ಜಮ್ಮು : ನಾಟಕೀಯ ಬೆಳವಣಿಗೆಯೊಂದರಲ್ಲಿ ಭಾರತ ಮತ್ತು ಪಾಕ್ ನಡುವೆ ಅಮೇರಿಕ ಅಧ್ಯಕ್ಷ ಕದನ ವಿರಾಮ ಘೋಷಣೆ ಮಾಡಿದ ಕೆಲವೇ ಗಂಟೆಯೊಳಗೆ ಉಗ್ರರ ತವರೂರು ಪಾಕಿಸ್ತಾನ್ ತನ್ನ ಅಸಲಿ ಬುದ್ದಿ ತೋರಿಸಿದೆ.
ಕದನ ವಿರಾಮಕ್ಕೆ ಒಪ್ಪಿಕೊಂಡಿದ್ದ ಪಾಕಿಸ್ತಾನ ಇಂದು 7 ಗಂಟೆ ಹೊತ್ತಿಗೆ ಮತ್ತೆ ಭಾರತದ ಮೇಲೆ ಡ್ರೋನ್ ದಾಳಿ ಆರಂಭಿಸಿದೆ. ಭಾರತೀಯ ವಾಯು ರಕ್ಷಣಾ ಪಡೆ ಯಶಸ್ವಿಯಾಗಿ ಪಾಕ್ ಡ್ರೋನ್ ಗಳನ್ನು ಹೊಡೆದುರುಳಿಸುತ್ತಿದೆ. ಈ ನಡುವೆ ಗಂಟೆಗಳ ಹಿಂದಷ್ಟೇ ಘೋಷಣೆ ಆಗಿದ್ದ ಕದನ ವಿರಾಮ ಮುರಿದು ಬಿದ್ದಿದೆ. ಜಮ್ಮು ಮತ್ತು ಕಾಶ್ಮೀರದ ಹಲವಡೆ ಪಾಕಿಸ್ತಾನದ ನೂರಾರು ಡ್ರೋನ್ ಗಳು ಕಾಣಿಸಿಕೊಂಡಿದ್ದು ಭಾರತ ಅವುಗಳನ್ನುನಿಷ್ಟ್ರೀಯಗೊಳಿಸುತ್ತಿದೆ.
ಕದನ ವಿರಾಮ ಘೋಷಣೆಯಾಗಿದೆ ಎಂದು ಹೇಳಿದ ಕೇವಲ ಅರ್ಧ ಗಂಟೆಯಲ್ಲಿ ಮತ್ತೆ ಗುಜರಾತ್ ಜಮ್ಮು ಕಾಶ್ಮೀರ ರಾಜಸ್ಥಾನದಲ್ಲಿ ಪಾಕಿಸ್ತಾನದಿಂದ ಡ್ರೋನ್ ಹಾಗೂ ಕ್ಷಿಪಣಿ ದಾಳಿ ನಡೆದಿದೆ.
ಜಮ್ಮು-ಕಾಶ್ಮೀರ ಮುಖ್ಯಮಂತ್ರಿ ಉಮರ್ ಅಬ್ದುಲ್ಲಾ ಅವರು ಸಮರ ವಿರಾಮ ಒಪ್ಪಂದವಾಗಿಲ್ಲ ಸೇನೆ ಮತ್ತು ಸರ್ಕಾರದ ನಡುವೆ ಅಲ್ಲಿ ಗೊಂದಲ ಏರ್ಪಟ್ಟು ಮತ್ತೆ ಭಾರತದ ಮೇಲೆ ದಾಳಿ ನಡೆಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
ಅಮೆರಿಕ ಅಧ್ಯಕ್ಷ ಅವರು ಎರಡು ದೇಶಗಳು ಕದನ ವಿರಾಮಕ್ಕೆ ಒಪ್ಪಿದೆ ಎಂದು ಹೇಳುವ ಮೂಲಕ ಎರಡು ದೇಶಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳುವ ಮರುಕ್ಷಣವೇ ಪಾಕಿಸ್ತಾನ ದ್ರೋಣ್ ದಾಳಿ ಆರಂಭಿಸಿದೆ. ಇದು ಅಮೆರಿಕಕ್ಕೂ ಕೂಡ ಮುಖಭಂಗವಾಗಿದ್ದು, ಜಗತ್ತಿನ ಮುಂದೆ ಪಾಕಿಸ್ತಾನ ಬೆತ್ತಲೆಯಾಗಿದೆ. ಪ್ರಮುಖವಾಗಿ ಶ್ರೀನಗರ ದಲ್ಲಿ ಸೆಲ್ ದಾಳಿ ನಡೆ ಮತ್ತು ದ್ರೋಣ್ ದಾಳಿ ನಡೆದಿದ್ದು ಇದಕ್ಕೆ ಬಿಎಸ್ಎಫ್ ಪಡೆಗಳು ಮತ್ತು ರಕ್ಷಣಾ ಪಡೆಗಳು ತಕ್ಕ ಪ್ರತ್ಯುತ್ತರ ನೀಡಿದೆ.
ಪಾಕಿಸ್ತಾನದ ಈ ಕುಚೋದ್ಯದ ವಿರುದ್ಧ ಮತ್ತೆ ಸಮಾರಾ ಸಾರಲು ಭಾರತದ ಸೇನಾಪಡೆಗಳು ಮುಂದಾಗಿದ್ದು ಪಾಕಿಸ್ತಾನದ ಡ್ರೋನ್ ಗಳನ್ನ ಹೊಡೆದುರುಳಿಸುವ ಪ್ರಯತ್ನಗಳು ಮುಂದುವರೆದಿದೆ. ಜೋರು ಶಬ್ದದಿಂದ ಜನರು ಭಯಭೀತರಾಗುತ್ತಿದ್ದಾರೆ ಸಂಪೂರ್ಣ ಪ್ರದೇಶ ಬ್ಲಾಕ್ ಔಟ್ ಮಾಡಲಾಗಿದೆ.