ಬೆಂಗಳೂರು: ಡೆವಿಲ್ ಸಿನಿಮಾ ನಾಳೆ ರಾಜ್ಯಾದ್ಯಂತ ಭರ್ಜರಿ ಪ್ರದರ್ಶನ ಕಾಣುವುದಕ್ಕೆ ರೆಡಿಯಾಗಿದೆ. ಕಳೆದ ಒಂದು ವಾರದಿಂದಾನು ಅಭಿಮಾನಿಗಳು ಹಬ್ಬ ಮಾಡ್ತಾ ಇದ್ದಾರೆ. ಎಲ್ಲಾ ಥಿಯೇಟರ್ ಬಳಿಯೂ ಕಟೌಟ್ ಗಳನ್ನ ನಿಲ್ಲಿಸಿದ್ದಾರೆ, ಹಾಲಿನ ಅಭಿಷೇಕ ಮಾಡ್ತಿದ್ದಾರೆ, ಹೂವಿನ ಹಾರಗಳನ್ನ ಹಾಕಿದ್ದಾರೆ, ನಾನ್ ವೆಜ್ ಊಟವನ್ನು ನೀಡ್ತಾ ಇದ್ದಾರೆ. ಇದೆಲ್ಲದರ ನಡುವೆ ದರ್ಶನ್, ಸೆಲೆಬ್ರಿಟಿಗಳಿಗೆ ಒಂದು ಗುಡ್ ನ್ಯೂಸ್ ಸಿಕ್ಕಿದೆ. ಅದೇನಂದ್ರೆ ವಿಜಯಲಕ್ಷ್ಮೀ ದರ್ಶನ್ ಅವರು ಬೆಳಗ್ಗೆ ಕೂತು ಫ್ಯಾನ್ಸ್ ಶೋ ನೋಡಲಿದ್ದಾರೆ. ಅದು ಎಲ್ಲಿ, ಎಷ್ಟು ಗಂಟೆಗೆ ಎಂಬ ಮಾಹಿತಿಗಾಗಿ ಮುಂದೆ ಓದಿ.
ದರ್ಶನ್ ಎರಡನೇ ಬಾರಿ ಸೆರೆವಾಸಕ್ಕೆ ಹೋದಾಗ ಸಿನಿಮಾ ರಿಲೀಸ್ ಬಗ್ಗೆ ಸಾಕಷ್ಟು ಚರ್ಚೆಗಳು ತಂಡದ ಜೊತೆಗೆ ಹಾಗೂ ಕುಟುಂಬದ ಜೊತೆಗೆ ನಡೆದಿದೆ. ದರ್ಶನ್ ಜೊತೆಗೆ ಸದಾ ನಿಂತಿರುವುದು ವಿಜಯಲಕ್ಷ್ಮೀ ದರ್ಶನ್. ಈಗ ಸಿನಿಮಾದ ಜೊತೆ ಜೊತೆಗೂ ನಿಂತಿರುವುದು ಅವರೇ. ಸಿನಿಮಾದ ಪ್ರಚಾರವನ್ನ ವಿಜಯಲಕ್ಷ್ಮೀ ಹಾಗೂ ದಿನಕರ್, ಧನ್ವೀರ್, ರಚಿತಾ ರಾಮ್ ಮಾಡ್ತಾ ಇದ್ದಾರೆ. ದರ್ಶನ್ ಅನುಪಸ್ಥಿತಿಯಲ್ಲಿ ವಿಜಯಲಕ್ಷ್ಮೀ ಫ್ಯಾನ್ಸ್ ಜೊತೆಗೆ ನಿಂತಿದ್ದಾರೆ. ಅದರ ಭಾಗವಾಗಿಯೇ ಫ್ಯಾನ್ಸ್ ಜೊತೆ ಕೂತು ಸಿನಿಮಾ ನೋಡಲಿದ್ದಾರೆ.
ನಾಳೆ ಬೆಳಗ್ಗೆ 6 ಗಂಟೆಯಿಂದಾನೇ ಡೆವಿಲ್ ಅಬ್ಬರಿಸಲಿದ್ದಾರೆ. ಮೊದಲ ಶೋ ಫ್ಯಾನ್ಸ್ ಗಳಿಗಾಗಿ. ನರ್ತಕಿ ಥಿಯೇಟರ್ ನಲ್ಲಿ ಪ್ಯಾನ್ಸ್ ಶೋ ಅರೆಂಜ್ ಮಾಡಲಾಗಿದ್ದು, ವಿಜಯಲಕ್ಷ್ಮೀ ಅವರು ನರ್ತಕಿಯಲ್ಲಿ ಶೋ ವೀಕ್ಷಿಸಲಿದ್ದಾರೆ. ಬಳಿಕ ಫ್ಯಾನ್ಸ್ ಉದ್ದೇಶಿಸಿ ಮಾತನಾಡಲಿದ್ದಾರೆ.
