ಬೆಂಗಳೂರು,ನ.9- ಹಿಂದೂ ಧರ್ಮವನ್ನು ಈಗಲೂ ನೋಂದಣಿ(ರಿಜಿಸ್ಟ್ರೇಷನ್) ಮಾಡಿಲ್ಲ. ಅದೇ ರೀತಿ ನಾವು ಕೂಡ ಸಂಘದ ನೋಂದಣಿ ಮಾಡಿಸಿಕೊಂಡಿಲ್ಲ ಎಂದು ಆರ್ಎಸ್ಎಸ್ ಸರಸಂಚಾಲಕ ಮೋಹನ್ ಭಾಗವತ್ ತಮ ನಿರ್ಧಾರವನ್ನು ಬಲವಾಗಿ ಸಮರ್ಥಿಸಿಕೊಂಡರು. ಆರ್ಎಸ್ಎಸ್ ಶತಮಾನೋತ್ಸವದ ಹಿನ್ನೆಲೆಯಲ್ಲಿ ಹೊಸಕೆರೆಹಳ್ಳಿಯ ಪಿಇಎಸ್ ಕಾಲೇಜು ಸಭಾಂಗಣದಲ್ಲಿ ನಡೆದ ಸಂವಾದದಲ್ಲಿ ಸಭಿಕರಿಂದ ತೂರಿಬಂದ ಹಲವಾರು ಪ್ರಶ್ನೆಗಳಿಗೆ ಸಹನೆಯಿಂದಲೇ ಭಾಗವತ್ ಉತ್ತರಿಸಿದರು.
ಆರ್ಎಸ್ಎಸ್ ಶತಮಾನೋತ್ಸವ ಆಚರಿಸುತ್ತಿರುವ ಸಂದರ್ಭದಲ್ಲಿ ನೀವು ನಿಮ ಸಂಘವನ್ನು ಇದುವರೆಗೂ ಏಕೆ ಅಧಿಕೃತವಾಗಿ ನೋಂದಣಿ ಮಾಡಿಕೊಂಡಿಲ್ಲ ಎಂದು ಸಭಿಕರೊಬ್ಬರು ಪ್ರಶ್ನೆ ಮಾಡಿದರು.
ಇದಕ್ಕೆ ಉತ್ತರಿಸಿದ ಭಾಗವತ್, ಆರ್ಎಸ್ಎಸ್ ಸ್ಥಾಪನೆಯಾಗಿದ್ದು, 1925ರಲ್ಲಿ. ಆಗ ದೇಶವನ್ನು ಬ್ರಿಟಿಷರು ಆಳುತ್ತಿದ್ದರು. ಅವರ ಬಳಿ ನಾವು ಆರ್ಎಸ್ಎಸ್ನ್ನು ನೋಂದಣಿ ಮಾಡಿಸಿಕೊಳ್ಳಬೇಕಿತ್ತೇ? ನೀವು ಅದನ್ನು ನಿರೀಕ್ಷೆ ಮಾಡುತ್ತೀರಾ? ನಾವು ಬ್ರಿಟಿಷರ ವಿರುದ್ದ ಹೋರಾಟ ನಡೆಸಿದ್ದೆವು. ಸ್ವಾತಂತ್ರ್ಯ ಬಂದ ನಂತರವು ಸಂಘಗಳನ್ನು ನೋಂದಣಿ ಮಾಡಬೇಕೆಂಬ ಕಡ್ಡಾಯವಿಲ್ಲ ಎಂದು ಪ್ರತಿಪಾದಿಸಿದರು.
ಸ್ವತಂತ್ರ ಬಂದ ನಂತರವೂ ನಾವು ನೋಂದಣಿ ಕಡ್ಡಾಯ ಮಾಡಿಲ್ಲ. ಯಾರು ಏನೇ ಹೇಳಲಿ ನಮದು ಸ್ವತಂತ್ರ ಹಾಗೂ ಕಾನೂನಾತಕವಾಗಿ ಸಂಸ್ಥೆಯಾಗಿ ದೇಶದ ಸಂವಿಧಾನದಡಿಯೇ ಕೆಲಸ ಮಾಡುತ್ತದೆ. ಹೀಗಾಗಿ ನೋಂದಣಿ ಮಾಡಿಸಿಲ್ಲ. ಅಷ್ಟೇ ಏಕೆ ಹಿಂದೂ ಧರ್ಮ ಈಗಲೂ ಎಲ್ಲಾದರೂ ನೋಂದಣಿಯಾಗಿದೆಯೇ ಎಂದು ಮರು ಪ್ರಶ್ನೆ ಮಾಡಿದರು.
ದೇಶದಲ್ಲಿ ಮೂರು ಬಾರಿ ಆರ್ಎಸ್ಎಸ್ ನಿಷೇಧಕ್ಕೆ ಒಳಪಟ್ಟಿತ್ತು. ಮಹಾತ ಗಾಂಧಿ ಹತ್ಯೆ ಪ್ರಕರಣ, ತುರ್ತು ಪರಿಸ್ಥಿತಿ ಮತ್ತು ಅಯೋಧ್ಯೆಯಲ್ಲಿ ಬಾಬ್ರಿ ಮಸೀದಿ ಧ್ವಂಸ ಮಾಡಿದಾಗ ನಿಷೇಧ ಹೇರಲಾಗಿತ್ತು. ಆದರೆ ಈ ಮೂರು ಪ್ರಕರಣಗಳಲ್ಲಿ ಆರ್ಎಸ್ಎಸ್ ಕೈವಾಡ ಇಲ್ಲದಿರುವುದು ಸಾಬೀತಾಗಿದ್ದರಿಂದ ನ್ಯಾಯಾಲಯ ಕೂಡ ಮಧ್ಯಪ್ರವೇಶ ಮಾಡಲಿಲ್ಲ ಎಂದು ಹೇಳಿದರು. ನಮದು ಸಾಂವಿಧಾನಿಕ ಸಂಸ್ಥೆಯಾಗಿದ್ದು, ನಾವು ಕಾಲ ಕಾಲಕ್ಕೆ ತೆರಿಗೆ ಕಟ್ಟುತ್ತೇವೆ. ಗುರುದಕ್ಷಿಣೆ ಹೊರತಾಗಿ ಆದಾಯ ತೆರಿಗೆ ಇಲಾಖೆ ತೆರಿಗೆ ಕಟ್ಟಲು ಸೂಚಿಸಿದೆ. ಎಲ್ಲವೂ ದಾಖಲೆಯಲ್ಲಿ ಇವೆ ಎಂದು ತಿಳಿಸಿದರು.
ನಾವು ನಿಷೇಧಕ್ಕೆ ಒಳಗಾಗಿದ್ದೇವೆ ಎಂದರೆ ಸರ್ಕಾರ ನಮನ್ನು ಗುರುತಿಸಿದೆ ಎಂದರ್ಥ. ನಾವು ಇಲ್ಲಿ ಇಲ್ಲದಿದ್ದರೆ ಯಾರು ತಾನೇ ಗುರುತಿಸುತ್ತಾರೆ? ನಮದು ವ್ಯಕ್ತಿತ್ವ ಸಮಗ್ರ ಭಾರತ ಧರ್ಮ ರಕ್ಷಣೆಯ ಕಲ್ಪನೆಯ ತಳಹದಿಯ ಮೇಲೆ ಕಾರ್ಯ ನಿರ್ವಹಿಸುತ್ತದೆ. ನಾವು ಯಾವುದೇ ಒಂದು ಧರ್ಮ ಜಾತಿಯನ್ನು ಗುರಿಯಾಗಿಟ್ಟುಕೊಂಡಿಲ್ಲ ಎಂದು ಸ್ಪಷ್ಟಪಡಿಸಿದರು. ಭಾರತದಲ್ಲಿ ಅಹಿಂದು (ಹಿಂದೂ ಅಲ್ಲದವರು) ಇಲ್ಲ. ಪ್ರತಿಯೊಬ್ಬ ನಾಗರಿಕರೂ ಒಂದೇ ಪೂರ್ವಜರಿಂದ ಬಂದವರು ಮತ್ತು ಹಿಂದೂ ನಾಗರಿಕತೆಯಲ್ಲಿ ಬೇರೂರಿರುವ ಸಾಮಾನ್ಯ ಸಾಂಸ್ಕೃತಿಕ ಅಡಿಪಾಯವನ್ನು ಹಂಚಿಕೊಳ್ಳುತ್ತಾರೆ. ಆರ್ಎಸ್ಎಸ್ ಅಧಿಕಾರ ಅಥವಾ ರಾಜಕೀಯ ಪ್ರಾಬಲ್ಯವನ್ನು ಬಯಸುವುದಿಲ್ಲ ಆದರೆ ಭಾರತ ಮಾತೆಯ ವೈಭವಕ್ಕಾಗಿ ಹಿಂದೂ ಸಮಾಜವನ್ನು ಸಂಘಟಿಸುವ ಗುರಿ ಹೊಂದಿದೆ ಎಂದು ಹೇಳಿದರು.
ಸನಾತನ ಧರ್ಮ ಮತ್ತು ಭಾರತ ಬೇರ್ಪಡಿಸಲಾಗದಷ್ಟು ಅವಿನಾಭಾವ ಸಂಬಂಧವಿದೆ. ಸನಾತನ ಧರ್ಮದ ಪ್ರಗತಿಯೇ ಭಾರತದ ಪ್ರಗತಿ ಎಂದು ಅವರು ಹೇಳಿದರು. ಆರ್ಎಸ್ಎಸ್ನ ಸಂಘಟನೆಯ ಹಾದಿ ಸುಲಭವಾಗಿರಲಿಲ್ಲ, ಎರಡು ನಿಷೇಧಗಳು ಮತ್ತು ಅದರ ಸ್ವಯಂಸೇವಕರ ಮೇಲೆ ಹಿಂಸಾತಕ ದಾಳಿಗಳು ಸೇರಿದಂತೆ ಸುಮಾರು 60 ರಿಂದ 70 ವರ್ಷಗಳಿಂದ ತೀವ್ರ ವಿರೋಧ ಎದುರಿಸಿದೆ. ಸ್ವಯಂಸೇವಕರನ್ನು ಕೊಲೆ ಮಾಡಲಾಯಿತು. ನಾವು ಅಭಿವೃದ್ಧಿ ಹೊಂದಬಾರದು ಎಂದು ಎಲ್ಲಾ ರೀತಿಯಿಂದಲೂ ಪ್ರಯತ್ನಿಸಲಾಯಿತು. ನಾವು ಈ ಎಲ್ಲಾ ಸನ್ನಿವೇಶಗಳನ್ನು ಕರಗತ ಮಾಡಿಕೊಂಡಿದ್ದೇವೆ ಮತ್ತು ಸಮಾಜವು ವಿಶ್ವಾಸಾರ್ಹವಾಗುವ ಹಂತವನ್ನು ತಲುಪಿದ್ದೇವೆ ಎಂದರು.
ಜಾತಿ, ವರ್ಗ ಮತ್ತು ಧಾರ್ಮಿಕ ಪಂಗಡಗಳನ್ನು ಮೀರಿ ಪ್ರತಿಯೊಂದು ಹಳ್ಳಿ ಮತ್ತು ಸಮುದಾಯಕ್ಕೂ ಆರ್ಎಸ್ಎಸ್ ತನ್ನ ಅಸ್ತಿತ್ವವನ್ನು ವಿಸ್ತರಿಸುವುದು ಸಂಘದ ಪ್ರಮುಖ ಆದ್ಯತೆಯಾಗಿದೆ ಎಂದು ಭಾಗವತ್ ಹೇಳಿದರು. ಆರ್ಎಸ್ಎಸ್ಗೆ ಒಂದು ಶಾಶ್ವತವಾದ ಸಂಕೇತ ಬೇಕಾಗಿತ್ತು. ಹೀಗಾಗಿ ನಾವು ಭಾಗವಧ್ವಜವನ್ನು ನಂಬಿದ್ದೇವೆ. ಹಾಗಂತ ದೇಶದ ತ್ರಿವರ್ಣ ಧ್ವಜವನ್ನು ನಾವು ಎಂದಿಗೂ ವಿರೋಧಿಸಿಲ್ಲ. ನಮ ರಾಷ್ಟ್ರದ ಹೆಮೆಯ ಸಂಕೇತವಾಗಿರುವ ಯಾವಾಗಲೂ ನಾವು ಅತ್ಯುನ್ನತ ಗೌರವ ಕೊಡುತ್ತೇವೆ ಎಂದರು. ಆರ್ಎಸ್ಎಸ್ ಶಾಖೆಗೆ ಹಿಂದೂ, ಕ್ರಿಶ್ಚಿಯನ್, ಮುಸ್ಲಿಂ ಸೇರಿದಂತೆ ಯಾವ ವ್ಯಕ್ತಿಯೂ ಬೇಕಾದರೂ ಬರಬಹುದು. ನಾವು ಜಾತಿ, ಪಥ, ಧರ್ಮ ಕೇಳುವುದಿಲ್ಲ. ಪ್ರತಿಯೊಬ್ಬ ವ್ಯಕ್ತಿಗೆ ಸಂಸ್ಕಾರ ನೀಡುವುದೇ ನಮ ಗುರಿ. ಇವೆಲ್ಲವನ್ನೂ ಮೀರಿ ಬೆಳೆದು ನಿಂತಿದೆ. ವಿಶ್ವದ ಅತ್ಯಂತ ದೊಡ್ಡ ಸಂಘಟನೆ ಎಂದು ಪ್ರಶಂಸಿಸಿದರು.
ಸಂಘದಲ್ಲಿ ಜಾತಿ, ಲಿಂಗ, ಮುಸ್ಲಿಂ , ಕ್ರೈಸ್ತ, ಬ್ರಾಹಣ, ಶೈವ ಎಂಬ ಪಂಥಗಳಿಗೆ ಅವಕಾಶವಿಲ್ಲ. ಯಾರೇ ಧರ್ಮದವರು ಶಾಖೆಗೆ ಬರಬಹುದು. ಆದರೆ ಶಾಖೆಗೆ ಬರುವವರು ಜಾತಿ, ಧರ್ಮವನ್ನು ಹೊರಗಿಟ್ಟು ಬರಬೇಕು. ಮೆಂಬರ್ ಆಫ್ ದಿ ಸೊಸೈಟಿಯಡಿ ಮುಸ್ಲಿಂ, ಕ್ರೈಸ್ತ ಯಾರೂ ಬೇಕಾದರೂ ಬರಬಹುದು. ನೀವು ಹಿಂದೂ ಧರ್ಮವನ್ನು ಒಪ್ಪಿಕೊಂಡು ಬಂದರೆ ನಾವು ನಿಮ ಧರ್ಮವನ್ನು ಪ್ರಶ್ನಿಸುವುದಿಲ್ಲ ಎಂದು ಭಾಗವತ್ ಹೇಳಿದರು.
