Saturday, August 9, 2025
Homeರಾಜ್ಯಧರ್ಮಸ್ಥಳ ಗ್ರಾಮದ ಹೊಸ ಸ್ಥಳದಲ್ಲಿ ಉತ್ಖನನ

ಧರ್ಮಸ್ಥಳ ಗ್ರಾಮದ ಹೊಸ ಸ್ಥಳದಲ್ಲಿ ಉತ್ಖನನ

Excavation at new location in Dharmasthala village

ಬೆಂಗಳೂರು,ಆ.9- ಧರ್ಮಸ್ಥಳ ಗ್ರಾಮದ ಸುತ್ತಮುತ್ತ ಶವಗಳನ್ನು ಹೂಳಲಾಗಿದೆ ಎಂಬ ದೂರಿನನ್ವಯ ಎಸ್‌‍ಐಟಿ ಇಂದು ಮತ್ತೊಂದು ಹೊಸ ಸ್ಥಳದಲ್ಲಿ ಉತ್ಖನನ ಆರಂಭಿಸಿದೆ. ದೂರುದಾರನನ್ನು ಬಿಗಿ ಪೊಲೀಸ್‌‍ ಬಂದೋಬಸ್ತ್‌ನಲ್ಲಿ ಎಸ್‌‍ಐಟಿ ತಂಡ ಇಂದು ಹೊಸ ಸ್ಥಳಕ್ಕೆ ಕರೆದೊಯ್ದು ಪರಿಶೀಲನೆ ನಡೆಸುತ್ತಿದೆ.

ಹಲವಾರು ಮೃತದೇಹಗಳನ್ನು ಹೂಳಲಾಗಿದೆ ಎಂಬ ದೂರುದಾರನ ಹೇಳಿಕೆಯಂತೆ ಎಸ್‌‍ಐಟಿ ಹಾಗೂ ಇನ್ನಿತರ ಅಧಿಕಾರಿಗಳ ತಂಡ ನಿನ್ನೆ ಹೊಸ ಸ್ಥಳದಲ್ಲಿ ಪರಿಶೀಲನೆ ನಡೆಸಿದ ವೇಳೆ ಯಾವುದೇ ಅಸ್ಥಿಪಂಜರ ಪತ್ತೆಯಾಗಿಲ್ಲ.

ಧರ್ಮಸ್ಥಳ ಗ್ರಾಮದ ಬೊಳಿಯಾರ್‌ ಬಳಿಯ ಗೋಂಕ್ರತಾರ್‌ ಸಮೀಪದ ಅರಣ್ಯ ಪ್ರದೇಶಕ್ಕೆ ನಿನ್ನೆ ಸಾಕ್ಷಿ ದೂರುದಾರನೊಂದಿಗೆ ಶೋಧಕಾರ್ಯ ನಡೆಸಿದರಾದರೂ ಯಾವುದೇ ಪ್ರಯೋಜನವಾಗಿಲ್ಲ. ಹಾಗಾಗಿ ಸಂಜೆ ವೇಳೆಗೆ ಉತ್ಖನನ ಕಾರ್ಯ ನಿಲ್ಲಿಸಲಾಯಿತು.

ಕಲ್ಲೇರಿಯಾ 500 ಮೀಟರ್‌ ದೂರದಲ್ಲಿ ಶಾಲಾ ಸಮವಸ್ತ್ರದಲ್ಲಿದ್ದ ಬಾಲಕಿಯನ್ನು ಹೂಳಲಾಗಿದೆ ಎಂದು ದೂರುದಾದ ಹೇಳಿದ ಜಾಗದಲ್ಲಿಯೇ ಶೋಧ ನಡೆಸಲಾಯಿತು. 13ನೇ ಜಾಗ ಹೊರತುಪಡಿಸಿ ಹೊಸ ಜಾಗದಲ್ಲಿ ಉತ್ಖನನ ಆರಂಭವಾಗಿದೆ.

RELATED ARTICLES

Latest News