ಹುಬ್ಬಳಿ,ಜೂ.14- ನೈರುತ್ಯ ರೈಲ್ವೆಯು ವಿವಿಧ ವಿಶೇಷ ರೈಲುಗಳ ಸಂಚಾರ ಸೌಲಭ್ಯ ವಿಸ್ತರಣೆ ಮಾಡಲು ನಿರ್ಧರಿಸಿದ್ದು, ಹುಬ್ಬಳ್ಳಿ-ರಾಮೇಶ್ವರಂ (07355) ವಿಶೇಷ ರೈಲು ಸಂಚಾರವನ್ನು ಜು.6 ರಿಂದ ಡಿ.28 ರವರೆಗೆ, ರಾಮೇಶ್ವರಂ-ಹುಬ್ಬಳ್ಳಿ (07356) ರೈಲು ಸಂಚಾರವನ್ನು ಜು.1ರಿಂದ ಡಿ.31ರವರೆಗೆ ವಿಸ್ತರಿಸಿದೆ.
ಹುಬ್ಬಳ್ಳಿ-ಕೆಸಿಆರ್ ಬೆಂಗಳೂರು (07339) ರೈಲು ಸಂಚಾರವನ್ನು ಜು. 1ರಿಂದ ಡಿ.31ರವರೆಗೆ, ಕೆಸಿಆರ್ ಬೆಂಗಳೂರು-ಹುಬ್ಬಳ್ಳಿ (07340) ರೈಲು ಸಂಚಾರವನ್ನು ಜು. 2ರಿಂದ 2025ರ ಜ.1ರವರೆಗೆ ವಿಸ್ತರಿಸಲಾಗಿದೆ. ಹುಬ್ಬಳ್ಳಿ-ಡಾ.ಎಂ.ಜಿ.ಆರ್. ಚೆನ್ನೈ ಸೆಂಟ್ರಲ್-ಹುಬ್ಬಳ್ಳಿ (22697/22698) ಸಾಪ್ತಾಹಿಕ ರೈಲು ಯಶವಂತಪುರ ನಿಲ್ದಾಣದ ಬದಲು, ಯಶವಂತಪುರ ಬೈಪಾಸ್ ಮೂಲಕ ಸಂಚರಿಸಲಿದೆ.
ಸೆ. 7ರಿಂದ ಹುಬ್ಬಳ್ಳಿ- ಡಾ.ಎಂ.ಜಿ.ಆರ್. ಚೆನ್ನೈ ಸೆಂಟ್ರಲ್ (22697) ರೈಲು, ಸೆ.8ರಿಂದ ಡಾ.ಎಂ.ಜಿ.ಆರ್. ಚೆನ್ನೈ ಸೆಂಟ್ರಲ್-ಹುಬ್ಬಳ್ಳಿ (22698) ರೈಲು ಬದಲಿ ಮಾರ್ಗದಲ್ಲಿ ಸಂಚರಿಸಲಿದೆ ಎಂದು ಪ್ರಕಟಣೆ ತಿಳಿಸಿದೆ.