ರಾಷ್ಟ್ರೀಯ ಮುಕ್ತ ವಿದ್ಯಾಲಯದ ಶಿಕ್ಷಣ ಸಂಸ್ಥೆಯ ಪರೀಕ್ಷಾ ವೇಳಾಪಟ್ಟಿ ಪ್ರಕಟ

ಬೆಂಗಳೂರು, ಜ.14- ರಾಷ್ಟ್ರೀಯ ಮುಕ್ತ ವಿದ್ಯಾಲಯ ಶಿಕ್ಷಣ ಸಂಸ್ಥೆಯ(ಎನ್‍ಐಒಎಸ್) ಅಕ್ಟೋಬರ್ 2020ರ ಸೆಕೆಂಡರಿ (10ನೆ ತರಗತಿ) ಮತ್ತು ಸೀನಿಯರ್ ಸೆಕೆಂಡರಿ (12ನೆ ತರಗತಿ) ಸಾರ್ವಜನಿಕ ಪರೀಕ್ಷೆಗಳು ಜನವರಿ ಮತ್ತು ಫೆಬ್ರವರಿಯಲ್ಲಿ ನಡೆಯಲಿವೆ. ಸೆಕೆಂಡರಿ (10ನೆ) ಮತ್ತು ಸೀನಿಯರ್ ಸೆಕೆಂಡರಿ (12) ತರಗತಿಗಳಿಗೆ ಇಂದಿನಿಂದ ಜನವರಿ 25ರ ವರೆಗೆ ಪ್ರಾಯೋ ಗಿಕ ಪರೀಕ್ಷೆಗಳು ನಡೆಯಲಿವೆ. ಥಿಯರಿ ಪರೀಕ್ಷೆಗಳು ಜ.22 ರಿಂದ ಫೆ.15ರವರೆಗೆ ನಡೆಸಲಾಗುವುದು.

ಪರೀಕ್ಷಾ ದಿನಾಂಕದ ಪ್ರತಿಯನ್ನು ಎನ್‍ಐಒಎಸ್‍ನ ಅಧಿಕೃತ ವೆಬ್‍ಸೈಟ್ನ… www.nios.ac.in/sdmis.nios.ac.inಲ್ಲಿ ಪ್ರಕಟಿಸಲಾಗಿದೆ. ಕಲಿಕಾರ್ಥಿಗಳು ಎನ್‍ಐಒಎಸ್‍ನ www.nios.ac. in/sdmis.nios.ac.in ಅಂತರ್ಜಾಲದಲ್ಲಿ ಲಭ್ಯವಿರುವ ಹಾಲ್‍ಟಿಕೆಟ್ ಮತ್ತು ಭಾವಚಿತ್ರವಿರುವ ಗುರುತಿನ ಪತ್ರದೊಂದಿಗೆ ಮೇಲ್ಕಂಡ ಪರೀಕ್ಷೆಗಳಿಗೆ ಹಾಜರಾಗ ಬೇಕೆಂದು ತಿಳಿಸಲಾಗಿದೆ.

ಮಾಹಿತಿಗೆ ಪ್ರಾದೇಶಿಕ ನಿರ್ದೇಶಕರು, ಪ್ರಾದೇಶಿಕ ಕಚೇರಿ, ರಾಷ್ಟ್ರೀಯ ಮುಕ್ತ ವಿದ್ಯಾಲಯ ಶಿಕ್ಷಣ ಸಂಸ್ಥೆ, ಪಿಯುಇ ಭವನ, 3ನೆ ಮಹಡಿ, 18ನೆ ಅಡ್ಡರಸ್ತೆ, ಸಂಪಿಗೆ ರಸ್ತೆ, ಮಲ್ಲೇಶ್ವರಂ, ಬೆಂಗಳೂರು-560 012. ದೂರವಾಣಿ ಸಂಖ್ಯೆ: 23464223/222 ಸಂಪರ್ಕಿಸಬಹುದು. ನಿನ್ನೆ ಪತ್ರಿಕೆಯಲ್ಲಿ ಪ್ರಕಟಿಸಲಾಗಿದ್ದ ಮಾಹಿತಿಯಲ್ಲಿ ಕೆಲ ಗೊಂದಲಗಳಿದ್ದು ವಿದ್ಯಾರ್ಥಿಗಳೇ ಇಂದಿನ ವರದಿಯನ್ನು ಪರಿಗಣಿಸಬೇಕಾಗಿ ಕೋರಲಾಗಿದೆ.