ಪಾಲ್ಗರ್ , ಫೆ.25- ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಇಲ್ಲಿನ ಪಾಲಿ ಗ್ರಾಮದ ಬಳಿ 14 ಲಕ್ಷ ರೂಪಾಯಿ ಮುಖಬೆಲೆಯ ನಕಲಿ ನೋಟು ವಶಪಡಿಸಿಕೊಂಡಿದ್ದಾರೆ. ಖಚಿತ ಮಾಹಿತಿ ಅನ್ವಯ ವ್ಯಕ್ತಿಯೊಬ್ಬರು ಚೀಲವನ್ನು ಹೊತ್ತುಕೊಂಡು ಅನುಮಾನಾಸ್ಪದ ರೀತಿಯಲ್ಲಿ ತಿರುಗಾಡುತ್ತಿದ್ದ ಈ ವೇಳೆ ಕಾರಿನಲ್ಲಿ ಅಲ್ಲಿಗೆ ಬಂದು ಇಬ್ಬರು ಅದನ್ನು ಪಡೆಯುವಾಗ ದಾಳಿ ನಡೆಸಿ 100 ಮತ್ತು 500 ರೂಪಾಯಿ ಮುಖಬೆಲೆಯ ಪೊಲೀಸರು ಗಮನಿಸಿ 14 ಲಕ್ಷ ನಕಲಿ ನೋಟುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಮೂವರನ್ನು ವಶಕ್ಕೆ ಪಡೆದು ತಪಾಸಣೆ’ 1 ಲಕ್ಷ ರೂಪಾಯಿಯ ಅಸಲಿ ನೋಟುಗಳನ್ನು ಪತ್ತೆಯಾಗಿದೆ. ಅಸಲಿ ನೋಟುಗಳನ್ನು ಬಂಡಲ್‌ಗಳ ಮೇಲ್ಬಾಗ ಮತ್ತು ಕೆಳಭಾಗದಲ್ಲಿ ಇರಿಸಲಾಗಿದ್ದು, ಅವುಗಳ ನಡುವೆ ಚಿಲ್ಬನ್ ಬ್ಯಾಂಕ್ ಆಫ್ ಇಂಡಿಯಾ ಎಂದು
ಮುದ್ರಿಸಲಾದ ನಕಲಿ ಕರೆನಿ ನೋಟುಗಳನ್ನು ಸೇರಿಸಲಾಗಿದೆ ಎಂದು ವಾಡಾ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್‌ದತ್ತಾತ್ರೇಯ ಕಿಂದ್ರೆ ತಿಳಿಸಿದ್ದಾರೆ.
ಇವರು 3 ಲಕ್ಷ ನಕಲಿ ನೋಟುಗಳನ್ನು 1 ಲಕ್ಷ ರೂಪಾ ಅಸಲಿ ನೋಟಿಗೆ ಬದಲಾಯಿಸಲು ಯೋಜಿಸಿದ್ದರು ಪ್ರಸ್ತುತ ನಕಲಿ ನೋಟುಗಳ ಮೂಲವನ್ನು ಪತ್ತೆ ಹಚ್ಚಲು ಪೊಲೀಸರು ತನಿಖೆ ನಡೆಸುತ್ತಿದ್ದರು.
ಈ ಹಿಂದೆಯೂ ಎರಡು ಬಾರಿ ಇಲ್ಲಿನ ಗೋಹರ್ ಮತ್ತು ಶಿರೀಷ್ ಪದಾ ಪ್ರದೇಶಗಳಿಂದ ನಕಲಿ ನೋಟುಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಆರೋಪಿಗಳು ತಮ್ಮ ಮನೆಗಳಲ್ಲಿ ನಕಲಿ * ನೋಟುಗಳನ್ನು ಮುದ್ರಿಸಿ ಚಲಾವಣೆ ಮಾಡುತ್ತಿದ್ದರು ಎಂದು ಅಧಿಕಾರಿ ತಿಳಿಸಿದ್ದಾರೆ.