ಬೆಂಗಳೂರು.ಬಿ.12- ಪಕ್ಷ ವಿರೋಧಿ ಚಟುವಟಿಕೆ ಆರೋಪದ ಮೇಲೆ ಬಿಜೆಪಿಯ ಪ್ರಾಥಮಿಕ ಸದಸ್ಯತ್ವದಿಂದಲೇ ಆರು ವರ್ಷಗಳ ಕಾಲ ಉಚ್ಚಾಟನೆಗೊಂಡಿರುವ ವಿಜಾಪುರ ಶಾಸಕ ಬಸನಗೌಡ ಪಾಟೀಲ್ ಯುತ್ನಾಳ್ ಒಬ್ಬಂಟಿಯಾದರೆ? ಅಥವಾ ಅವರನ್ನು ಬೆಂಬಲಿಸಿದವರೆಲ್ಲ ಈಗ ನಡು ನೀರಲ್ಲಿ ಕೈ ಬಿಟ್ಟರೆ? ಇಂತಹ ಪ್ರಶ್ನೆಗಳು ಮೂಡಲು ಕಾರಣ, ಇತ್ತೀಚಿನ ಕೆಲವು ಬೆಳವಣಿಗೆಗಳನ್ನು ಗಮನಿಸಿದರೆ ಹಿಂದೂ ಹುಲಿ ಎಂದು ಅರ್ಭಟಿಸುತ್ತಿದ್ದ ಯತ್ನಾಳ್ ಸದ್ಯ ಏಕಾಂಗಿ ವಿಜಯದಶಮಿ ವೇಳೆಗೆ ಹಿಂದು ಸಿದ್ಧಾಂತ ಹೊಂದಿರುವ ಹೊಸ ಪ್ರಾದೇಶಿಕ ಪಕ್ಷ ಸ್ಥಾಪಿಸುವ ಘೋಷಣೆ ಮಾಡಿದ್ದಾರೆ. ಅವರ ಬೆನ್ನಿಗೆ ಪಂಚಮಸಾಲಿ ಸಮುದಾಯದ ಬಸವ ಮತ್ತುಯಿಯ ಸ್ವಾಮೀಜಿ ನಿಂತಿದ್ದು ಉಚ್ಚಾಟನೆ ಕ್ರಮದ ವಿರುದ್ಧ ರಾಜ್ಯ ವ್ಯಾಪ್ತಿ ಪ್ರತಿಭಟನೆಗೆ ಕರೆ ಕೊಟ್ಟಿದ್ದಾರೆ.
ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ ನೋಡಿದರೆ ಈವರೆವಿಗೆ ಅವರನ್ನು ಬೆಂಬಲಿಸಿಕೊಂಡು ಬಂದಿದ್ದ ಬಿಜೆಪಿಯ ಶಾಸಕರಾದ ರಮೇಶ ಜಾರಕಿಹೊಳಿ, ಹರೀಶ್ ಮಾಜಿ ಸಚಿವರಾದ ಕುಮಾರ ಬಂಗಾರಪ್ಪ, ಅರವಿಂದ ಲಿಂಬಾವಳಿ ಹೊರತುಪಡಿಸಿದರೆ ಉಳಿದವರು ರಾಜಕಾರಣದಲ್ಲಿ ಅಧಿಕಾದ ಅವಕಾಶಳಿಗಾಗಿ ಪಕ್ಷ ಬದಲಾಯಿಸುತ್ತಾ ಬಂದವರು.
ಮತ್ತಿತರರ ಮುಂದಿನ ನಿಲುವು ಏನು? ಎಂಬುದೇ ಸದ್ಯದ ಕುತೂಹಲ, ಈ ಪೈಕಿ ಲಿಂಬಾವಳಿ ಅವರು ಭವಿಷ್ಯದ ದಿನಗಳಲ್ಲಿ ಅಧಿಕಾರ ವಂಚಿತರಾಗಿ ಕೊಡುವಷ್ಟು ಹಾಳೆ ಹೊಂದಿದವರಲ್ಲ, ಅವರಿಗೆ ಅಧಿಕಾರ ಹಿಡಿಯುವುದೇ ಸಿದ್ಧಾಂತ ಆಗಿರುವುದರಿಂದ ಮತ್ತು ರಾಜಕೀಯವಾಗಿಯೂ ಬಹು ದೊಡ್ಡ ಶಕ್ತಿ ಅಥವಾದ್ದರಿಂದ ಬಿಜೆಪಿ ಅವರ ವಿಚಾರಗಳನ್ನು ಗಂಭಿರವಾಗಿ ಪರಿಗಣಿಸುವ ಸಾಧ್ಯತೆಗಳು ಕಡಿಮೆ.
ಇನ್ನುಳಿದಂತೆ ಅರವಿಂದ ಲಿಂಬಾವಳ ಏನೇ ಅಸಮಾಧಾನ ಹೊಂದಿದ್ದರೂ ಅವರು ಮೂಲತಃ ಸಂಘ ಪರಿವಾರದ ಹಿನ್ನಲೆಯಿಂದ ಬಂದಿರುವುದರಿಂದ ಸದ್ಯಕ್ಕೆ ಅವರನ್ನು ಬಿಜೆಪಿ ವರಿಷ್ಠರು ಕಣ್ಣಗೆ ಮಾಡಬಹುದು. ಅದು ಹೊರತು ಪಡಿಸಿದರೆ ಸದ್ಯದ ಸ್ಥಿತಿಯಲ್ಲಿ ರಾಜ್ಯ ರಾಜಕಾರಣದ ಮೇಲೆ ಈ ವಿದ್ಯಮಾನ ಮಹತ್ವ ಪರಿಣಾಮವನ್ನೇನೂ ಬೀರದು.
ಯತ್ನಾಳ್ ಉಚ್ಚಾಟನೆ ವಿರೋಧಿಸಿ ಪಂಚಮಸಾಲಿ ಸಮುದಾಯದ ಮಠಾಧೀಕ ಬಸವಜಯಮ್ಮ ತುಜಯ ಸ್ವಾಮೀಜಿ ಪ್ರತಿಭಟನೆಗೆ ಕರೆ ಕೊಟ್ಟಿರುವುದಕ್ಕೆ ಸಮುದಾಯದ ಇತರ ಮುಖಂಡರಲ್ಲೇ ಅಸಮಾಧಾನ ವ್ಯಕ್ತವಾಗಿದೆ.
ಕಾರಣ ಕಾಂಗ್ರೆಸ್ ಸೇರಿದಂತೆ ವಿವಿಧ ಪಕ್ಷಗಳಲ್ಲೂ ಈ ಸಮುದಾಯದ ಹಲವು ಮುಖಂಡರು ವಿವಿಧ ಅಧಿಕಾರ ಸ್ಥಾನಗಳಲ್ಲಿರುವುದರಿಂದ ಒಬ್ಬ ವ್ಯಕ್ತಿಯ ಪರವಾದ ಈ ಪ್ರತಿಭಟನಿಗೆ ಇಡೀ ಸಮುದಾಯ ಒಟ್ಟಾಗಿ ಸ್ಪಂದಿಸುವ ಸಾಧ್ಯತೆಗಳು, ಇನ್ನು ಸದ್ಯದ ಪರಿಸ್ಥಿತಿಯಲ್ಲಿ ರಾಜ್ಯದ ರಾಜಕೀಯ ವಿದ್ಯಮಾನಗಳನ್ನು ಬದಲಾಯಿಸುವ ಯಾವುದೇ ಸಾರ್ವತ್ರಿಕ ಚುನಾವಣೆ ಇಲ್ಲ, ಜಿಲ್ಲಾ ತಾಲ್ಲೂಕು ಪಂಚಾಯ್ತಿ ಸಂಸ್ಥೆಗಳಿಗೆ ಚುನಾವಣೆ ನಡೆಸುವುದಾಗಿ ರಾಜ್ಯ ಸರ್ಕಾರ ಹೇಳುತ್ತಿದೆಯಾದರೂ ಅದಿನ್ನೂ ನಿಖರವಾಗಿ ನಿಗದಿಯಾಗಿಲ್ಲ.
ಮೇಲಾಗಿ ಕ್ಷೇತ್ರಗಳ ಪುನರ್ ವಿಂಗಡಣೆ, ಮೀಸಲಾತಿ ಕುರಿತಾದ ಸಮಸ್ಯೆಗಳೇ ಇನ್ನೂ ಬಗೆಹರಿದಿಲ್ಲ, ಹೀಗಾಗಿ ಸರ್ಕಾರ ಯಾವಾಗ ಈ ಸಂಸ್ಥೆಗಳಿಗೆ ಚುನಾವಣೆ ನಡೆಸುತ್ತದೆ ಎಂಬುದನ್ನು ಇನ್ನೂ ನಿರ್ಧರಿಸಿಲ್ಲ, ಆಡಳಿತ ಕಾಂಗ್ರೆಸ್ ಪಕ್ಷದಲ್ಲಿ ಅಧಿಕಾರ ಹಂಚಿಕೆಗೆ ಸಂಬಂಧಿಸಿದಂತೆ ಇರುವ ಅಂತರಿಕ ಭಿನ್ನಾಭಿಪ್ರಾಯಗಳು ಆಗಾಗ್ಗೆ ಬಹಿರಂಗವಾಗಿ ಪರ- ವಿರೋಧ ಚರ್ಚೆಗಳಿಂದ ವಿವಾದದ ಕಿಡಿ ಹಾರುತ್ತಿವೆಯಾದರೂ ಅದು ಸರ್ಕಾರದ ಅಸ್ತಿತಕ್ಕೆ ಧಕ್ಕೆ ತರುವಷ್ಟರ ಮಟ್ಟಿಗೆ ಪ್ರಬಲವಾಗಿಲ್ಲ, ಸದ್ಯದ ಪರಿಸ್ಥಿತಿಯಲ್ಲಿ ಸರ್ಕಾರವನ್ನು ಕಳೆದುಕೊಳ್ಳುವ ಮನೋಸ್ಥಿತಿಯಲ್ಲಿ ಕಾಂಗ್ರೆಸ್ನ ಯಾವೊಬ್ಬ ಮುಖಂಡರೂ, ಶಾಸಕರೂ, ಮಂತ್ರಿಗಳೂ ಇಲ್ಲ. ಹೀಗಾಗಿ ಕಾಂಗ್ರೆಸ್ ಸದ್ಯಕ್ಕೆ ರಾಜ್ಯದಲ್ಲಿ ಭದ್ರವಾಗಿ ನೆಲೆಯೂರಿದೆ.
ಈ ದೃಷ್ಟಿಯಿಂದ ನೋಡಿದರೆ ಯಾವುದೇ ಒಂದು ಜಾತಿಯ ಬೆಂಬಲದಿಂದ ರಾಜಕೀಯ ಪ್ರಾಗಳು ಬಹುಮತ ಗಳಿಸಿ ಅಧಿಕಾರಕ್ಕೆ ಬಂದ ಉದಾಹರಣೆಗಳು ಇಲ್ಲ.
ಪಂಚಮಸಾಲಿ ಸಮುದಾಯ ಹೊರತುಪಡಿಸಿ ಇತರ ಸಮುದಾಯಗಳಲ್ಲಿ ಯತ್ನಾಳ್ ಯಾವ ರೀತಿ ತಮ್ಮ ಅನಿವಾರ್ಯತೆಯನ್ನು ಮೂಡಿಸುತ್ತಾರೆ ಎಂಬುದನ್ನು ಮುಂದಿನ ದಿನಗಳಲ್ಲಿ ಕಾದು ನೋಡಬೇಕು. ಕಸ ಅವರ ಜತೆಗಿರುವ ಹಿಂದುಳಿದ ವರ್ಗಗಳ ಮುಖಂಡರಾದ ಕುಮಾರ್ ಬಂಗಾರಪ್ಪ, ರಮೇಶ್ ಜಾರಕಿಹೊಳಿ ಮತ್ತಿತರರಿಗೆ ರಾಜಕೀಯವಾಗಿ ಬೇರೆ ಆಯ್ಕೆಗಳಿಲ್ಲ.
ಹೀಗಾಗಿ ಅವರು ಬಿಜೆಪಿಯಲ್ಲಿ ಇದ್ದು ಯತ್ನಾಳ್ ಅವರನ್ನು ಮಾನಸಿಕವಾಗಿ ಬೆಂಬಲಿಸುವ ಸಾಧ್ಯತೆಗಳೇ ಜಾಸ್ತಿ. ಆದರೆ ಅಧಿಕಾರವೆ ಪ್ರಧಾನವಾಗಿರುವ ಈಗಿನ ರಾಜಕೀಯ ವ್ಯವಸ್ಥೆಯಲ್ಲಿ ಪೈಯಕ್ತಿಕ ಗೆಳೆತನ ರಾಜಕೀಯ ಬೆಂಬಲವಾಗಿ ದೀರ್ಘಾವಧಿಯವರೆಗೆ ಉಳಿಯುವ ಸಾಧ್ಯತೆಗಳು ಇಲ್ಲವೇ ಇಲ್ಲ. ಹೀಗಾಗಿ ಮುಂದಿನ ದಿನಗಳಲ್ಲಿ ಯತ್ನಾಳ್ ರಾಜಕೀಯವಾಗಿ ಒಂಟಿ ಆಗುವ ಅಪಾಯಗಳೂ ಇವೆ.
ಇನ್ನು ಹಿಂದುತ್ವದ ಸಿದ್ಧಾಂತವನ್ನು ಮುಂದಿಟ್ಟುಕೊಂಡು ಪ್ರಾದೇಶಿಕ ಪಕ್ಷ ಕಟ್ಟಲು ಹೊರಟಿರುವ ಯತ್ನಾಳ್ ಅವರಿಗೆ ಬಿಜೆಪಿಯ ಮಾಜಿ ನಾಯಕ ಕೆ.ಎಸ್.ಈಶ್ವರಪ್ಪ ಅಡ್ಡಿಯಾಗಿದ್ದಾರೆ. ಯಡಿಯೂರಪ್ಪ ಮತ್ತು ಅವರ ಕುಟುಂಬದ ವಿರುದ್ಧ ಸಿಡಿದೆದ್ದು ಕಳಗಾಗಲೇ ತಮ್ಮದೇ ಆದ ಸಂಗೊಳ್ಳಿರಾಯಣ್ಣ, ಚೆನ್ನಮ್ಮ ಬ್ರಿಗೇಡ್ ಸ್ಥಾಪಿಸಿ ಹೋರಾಟಕ್ಕಿಳದಿರುವ ಅವರು ಉತ್ತರ ಕರ್ನಾಟಕದಲ್ಲಿ ಹಿಂದುಳಿದ ವರ್ಗಗಳ ಸಂಘಟನೆಗೆ ಹೆಚ್ಚು ಒತ್ತು ನೀಡುತ್ತಿದ್ದಾರೆ. ಇದೇ ಹಿಂದುತ್ವದ ಸಿದ್ಧಾಂತವನ್ನೇ ಅವರು ತಮ್ಮ ಗುರಿಯಾಗಿಸಿಕೊಂಡಿರುವುದರಿಂದ ಅಲ್ಲೂ ಯತ್ನಾಳ್ ಹಿನ್ನಡೆ ಅನುಭವಿಸುವ ಸಾಧ್ಯತೆಗಳು ಜಾಸ್ತಿ.