Saturday, November 23, 2024
Homeರಾಜ್ಯಗೆಜೆಟೆಡ್‌ ಪ್ರೊಫೆಷನ್ಸ್ ಹುದ್ದೆಗಳ ಪರೀಕ್ಷೆ ಮುಂದೂಡುವುದಿಲ್ಲ, ಒಂದು ವಿಷಯಕ್ಕೆ ಮಾತ್ರ ದಿನಾಂಕ ಬದಲಾವಣೆ : ಸಿಎಂ

ಗೆಜೆಟೆಡ್‌ ಪ್ರೊಫೆಷನ್ಸ್ ಹುದ್ದೆಗಳ ಪರೀಕ್ಷೆ ಮುಂದೂಡುವುದಿಲ್ಲ, ಒಂದು ವಿಷಯಕ್ಕೆ ಮಾತ್ರ ದಿನಾಂಕ ಬದಲಾವಣೆ : ಸಿಎಂ

Examination of gazetted professions posts will not be postponed : CM

ಬೆಂಗಳೂರು,ಆ.24- ಕೆಪಿಎಸ್‌‍ಸಿ ವತಿಯಿಂದ ಗೆಜೆಟೆಡ್‌ ಪ್ರೊಫೆಷನ್ಸ್ ಹುದ್ದೆಗಳಿಗೆ ನಡೆಯುತ್ತಿರುವ ಪರೀಕ್ಷೆಯನ್ನು ಮುಂದೂಡುವುದಿಲ್ಲ. ಆದರೆ ಒಂದು ವಿಷಯಕ್ಕೆ ಸಂಬಂಧಪಟ್ಟ ಪರೀಕ್ಷಾ ದಿನಾಂಕವನ್ನು ಬದಲಾವಣೆ ಮಾಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪರೀಕ್ಷೆ ಮುಂದೂಡಬೇಕು ಎಂದು ಹಲವರು ಹೇಳುತ್ತಿದ್ದಾರೆ. ಇದರಲ್ಲಿ ಯಾವುದೇ ಗೊಂದಲವಿಲ್ಲ. ಪರೀಕ್ಷೆ ಮುಂದೂಡಲು ಅವಕಾಶವಿಲ್ಲ. ಕೃಷ್ಣ ಜನಾಷ್ಟಮಿಯ ದಿನ ನಿಗದಿಯಾಗಿರುವ ವಿಷಯದ ಪರೀಕ್ಷಾ ದಿನವನ್ನು ಬದಲಾಯಿಸಲು ಪರಿಗಣಿಸುವುದಾಗಿ ಹೇಳಿದರು.

ನೀರಿನ ದರ ಇನ್ನೂ ಹೆಚ್ಚಳವಾಗಿಲ್ಲ :
ಬೆಂಗಳೂರಿನಲ್ಲಿ ನೀರು ಸೇರಿದಂತೆ ಯಾವುದೇ ದರಗಳು ಹೆಚ್ಚಳವಾಗಿಲ್ಲ. ಮಾಧ್ಯಮಗಳಲ್ಲಿ ದರ ಹೆಚ್ಚಳ ಎಂಬ ಚರ್ಚೆಗಳು ನಡೆಯುತ್ತಿವೆ. ಬಹಳ ವರ್ಷಗಳಿಂದ ನೀರಿನ ದರ ಪರಿಷ್ಕರಣೆಯಾಗಿಲ್ಲ. ಪಿಡಬ್ಲ್ಯೂಎಸ್‌‍ಎಸ್‌‍ಬಿಯಲ್ಲಿ ಕಷ್ಟದ ಪರಿಸ್ಥಿತಿ ಇದೆ. ಅದಕ್ಕಾಗಿ ಬೆಂಗಳೂರು ಉಸ್ತುವಾರಿ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ರವರು ದರ ಹೆಚ್ಚಳ ಮಾಡಿಯೇ ಮಾಡುತ್ತೇವೆ ಎಂದು ಮಾತನಾಡಿರಬಹುದು. ಆ ಕುರಿತು ಪ್ರಸ್ತಾವನೆ ಮತ್ತು ಆಲೋಚನೆಗಳಿವೆ. ಚರ್ಚೆ ಮಾಡಿ ಸೂಕ್ತ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದರು.

ಎಲ್ಲಾ ಅವಕಾಶಗಳು ಮುಕ್ತ :
ಮುಡಾ ಪ್ರಕರಣದಲ್ಲಿ ಅಭಿಯೋಜನೆಗೆ ಅನುಮತಿ ನೀಡಿರುವ ರಾಜ್ಯಪಾಲರ ನಿರ್ಣಯವನ್ನು ಸಚಿವ ಸಂಪುಟದಲ್ಲಿ ವಿರೋಧಿಸಲಾಗಿದೆ. ನ್ಯಾಯಾಲಯದಲ್ಲೂ ಪ್ರಶ್ನಿಸಲಾಗಿದೆ. ರಾಜ್ಯಪಾಲರ ವಿರುದ್ಧ ರಾಷ್ಟ್ರಪತಿಗಳಿಗೆ ದೂರು ನೀಡುವುದೂ ಸೇರಿದಂತೆ ಎಲ್ಲಾ ಆಯ್ಕೆಗಳು ಮುಕ್ತವಾಗಿವೆ ಎಂದರು.

ರಾಜ್ಯಪಾಲ ಥಾವರ್‌ಚಂದ್‌ ಗೆಹ್ಲೋಟ್‌ ವಿಧಾನಸಭಾ ಮತ್ತು ವಿಧಾನಪರಿಷತ್‌ನಲ್ಲಿ ಅಂಗೀಕಾರಗೊಂಡಿದ್ದ ಆರು ವಿಧೇಯಕಗಳನ್ನು ವಾಪಸ್‌‍ ಕಳುಹಿಸಿದ್ದಾರೆ. ಈ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.

ಇದರಿಂದಾಗಿ ರಾಜಭವನ ಹಾಗೂ ಸರ್ಕಾರದ ನಡುವೆ ಸಂಘರ್ಷ ನಡೆಯುತ್ತಿದೆ ಎಂಬ ವಿಶ್ಲೇಷಣೆ ಸೂಕ್ತ ಅಲ್ಲ ಎಂದರು.ನಿನ್ನೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ಸಚಿವರಾದ ಪರಮೇಶ್ವರ್‌, ಎಚ್‌.ಸಿ.ಮಹದೇವಪ್ಪ, ಕೆ.ಜೆ.ಜಾರ್ಜ್‌ ಸೇರಿದಂತೆ ಎಲ್ಲರೂ ದೆಹಲಿಗೆ ತೆರಳಿ ಪಕ್ಷದ ಹೈಕಮಾಂಡ್‌ ನಾಯಕರನ್ನು ಭೇಟಿ ಮಾಡಿ ಚರ್ಚೆ ಮಾಡಿದ್ದೇವೆ. ಮುಡಾ ಪ್ರಕರಣದಲ್ಲಿ ರಾಜ್ಯಪಾಲರು ತೆಗೆದುಕೊಂಡಿರುವ ನಿರ್ಣಯಗಳನ್ನು ಹಾಗೂ ರಾಜಕೀಯ ಬೆಳವಣಿಗೆಗಳನ್ನು ವಿಸ್ತೃತವಾಗಿ ಚರ್ಚಿಸಲಾಗಿದೆ ಎಂದು ಹೇಳಿದರು.

RELATED ARTICLES

Latest News