ನವದೆಹಲಿ, ಫೆ. 21 ಮದುವೆ ವಿಫಲವಾದರೆ ಅದೇ ಜೀವನದ ಅಂತ್ಯವಲ್ಲ, ಧೈರ್ಯವಾಗಿ ಜೀವನ ಸಾಗಿಸಿ ಎಂದು ಸುಪ್ರೀಂಕೋರ್ಟ್ ದಂಪತಿಗೆ ಕಿವಿಮಾತು ಹೇಳಿದೆ. ಪ್ರೀತಿ ಹುಟ್ಟಲು ನಾನಾ ಕಾರಣಗಳಿರುತ್ತವೆ ಹಾಗೆಯೇ ಅದು ಅಂತ್ಯಗೊಳ್ಳಲು ಅದಕ್ಕಿಂತ ಹೆಚ್ಚು ಕಾರಣಗಳಿರುತ್ತವೆ, ಕೆಲವರು ಸಹಿಸಿಕೊಂಡು ಜೀವನ ಪೂರ್ತಿ ಜತೆಗಿರುವ ನಿರ್ಧಾರ ಮಾಡುತ್ತಾರೆ ಇನ್ನು ಕೆಲವರಿಗೆ ಇಗೋ ಹರ್ಟ್ ಆಗಿ ದೂರವಾಗುವ ನಿರ್ಧಾರ ತೆಗೆದುಕೊಳ್ಳುತ್ತಾರೆ.
ಕೇವಲ ಅರೇಂಜ್ ಮದುವೆಗಳು ಮಾತ್ರವಲ್ಲದೆ ಪ್ರೀತಿಸಿ ಮದುವೆಯಾದ ಜೋಡಿಗಳು ಕೂಡ ವಿಚ್ಛೇದನದ ಹಂತಕ್ಕೆ ಹೋಗುತ್ತಾರೆ. ಮದುವೆ ವಿಫಲವಾಗಿದೆ ನ್ಯಾಯಮೂರ್ತಿ ಅಭಯ್ ಓಕಾ ನೇತೃತ್ವದ ನ್ಯಾಯಪೀಠವು ಮೇ 2020 ರಲ್ಲಿ ನಡೆದ ವಿವಾಹವನ್ನು ವಿಸರ್ಜಿಸಿ, ದಂಪತಿ ಪರಸ್ಪರ ಸಲ್ಲಿಸಿದ್ದ ಎಲ್ಲಾ
ಎಂಬ ಮಾತ್ರ ಜೀವನವೇ ಮುಗಿದಿದೆ ಎಂದರ್ಥವಲ್ಲ, ಧೈರ್ಯವಾಗಿ ಮುನ್ನುಗ್ಗಿ ಎಂದು ಸುಪ್ರೀಂಕೋರ್ಟ್ ಹೇಳಿದೆ. 17 ವಿಚಾರಣೆಗಳನ್ನು ರದ್ದುಗೊಳಿಸಿ ಮತ್ತೆ ಹೊಸ ಜೀವನ ಆರಂಭಿಸಲು ಸಲಹೆ ನೀಡಿತು. ದಂಪತಿ ಇಬ್ಬರಿಗೂ ಚಿಕ್ಕ ವಯಸ್ಸು, ಅವರು ತಮ್ಮ ಭವಿಷ್ಯದ ಬಗ್ಗೆ ಆಲೋಚಿಸಬೇಕು. ಮದುವೆ ವಿಫಲವಾದರೆ ಅದು ಇಬ್ಬರ ಜೀವನ ಕೊನೆಯಲ್ಲ, ಹೊಸ ಜೀವನವನ್ನು ಶುರು ಮಾಡಬೇಕು. ಹಾಗೆಯೇ ಇಬ್ಬರೂ ಕೂಡ ಶಾಂತಿಯುತವಾಗಿ ವರ್ತಿಸಬೇಕು ಎಂದು ಕಿವಿಮಾತು ಹೇಳಿದ್ದಾರೆ.
ಮುಟ್ಟಾದಾಗ ರೂಮಿನಲ್ಲೇ ಇರಬೇಕು, ಸ್ನಾನ ಮಾಡಬಾರದು ಎಂದಿದ್ದಕ್ಕೆ ಮಹಿಳೆ ವಿಚ್ಛೇದನ ಕೊಟ್ಟಿದ್ದರು. ಮದುವೆಯಾದ ಒಂದು ವರ್ಷದೊಳಗೆ, ಪತಿ ಮತ್ತು ಅತ್ತೆ-ಮಾವರಿಂದ ನಿರಂತರ ಕಿರುಕುಳ ಅನುಭವಿಸಿ ಪತ್ನಿಯು ತನ್ನ ಗಂಡನ ಮನೆಯಿಂದ ಹೊರಹೋಗಬೇಕಾದ ದುರದೃಷ್ಟಕರ ಪ್ರಕರಣಗಳಲ್ಲಿ ಇದೂ ಒಂದು ಎಂದು ನ್ಯಾಯಾಲಯ ಬಣ್ಣಿಸಿದೆ.
ವಕೀಲರು ನ್ಯಾಯಾಲಯವು ಭಾರತದ ಸಂವಿಧಾನದ 142 ನೇ ವಿಧಿಯ ಅಡಿಯಲ್ಲಿ ವಿವಾಹವನ್ನು ರದ್ದುಗೊಳಿಸಲು ವಿನಂತಿಸಿದರು. 2020 ರಲ್ಲಿ ಮದುವೆಯಾದ ಸ್ವಲ್ಪ ಸಮಯದ ನಂತರವೇ ಅವರಿಬ್ಬರ ಸಂಬಂಧ ಹಳಸಿದ ಕಾರಣ, ಆ ಮಹಿಳೆ ತನ್ನ ಹೆತ್ತವರ ಮನೆಯಲ್ಲಿ ವಾಸಿಸುತ್ತಿದ್ದಾಳೆ.