Friday, November 22, 2024
Homeರಾಜಕೀಯ | Politicsಬಿ.ವೈ.ರಾಘವೇಂದ್ರ ಅವರನ್ನು ಬಂಧಿಸುವಂತೆ ಚುನಾವಣಾ ಆಯೋಗಕ್ಕೆ ಈಶ್ವರಪ್ಪ ದೂರು

ಬಿ.ವೈ.ರಾಘವೇಂದ್ರ ಅವರನ್ನು ಬಂಧಿಸುವಂತೆ ಚುನಾವಣಾ ಆಯೋಗಕ್ಕೆ ಈಶ್ವರಪ್ಪ ದೂರು

ಬೆಂಗಳೂರು,ಮೇ14- ಶಿವಮೊಗ್ಗ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಅವರನ್ನು ಬಂಧಿಸಬೇಕೆಂದು ಒತ್ತಾಯಿಸಿ ಪಕ್ಷೇತರ ಅಭ್ಯರ್ಥಿ ಕೆ.ಎಸ್‌‍.ಈಶ್ವರಪ್ಪ ಅವರು ರಾಜ್ಯ ಚುನಾವಣಾ ಆಯೋಗಕ್ಕೆ ಇಂದು ದೂರು ನೀಡಿದ್ದಾರೆ.

ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿವಮೊಗ್ಗ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಅವರು, ಚುನಾವಣೆಯ ಹಿಂದಿನ ದಿನ ಫೇಕ್‌ ವಿಡಿಯೋವನ್ನು ಬಿಡುಗಡೆ ಮಾಡಿದ್ದಾರೆ. ವಿಡಿಯೋದಲ್ಲಿ ನಾನು ಕಳೆದ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಪರ ಮಾಡಿದ್ದೆ. ನಾನು ಚುನಾವಣಾ ಆಖಾಡದಿಂದ ಹಿಂದೆ ಸರಿಯುತ್ತಿದ್ದೇನೆ ಎಂದು ಹೇಳಲಾಗಿದೆ. ಹೀಗಾಗಿ, ರಾಘವೇಂದ್ರ ವಿರುದ್ಧ ದೂರು ನೀಡಲಾಗಿದೆ ಎಂದು ತಿಳಿಸಿದರು.

ಕಳೆದ ಚುನಾವಣೆಯಲ್ಲಿ ನಾನು ಮಾಡಿದ ಪ್ರಚಾರವನ್ನೇ ಈಗ ಮಾಡಿರುವಂತೆ ಬಿಂಬಿಸಿ ವಿಡಿಯೋ ಬಿಡುಗಡೆ ಮಾಡಿದ್ದಾರೆ. ಚುನಾವಣೆಯಲ್ಲಿ ಸೋಲುತ್ತೇವೆ ಎಂಬ ಭಯದಿಂದ ಬಿ.ವೈ.ರಾಘವೇಂದ್ರ ಅವರು ನನ್ನದು ಮತ್ತು ನರೇಂದ್ರಮೋದಿ ಅವರ ಭಾವಚಿತ್ರವಿರುವ ಫೇಕ್‌ ವಿಡಿಯೋವನ್ನು ಬಿಡುಗಡೆ ಮಾಡಿದ್ದಾರೆ. ಇದು ಪ್ರಜಾಪ್ರಭುತ್ವಕ್ಕೆ ಮಾಡಿರುವ ದ್ರೋಹ ಎಂದು ಹೇಳಿದರು.

ಈಗ ನಡೆದಿರುವ ಚುನಾವಣೆಗೂ, ಬಿಡುಗಡೆ ಮಾಡಿರುವ ವಿಡಿಯೋಗೂ ಸಂಬಂಧವಿಲ್ಲ. ನಾನು ಜೀವನದಲ್ಲಿ ಇಂತಹ ತಪ್ಪು ಮಾಡುವುದಿಲ್ಲ ಎಂದು ನಾನು ಹೇಳಿದ ಹಾಗೇ ಮಾಡಿದ್ದಾರೆ. ನಾನು ಕುಟುಂಬ ರಾಜಕಾರಣದಿಂದ ಹೊರಗೆ ಬರಬೇಕು, ಹಿಂದುತ್ವ ಪ್ರತಿಪಾದಿಸಿ ಸ್ಫರ್ಧಿಸಿದ್ದೇ, ಈಶ್ವರಪ್ಪ ಹಿಂದೆ ಸರಿದಿದ್ದಾರೆ. ನನಗೆ ಬೆಂಬಲಿಸಿದ್ದಾರೆ ಎಂದು ಅಪಪ್ರಚಾರ ಮಾಡಿದ್ದಾರೆ.ಇದು ಷಡ್ಯಂತ್ರ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮಹಾರಾಷ್ಟ್ರ ಮಾದರಿಯಲ್ಲಿ ಸರ್ಕಾರ ರಚನೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಡಿಸಿಎಂ ಶಿವಕುಮಾರ್‌ ಇದಕ್ಕೆ ಉತ್ತರ ಕೊಡಬೇಕು. ಅವರು ಟೊಳ್ಳು ಇದ್ದಾರೋ, ಗಟ್ಟಿ ಇದ್ದಾರೋ ಅವರೇ ಉತ್ತರ ಕೊಡಬೇಕು. ಮುಖ್ಯಮಂತ್ರಿ ಆಗುವುದು ಒಕ್ಕಲಿಗರು, ಕುರುಬರು ಮಾಡುತ್ತಾರಾ? ಜಾತಿ ರಾಜಕಾರಣ ಮಾಡುತ್ತಿರುರೋ, ಸರ್ಕಾರ ಮುಂದುವರೆಸುತ್ತಾರಾ? ನಾಳೆ ಸರ್ಕಾರ ಏನಾಗುತ್ತೆ ಗೊತ್ತಿಲ್ಲ. ನಾನು ಭವಿಷ್ಯಕಾರ ಅಲ್ಲ. ಅಶೋಕ್‌‍, ಕುಮಾರಸ್ವಾಮಿ ಹೇಳಿಕೆ ನಾನು ಪ್ರತಿಕ್ರಿಯೆ ನೀಡಲ್ಲ ಎಂದರು.

ಹಾಸನ ಪೆನ್‌ಡ್ರೈವ್‌ ಪ್ರಕರಣ ಸಂಬಂಧ ಮಾತನಾಡಿದ ಅವರು, ಸಿದ್ಧರಾಮಯ್ಯ, ಡಿಕೆಶಿ, ಕುಮಾರಸ್ವಾಮಿ, ರೇವಣ್ಣ ಅವರು ಹೆಣ್ಣನ್ನು ತಾಯಿ ಅಂತಾರೆ. ಹೆಣ್ಣನ್ನು ಮುಂದೆ ಇಟ್ಟುಕೊಂಡು ಇಷ್ಟೆಲ್ಲಾ ಮಾಡಿರುವುದು ಅಸಹ್ಯ. ಈ ಪ್ರಕರಣ ಸಿಬಿಐಗೆ ಕೊಡಬೇಕು ಎಂದರು.

ಜಗದೀಶ್‌ ಶೆಟ್ಟರ್‌ ಅವರನ್ನು 6 ವರ್ಷ ಉಚ್ಚಾಟನೆ ಅಂದರು ಯಡಿಯೂರಪ್ಪ ಅವರ ಮನೆಗೆ ಹೋಗಿ ಕರೆದುಕೊಂಡು ಬಂದು ಸೀಟು ಕೊಟ್ಟರು. ಈ ಉಚ್ಛಾಟನೆ ನಾನು ಲೆಕ್ಕಕ್ಕೇ ಇಟ್ಟುಕೊಂಡಿಲ್ಲ. ನಾನು ಮೋದಿ ಪರ ಕೈ ಎತ್ತುತ್ತೇನೆ. ರಾಘವೇಂದ್ರ ಲಿಂಗಾಯತರ ಹೆಸರಲ್ಲಿ ಓಟು ಕೇಳಿದರು ಮಧು ಬಂಗಾರಪ್ಪ ಈಡಿಗರ ಹೆಸರಲ್ಲಿ ಓಟು ಕೇಳಿದರು ನಾಚಿಕೆ ಆಗಬೇಕು ಇವರಿಗೆ.ಜಾತಿ ಹೆಸರಿನಲ್ಲಿ ಮತ ಕೇಳಿದ್ದಕ್ಕೆ ಎಂದು ತರಾಟೆಗೆ ತೆಗೆದುಕೊಂಡರು.

ಈ ಬಾರಿ ಮುಸ್ಲಿಂರು ಒಂದಾಗಿ ಅತಿ ಹೆಚ್ಚು ಮತಗಳನ್ನು ಚಲಾಯಿಸಿದ್ದಾರೆ. ಜಾತಿ ಹೆಸರಿನಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌‍ ನಾಯಕರು ರಾಜಕಾರಣ ಮಾಡುತ್ತಿದ್ದಾರೆ. ಇದರಿಂದ ಮುಸ್ಲಿಂರು ಒಂದಾಗಿದ್ದಾರೆ. ಹಿಂದು ಸಮಾಜ ಎಚ್ಚೆತ್ತಕೊಳ್ಳಬೇಕು. ಮುಂದಿನ ದಿನಗಳಲ್ಲಿ ನಮ ಹಿಂದು ಸಮಾಜ ಒಂದಾಗುವ ವಿಶ್ವಾಸ ನನಗಿದೆ ಎಂದರು.

RELATED ARTICLES

Latest News