ಬೆಂಗಳೂರು, ಜು.2- ಪ್ರತಿಷ್ಠಿತ ಬ್ರ್ಯಾಂಡ್ ಕಂಪೆನಿಗಳ ಬಟ್ಟೆ ಗಳನ್ನು ನಕಲು ಮಾಡಿ ಅಸಲು ಮಾಲುಗಳೆಂದು ಮಾರಾಟ ಮಾಡು ತ್ತಿದ್ದ ಅಂಗಡಿ ಮೇಲೆ ಸಿಸಿಬಿ ಪೊಲೀಸರು ದಾಳಿ ಮಾಡಿ 1.38 ಕೋಟಿ ರೂ. ಮೌಲ್ಯದ ನಕಲಿ ಬಟ್ಟೆಗಳನ್ನು ವಶಪಡಿಸಿಕೊಂಡಿದ್ದಾರೆ.
ಬಿಇಎಂಎಲ್ ಲೇಔಟ್ 5ನೇ ಹಂತದ ನಿವಾಸಿ ನರಸಿಂಹರಾಜು(38) ಬಂಧಿತ ಬಟ್ಟೆ ವ್ಯಾಪಾರಿರಾಜರಾಜೇಶ್ವರಿ ನಗರ ಠಾಣಾ ವ್ಯಾಪ್ತಿಯ ಬಿಇಎಂಎಲ್ ಲೇಔಟ್ನಲ್ಲಿರುವ ಅಂಗಡಿಯೊಂದರಲ್ಲಿ ಪ್ರತಿಷ್ಠಿತ ಕಂಪೆನಿಗಳಾದ ನೈಕ್, ಪೂಮಾ, ಟಾಮಿಹಿಲ್ಫಿಗರ್, ಅಂಡರ್ ಆರ್ಮೋರ್, ಅಡಿಗಾಸ್, ಜರಾ ಕಂಪೆನಿಯ ಹೆಸರಿನಲ್ಲಿ ಬಟ್ಟೆಗಳನ್ನು ದಾಸ್ತಾನು ಮಾಡಿಕೊಳ್ಳಲಾಗಿತ್ತು.
ಈ ಬಟ್ಟೆಗಳನ್ನು ಕಂಪೆನಿಯ ಅಸಲು ಮಾಲುಗಳೆಂದು ಸಾರ್ವಜನಿಕರಿಗೆ ನಂಬಿಸಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದಾರೆಂಬ ಮಾಹಿತಿ ಸಿಸಿಬಿಯ ಆರ್ಥಿಕ ಅಪರಾಧ ದಳದ ಅಧಿಕಾರಿಗಳಿಗೆ ಲಭಿಸಿದೆ.
ತಕ್ಷಣ ಕಾರ್ಯಪ್ರವೃತ್ತರಾದ ಸಿಸಿಬಿ ಪೊಲೀಸರು ಅಂಗಡಿ ಮೇಲೆ ದಾಳಿ ಮಾಡಿ ಮಾರಾಟದಲ್ಲಿ ತೊಡಗಿದ್ದ ವ್ಯಕ್ತಿಯನ್ನು ವಶಕ್ಕೆ ಪಡೆದು 1.38 ಕೋಟಿ ಮೌಲ್ಯದ ಬಟ್ಟೆಗಳನ್ನು ಜಪ್ತಿ ಮಾಡಿದ್ದಾರೆ. ಆರೋಪಿ ವಿರುದ್ಧ ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಕಾಫಿರೈಟ್ ಕಾಯ್ದೆಯಡಿ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲಾಗಿದೆ.