Saturday, March 15, 2025
Homeರಾಜ್ಯಕಾಂಗ್ರೆಸ್‌‍ನಲ್ಲಿ ಎಲ್ಲವವೋ ಸರಿಯಾಗಿದೆ, ಯಾವುದೇ ಬೇಗುದಿ ಇಲ್ಲ : ಎಂ.ಬಿ.ಪಾಟೀಲ್‌

ಕಾಂಗ್ರೆಸ್‌‍ನಲ್ಲಿ ಎಲ್ಲವವೋ ಸರಿಯಾಗಿದೆ, ಯಾವುದೇ ಬೇಗುದಿ ಇಲ್ಲ : ಎಂ.ಬಿ.ಪಾಟೀಲ್‌

Everyone in Congress is fine, there is no unrest: M.B. Patil

ಬೆಂಗಳೂರು,ಮಾ.15- ಕಾಂಗ್ರೆಸ್‌‍ನಲ್ಲಿ ಯಾವುದೇ ಬೇಗುದಿಯಿಲ್ಲ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಐದು ವರ್ಷ ಅವಧಿ ಪೂರೈಸಿದ ಅಂಗವಾಗಿ ಪಕ್ಷದ ಶಾಸಕರಿಗೆ ಭೋಜನಾ ವ್ಯವಸ್ಥೆ ಮಾಡಿದ್ದರು. ಪರಮೇಶ್ವರ್‌ ಹೊರತುಪಡಿಸಿ ಎಲ್ಲರೂ ಅದರಲ್ಲಿ ಭಾಗವಹಿಸಿದ್ದರು ಎಂದು ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್‌ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿ.ಕೆ.ಶಿವಕುಮಾರ್‌ರವರ ಭೋಜನಾ ಕೂಟಕ್ಕೆ ಸಚಿವ ಸತೀಶ್‌ ಜಾರಕಿಹೊಳಿ, ಸಹಕಾರ ಸಚಿವ ಕೆ.ಎನ್‌.ರಾಜಣ್ಣ ಭಾಗವಹಿಸಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಇದ್ದರು. ಮತ್ತೆ ಇನ್ನ್ಯಾವ ಬೇಗುದಿ ಇರಲು ಸಾಧ್ಯ. ಪರಮೇಶ್ವರ್‌ ಅವರ ಕಡೆಯ ವ್ಯಕ್ತಿಯೊಬ್ಬರು ನಿಧನರಾಗಿದ್ದರು. ಈ ಕಾರಣಕ್ಕಾಗಿ ಅವರು ಭೋಜನಾಕೂಟದಲ್ಲಿ ಭಾಗವಹಿಸಿರಲಿಲ್ಲ. ಉಳಿದಂತೆ ಎಲ್ಲರೂ ಭಾಗವಹಿಸಿದ್ದರು ಎಂದರು.

ಅಧಿವೇಶನ ನಡೆದಾಗ ಸಾಮಾನ್ಯವಾಗಿ ಸಚಿವರು, ಮುಖ್ಯಮಂತ್ರಿ, ಉಪಮುಖ್ಯಮಂತ್ರಿಯವರು ಭೋಜನಾ ಕೂಟ ಆಯೋಜಿಸುತ್ತಾರೆ. ನಾನೂ ಕೂಡ ಹಲವು ಬಾರಿ ಭೋಜನಾಕೂಟ ಆಯೋಜಿಸಿದ್ದೇನೆ. ಅದರಲ್ಲಿ ವಿಶೇಷ ಏನಿಲ್ಲ.

ಡಿ.ಕೆ.ಶಿವಕುಮಾರ್‌ರವರು 5 ವರ್ಷ ಕೆಪಿಸಿಸಿ ಅಧ್ಯಕ್ಷರಾಗಿ ಅವಧಿ ಪೂರ್ಣಗೊಳಿಸಿದ್ದಕ್ಕಾಗಿ ಕಾಂಗ್ರೆಸ್‌‍ ಶಾಸಕರಿಗೆ ಊಟ ಕೊಡಿಸಿದ್ದರು ಎಂದರು.ಕೆಪಿಸಿಸಿಯ ಮುಂದಿನ ಅಧ್ಯಕ್ಷರು ಯಾರು ಎಂಬುದನ್ನು ಹೈಕಮಾಂಡ್‌ ನಿರ್ಧರಿಸುತ್ತದೆ. ನಮ ಹಂತದಲ್ಲಿ ಯಾವುದೇ ಚರ್ಚೆಗಳಾಗುವುದಿಲ್ಲ ಎಂದು ತಿಳಿಸಿದರು.

RELATED ARTICLES

Latest News