ಬೆಂಗಳೂರು,ಅ.23- ರಾಜ್ಯದಲ್ಲಿ ಭೀಕರ ಪ್ರವಾಹ ಉಂಟಾಗಿ ಜನರು ಪ್ರಾಣ ಕಳೆದುಕೊಂಡು ರೈತರ ಬೆಳೆಗಳು ಕೊಚ್ಚಿ ಹೋಗುತ್ತಿದ್ದರೂ ಸರ್ಕಾರ ಉಪಚುನಾವಣೆ ಗೆಲ್ಲಲು ಹಣದ ಹೊಳೆಯನ್ನೇ ಹರಿಸುತ್ತಿದೆ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಕಿಡಿಕಾರಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಬಹುತೇಕ ಎಲ್ಲಾ ಜಿಲ್ಲೆಗಳಲ್ಲೂ ಕಳೆದ ಒಂದು ವಾರದಿಂದ ಸತತ ಮಳೆಯಾಗುತ್ತಿದ್ದು, ಅನೇಕರು ಪ್ರಾಣ ಕಳೆದುಕೊಂಡಿದ್ದಾರೆ. ಬೆಳೆಗಳು ನಾಶವಾಗಿದ್ದು, ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು ಕ್ಷೇತ್ರದ ಕಡೆ ಮುಖ ಮಾಡಿಲ್ಲ ಎಂದು ವಾಗ್ದಾಳಿ ನಡೆಸಿದರು.
ಪ್ರವಾಹ ಬಂದಾಗ ಉಸ್ತುವಾರಿ ಸಚಿವರು, ಶಾಸಕರು ಅಧಿಕಾರಿಗಳ ಕಿವಿ ಹಿಂಡಿ ಜನರ ಸಂಕಷ್ಟಗಳಿಗೆ ಸ್ಪಂದಿಸುವುದು ಒಂದು ಜವಾಬ್ದಾರಿಯುತ ಸರ್ಕಾರದ ಕರ್ತವ್ಯ. ನಿರಂತರವಾಗಿ ಮಳೆಯಾಗುತ್ತಿದ್ದರೂ ಒಬ್ಬ ಸಚಿವರು ಕೂಡ ಜನರ ಸಂಕಷ್ಟಗಳಿಗೆ ಸ್ಪಂದಿಸಿಲ್ಲ. ಇದನ್ನು ಜವಾಬ್ದಾರಿಯುತ ಸರ್ಕಾರ ಎನ್ನಬೇಕೇ ಎಂದು ಪ್ರಶ್ನಿಸಿದರು. ರಾಜಧಾನಿ ಬೆಂಗಳೂರಿನಲ್ಲಿ ಇಬ್ಬರು ಮಕ್ಕಳು ಹಾಗೂ ಚಿತ್ರದುರ್ಗದಲ್ಲಿ ಓರ್ವ ವಯೋವೃದ್ಧರು ಮಳೆ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ಸಚಿವರು ಮತ್ತು ಶಾಸಕರು ಏನು ಮಾಡುತ್ತಿದ್ದಾರೆ ಎಂದು ತರಾಟೆಗೆ ತೆಗೆದುಕೊಂಡರು. ಉಪಚುನಾವಣೆಯಲ್ಲಿ ಮೂರು ಕ್ಷೇತ್ರಗಳನ್ನು ಗೆಲ್ಲುವ ಭ್ರಮೆಯಿಂದ ಕಾಂಗ್ರೆಸ್ ನಾಯಕರು ಹೊರಬರಲಿ. ಎಲ್ಲ ಕಡೆಯೂ ಕೈಗೆ ಸೋಲು ಕಟ್ಟಿಟ್ಟ ಬುತ್ತಿ ಎಂದು ಮಾಜಿಸ ಚಿವ ಎಂ.ಪಿ.ರೇಣುಕಾಚಾರ್ಯ ಹೇಳಿದ್ದಾರೆ.
ಮೂರು ಕ್ಷೇತ್ರಗಳಲ್ಲಿ ಗೆದ್ದರೆ ನಾನೇ ಸಿಎಂ ಆಗಬಹುದೆಂದು ಡಿ.ಕೆ.ಶಿವಕುಮಾರ್ ಮತ್ತು 3 ಕಡೆ ಗೆದ್ದರೆ ತಮ ಸಿಎಂ ಕುರ್ಚಿ ಭದ್ರವಾಗುತ್ತದೆ ಎಂದು ಸಿದ್ದರಾಮಯ್ಯ ಭ್ರಮಾಲೋಕದಲ್ಲಿದ್ದಾರೆ. ಜತೆಗೆ ಕುರ್ಚಿಗೆ ಫೆವಿಕಲ್ ಹಾಕಿಕೊಂಡು ಕುಳಿತ ಸಚಿವರೆಲ್ಲ ಗೆಲ್ಲುವ ಭ್ರಮೆಯಲ್ಲಿದ್ದು, ಅದರಿಂದ ಹೊರಬರಲಿ ಎಂದು ಟೀಕಿಸಿದರು. ಸಿಎಂ, ಡಿಸಿಎಂ ಸರಣಿ ಸಭೆಗಳನ್ನು ಮಾಡುತ್ತಿದ್ದು, ಪರ್ಸೆಂಟೇಸ್ ಹಂಚಿಕೊಳ್ಳುವಂತೆ ಒಂದೊಂದು ಕ್ಷೇತ್ರಕ್ಕೆ 10 ಸಚಿವರು, 30 ಶಾಸಕರನ್ನು ಹಂಚಿಕೆ ಮಾಡಿದ್ದಾರೆ.
ಈಗಾಗಲೇ ಕಾಂಗ್ರೆಸ್ ನಾಯಕರು ಕ್ಯಾಶ್ ಬ್ಯಾಗ್ ಹಿಡಿದುಕೊಂಡು ಹೋಗಿದ್ದಾರೆ ಎಂದರು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದು ಒಂದೂವರೆ ವರ್ಷ ಆಯಿತು. ಯಾವುದೇ ಅಭಿವೃದ್ಧಿ ಕಾರ್ಯಗಳಾಗಿಲ್ಲ. ಸುಮನೆ ಆರೋಪ ಮಾಡುತ್ತಾ ಕಾಲ ಕಳೆಯುತ್ತಿದ್ದಾರೆ. ಗಾಜಿನ ಮನೆಯಲ್ಲಿ ಕುಳಿತು ಕಲ್ಲು ಎಸೆಯಬೇಡಿ. ಅದರಿಂದ ನಿಮಗೆ ಆಪತ್ತು ಎಂದು ಸಿಎಂ ಸಿದ್ದರಾಮಯ್ಯ ಮತ್ತು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಮಾಜಿ ವಾಗ್ದಾಳಿ ನಡೆಸಿದರು.
ಮಹರ್ಷಿ ವಾಲೀಕಿ ಅವರಿಗೆ ನೀವು ಮೋಸ ಮಾಡಿದ್ದಿರಿ. ವಾಲೀಕಿ ನಿಗಮದ ಹಗರಣದಲ್ಲಿ ಏನು ಮಾಡಿದ್ದೀರಿ?. ದದ್ದಲ್ ಮತ್ತು ನಾಗೇಂದ್ರ ಮೇಲೆ ಏನ ಕ್ರಮ ಆಗಿದೆ..?. ನಾವು ನಿಮ ಸರ್ಕಾರ ಬಿಳಿಸುವ ಪ್ರಯತ್ನ ಮಾಡುತ್ತಿಲ್ಲ. ನಿಮಲ್ಲಿ ಬಾಹ್ಯ ಬೆಂಬಲ ನೀಡಿ ಆಂತರಿಕವಾಗಿ ಸಿಎಂ ಆಗಲು ಪ್ರಯತ್ನ ನಡೆದಿದೆ ಎಂದರು.
ರಾಜ್ಯದಲ್ಲಿ ಸರ್ಕಾರ ಅಸ್ತಿರಗೊಂಡಿದೆ, ಕೆಲವೇ ದಿನಗಳಲ್ಲಿ ಪಕ್ಕಾ ಈ ಸರ್ಕಾರ ಬೀಳಲಿದೆ. ಮುಡಾ ಮತ್ತು ವಾಲೀಕಿ ಹಗರಣ ವಿಷಯಾಂತರ ಮಾಡಲು ಶಾಸಕ ಗಾಣಿಗ ರವಿಗೆ ಸೂಚನೆ ನೀಡಲಾಗಿದೆ. ಹೈಕಮಾಂಡ್ ನಿಂದ ಸುಪಾರಿ ನೀಡಿ ವಿಷಯಾಂತರ ಮಾಡಲು ಹೇಳಿದ್ದಾರೆ. ಯಾವ ಬಿಜೆಪಿ ನಾಯಕ ನಿಮಗೆ ಮಾತನಾಡಿದ್ದಾರೆ ಆ ದಾಖಲೆ ಬಿಡುಗಡೆ ಮಾಡಿ. 100 ಕೋಟಿ ಆಫರ್ ನೀಡಿದ್ದ ಕುರಿತು ದಾಖಲೆ ಬಿಡುಗಡೆ ಮಾಡಿ. ನಿಮ ಇಡಿ ಐಟಿ ಗೆ ದೂರು ಕೊಡಿ, ನಾಟಕ ಮಾಡುವದನ್ನು ಬಿಡಿ. ನಿಮಗೆ ತಾಕತ್ತಿದ್ದರೆ ದೂರು ನೀಡಿ ಬಂಧಿಸಿ ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ರೇಣುಕಾಚಾರ್ಯ ಹರಿಹಾಯ್ದಿದ್ದಾರೆ.