Friday, November 22, 2024
Homeರಾಷ್ಟ್ರೀಯ | Nationalಸರ್ಕಾರಿ ಸೇವೆ ಪರೀಕ್ಷೆಯಲ್ಲಿ ವಂಚನೆ : 10 ಜನರ ಬಂಧನ

ಸರ್ಕಾರಿ ಸೇವೆ ಪರೀಕ್ಷೆಯಲ್ಲಿ ವಂಚನೆ : 10 ಜನರ ಬಂಧನ

ಲಕ್ನೋ, ಅ.29- ರಾಜ್ಯಸರ್ಕಾರಿ ಸೇವೆಗಳ ಆಯ್ಕೆಗಾಗಿ ಉತ್ತರ ಪ್ರದೇಶ ಸಾರ್ವಜನಿಕ ಸೇವಾ ಆಯೋಗ ನಡೆಸಿದ ಪ್ರಾಥಮಿಕ ಅರ್ಹತಾ ಪರೀಕ್ಷೆಯಲ್ಲಿ ಅಕ್ರಮದಲ್ಲಿ ಬಾಗಿಯಾಗಿದ್ದ ಆರೋಪದ ಮೇಲೆ ಉತ್ತರ ಪ್ರದೇಶ ಪೊಲೀಸರ ವಿಶೇಷ ಕಾರ್ಯಪಡೆ 10 ಜನರನ್ನು ಬಂಧಿಸಿದೆ.

ಕೇಂದ್ರವೊಂದರಲ್ಲಿ ಆರೋಪಿಗಳು ಪರೀಕ್ಷೆಯ ಸಮಯದಲ್ಲಿ ಬ್ಲೂಟೂತ್ ಸಾಧನಗಳು ಸೇರಿದಂತೆ ವಿವಿಧ ಅಕ್ರಮ ವಿಧಾನಗಳನ್ನು ಬಳಸುತ್ತಿರುವುದು ಕಂಡುಬಂದಿದೆ. ಎಸ್‍ಟಿಎಫ್ ಅಧಿಕಾರಿಗಳು ತಿಳಿಸಿದ್ದಾರೆ.

ಬಂಧಿತರ ಗ್ಯಾಂಗ್ ನಾಯಕರಾದ ದೀಪಕ್ ಕುಮಾರ್ ಪಟೇಲ್ ಮತ್ತು ಅಜಯ್ ಕುಮಾರ್ ಪಟೇಲ್ ಎಂದು ಗುರುತಿಸಲಾಗಿದೆ. ದೀಪಕ್‍ನನ್ನು ಪ್ರತಾಪ್‍ಗಢದಲ್ಲಿ ಅಜಯ್ ಕುಮಾರ್ ಪಟೇಲ್‍ನನ್ನು ಪ್ರಯಾಗ್‍ರಾಜ್‍ನಲ್ಲಿ ಬಂಧಿಸಲಾಗಿದೆ ಇತರೆ ಆರೋಪಿಗಳಾದ ದಿಲೀಪ್, ಸುಜಿತ್ ಕುಮಾರ್, ಪಂಕಜ್ ಕುಮಾರ್, ಜಿತೇಂದ್ರ ಕುಮಾರ್ ವರ್ಮಾ, ಅನುರಾಗ್ ಕುಮಾರ್, ರವೀಂದ್ರ ಸಿಂಗ್ ಮತ್ತು ಉದಯವೀರ್ ಸಿಂಗ್ ಲಕ್ನೋ ನಗರದಲ್ಲೇ ಸಿಕ್ಕಿಬಿದ್ದಿದ್ದಾರೆ ಎಂದು ಹೇಳಿದ್ದಾರೆ.

“ಡಿಕೆಶಿಯವರಿಗೆ 70 ಶಾಸಕರ ಬೆಂಬಲವಿದೆ, ಅವರನ್ನು ಸಿಎಂ ಮಾಡೇ ತೀರುತ್ತೇವೆ”

ವಾರಣಾಸಿಯ ಪರೀಕ್ಷಾ ಕೇಂದ್ರದ ಉಸ್ತುವಾರಿಯನ್ನು ಸಹ ಬಂಧಿಸಲಾಗಿದೆ ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ ಸಂಬಂಧಿತ ಕಾಯ್ಧೆ ಅಡಿ ಎಫ್‍ಐಆರ್‍ಗಳನ್ನು ದಾಖಲಿಸಿ ,ತನಿಖೆಯನ್ನು ಪ್ರಾರಂಭಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಂಧಿತರು ಪರೀಕ್ಷೆ ಬರೆಯಲು ಕಿವಿಯೊಳಗಿನ ಬ್ಲೂಟೂತ್ ಸಾಧನವನ್ನು ಬಳಸಿ ಉಳಿದವರು ಕಾಪಿ ಮಾಡ,ಕೆಲವರಿಗೆ ಉತ್ತರ ಹೇಳಿಕೊಡಲಾಗಿದೆಎಂದು ಮೂಲಗಳು ತಿಳಿಸಿವೆ. 8 ಮೊಬೈಲ್ ಫೋನ್‍ಗಳು ಮತ್ತು ಇತರ ವಸ್ತುಗಳನ್ನು ಎಸ್‍ಟಿಎಫ್ ವಶಪಡಿಸಿಕೊಂಡಿದೆ.

ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದ ಸಿದ್ದು-ಪರಂ ರಹಸ್ಯ ಸಭೆ

ಉತ್ತರ ಪ್ರದೇಶ ಅೀನ ಸೇವೆಗಳ ಆಯ್ಕೆ ರಾಜ್ಯದ 35 ಜಿಲ್ಲೆಗಳಾದ್ಯಂತ 1,058 ಕೇಂದ್ರಗಳಲ್ಲಿ ಪರೀಕ್ಷೆಯನ್ನು ನಡೆಸಿತು.

RELATED ARTICLES

Latest News