸ್ ಹೋಮ್’ ಎಂಬ ಖಡಕ್ ಡೈಲಾಗ್ ಸಂಚಲನ ಸೃಷ್ಟಿಸಿದೆ. ಸಶಾನದ ದೃಶ್ಯಗಳಿಂದ ತೆರೆದು ಕೊಳ್ಳುವ ಟೀಸರ್ ನಲ್ಲಿ ಯಶ್ ಭುಜದ ಮೇಲೆ ವಿಭಿನ್ನ ವಿನ್ಯಾಸದ ರೈಫಲ್ ಹಿಡಿದುಕೊಂಡು ಬ್ಲ್ಯಾಕ್ ಆ್ಯಂಡ್ ಬ್ಲ್ಯಾಕ್ ಲುಕ್ ನಲ್ಲಿ ಗಮನ ಸೆಳೆದಿದ್ದಾರೆ. ಬ್ಯಾಕ್ ಲುಕ್ ನಲ್ಲಿ ಶುರುವಾಗೋ ದೃಶ್ಯದಲ್ಲಿ ಯಶ್ ಬೂಟುಗಾಲಿನಿಂದ ಬುಲೆಟ್‌್ಸ ಫೈರ್ ಮಾಡುವ ರೀತಿ ರೋಮಾಂಚನವಾಗಿದೆ.
ಮಲಯಾಳಂ ನಿರ್ದೇಶಕಿ ಗೀತುಮೋಹನ್‌ದಾಸ್ ಆ್ಯಕ್ಷನ್ ಕಟ್ ಹೇಳಿರುವ ಹಾಲಿವುಡ್ ರೇಂಜ್ ನಲ್ಲಿರುವ ಟಾಕ್ಸಿಕ್ ಸಿನಿಮಾವು ಮಾರ್ಚ್ 19ರಂದು ವಿಶ್ವದೆಲ್ಲೆಡೆ ಬಿಡುಗಡೆಯಾಗಲಿದೆ.
ರಾಕಿಂಗ್ ಯಶ್@ 40
ರಾಕಿಂಗ್ ಸ್ಟಾರ್ ಯಶ್ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಟಾಕ್ಸಿಕ್ ಸಿನಿಮಾದಲ್ಲಿ ಬ್ಯುಸಿ ಇರುವ ಕಾರಣ ಈ ಬಾರಿಯೂ ಅಭಿಮಾನಿಗಳನ್ನ ಭೇಟಿ ಮಾಡಲು ಆಗಿಲ್ಲ. ಆ ಬಗ್ಗೆ ಯಶ್ ಅವರೇ ಸ್ಪಷ್ಟನೆಯನ್ನು ನೀಡಿದ್ದಾರೆ. ಆದ್ರೆ ಅಭಿಮಾನಿಗಳು ಮಾತ್ರ ಹಬ್ಬ ಮಾಡ್ತಾ ಇದಾರೆ. ಸೋಷಿಯಲ್ ಮೀಡಿಯಾದಲ್ಲಂತೂ ಯಶ್ ಬರ್ತ್ ಡೇ ಟ್ರೆಂಡಿಂಗ್ ಆಗಿದೆ. ಒಂದು ವಾರಗಳಿಂದಾನೇ ಎಲ್ಲಾ ಕಡೆ ಬ್ಯಾನರ್ ಹಾಕಿ ಸಂಭ್ರಮಿಸ್ತಾ ಇದ್ದಾರೆ. ಬಹುನಿರೀಕ್ಷಿತ ಟಾಕ್ಸಿಕ್ ತಂಡದಿಂದ ಕ್ಯಾರೆಕ್ಟರ್ ಇಂಟ್ರುಡಕ್ಷನ್ ಟೀಸರ್ ಕೂಡ ರಿಲೀಸ್ ಮಾಡಲಾಗಿದೆ. ನೋಡಿದವರು ಹಾಲಿವುಡ್ ರೇಂಜ್‌ನಲ್ಲಿದೆ ಎಂಬ ಚರ್ಚೆ ಶುರು ಮಾಡಿದ್ದಾರೆ.
ನಟ ಯಶ್ ತುಂಬಾನೇ ಕಷ್ಟಪಟ್ಟು ಇಂಡಸ್ಟ್ರಿಯಲ್ಲಿ ಬೆಳೆದವರು. ಆರಂಭದಲ್ಲಿ ಧಾರಾವಾಹಿ ಮೂಲಕ ಗುರುತಿಸಿ ಕೊಂಡ ಯಶ್ ಇಂದು ದೊಡ್ಡ ಸ್ಟಾರ್ ಆಗಿ, ಇಡೀ ಇಂಡಿಯಾವೇ ಕೊಂಡಾಡುವ ನಾಯಕ ನಾಗಿದ್ದಾರೆ. ಜೊತೆಗೆ ಫ್ಯಾಮಿಲಿ ಮ್ಯಾನ್ ಕೂಡ. ಕುಟುಂಬವನ್ನ ಹೇಗೆ ನೋಡಿಕೊಳ್ಳಬೇಕು ಎಂಬುದೆಲ್ಲದರಲ್ಲೂ ಸ್ಪೂರ್ತಿ ಯಶ್.
ಪ್ರಶಾಂತ್ ನೀಲ್ ನಿರ್ದೇಶನದ, ಯಶ್ ನಟನೆಯ ಕೆಜಿಎಫ್ ಸಿನಿಮಾ ಸೂಪರ್ ಹಿಟ್ ಆಯಿತು. ಆ ಬಳಿಕ ಬಂದ ಕೆಜಿಎಫ್-2 ಕೂಡ ಗಮನ ಸೆಳೆಯಿತು. ಈ ಸಿನಿಮಾದ ಕೊನೆಯಲ್ಲಿ ಕೆಜಿಎಫ್-3 ಬಗ್ಗೆ ಘೋಷಣೆ ಮಾಡಲಾಯಿತು. ಇದಕ್ಕಾಗಿ ಅಭಿಮಾನಿಗಳು ಕಾದು ಕುಳಿತುಕೊಳ್ಳುವಂತೆ ಆಯಿತು. ಆದರೆ ಕೆಜಿಎಫ್-3 ಈ ಬಾರಿಯೂ ಘೋಷಣೆಯಾಗಿಲ್ಲ. ಟಾಕ್ಸಿಕ್ ಅಪ್‌ಡೇಟ್ ಬರ್ತಾನೇ ಇದೆ. ಅಭಿಮಾನಿಗಳೆಲ್ಲಾ ಇಂದು ಯಶ್ ಅವರ ಹುಟ್ಟು ಹಬ್ಬ ಆಚರಿಸುತ್ತಾ ಸಂಭ್ರ ಮಿಸ್ತಾ ಇದ್ದಾರೆ.
