Sunday, September 8, 2024
Homeಅಂತಾರಾಷ್ಟ್ರೀಯ | Internationalಕುವೈತ್ ಬೆಂಕಿ ಅವಘಡದಲ್ಲಿ ಕೇರಳ ಮೂಲದ ಕುಟುಂಬ ಬಲಿ

ಕುವೈತ್ ಬೆಂಕಿ ಅವಘಡದಲ್ಲಿ ಕೇರಳ ಮೂಲದ ಕುಟುಂಬ ಬಲಿ

ಕುವೈತ್, ಜು.21- ಇಲ್ಲಿನ ಅಬ್ಬಾಸಿಯಲ್ಲಿರುವ ಅಪಾರ್ಟ್‍ಮೆಂಟ್‍ನಲ್ಲಿ ಸಂಭವಿಸಿದ ಬೆಂಕಿ ಅವಘಡದಲ್ಲಿ ಕೇರಳ ಮೂಲದ ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿದ್ದಾರೆ. ಮ್ಯಾಥ್ಯೂಸ್ ವರ್ಗೀಸ್ ಮುಳಕಲ್ (40), ಅವರ ಪತ್ನಿ ಲಿನಿ ಅಬ್ರಹಾಂ (35) ಮತ್ತು ಅವರ ಮಕ್ಕಳಾದ ಐರಿನ್ (14) ಮತ್ತು ಇಸಾಕ್ (9) ಮೃತ ದುರ್ದೈವಿಗಳು.

ಮ್ಯಾಥ್ಯೂ ಅವರು ಉದ್ಯೋಗಕ್ಕಾಗಿ ಕುವೈತ್‍ನ ಅಬ್ಬಾಸಿಯಾದಲ್ಲಿ ಕಳೆದ 15 ವರ್ಷಗಳಿಂದ ಕುಟುಂಬದೊಂದಿಗೆ ನೆಲೆಸಿದ್ದರು. ಲಿನಿ ಆರೋಗ್ಯ ಸಚಿವಾಲಯದ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದರು. ಐರಿನ್ ಮತ್ತು ಇಸಾಕ್ 9 ಮತ್ತು 4 ನೇ ತರಗತಿಯಲ್ಲಿ ಓದುತ್ತಿದ್ದರು. ರಾತ್ರಿ ಅವರು ಮಲಗುವ ಕೋಣೆಯಲ್ಲಿದ್ದ ಎ.ಸಿ ಯಂತ್ರದ ಶಾರ್ಟ್ ಸಕ್ರ್ಯೂಟ್‍ನಿಂದಾಗಿ ಮನೆಯಲ್ಲಿ ಅಗ್ನಿ ದುರಂತ ಸಂಭವಿಸಿದೆ. ಇದರಿಂದ ಇಡೀ ಕುಟುಂಬ ಸಜೀವ ದಹನವಾಗಿದೆ ಎಂದು ಕುಟುಂಬದವರು ಮಾಹಿತಿ ನೀಡಿದ್ದಾರೆ.

ಕೇರಳದ ಕೊಚ್ಚಿ ಬಳಿಯ ನೆಡುಂಬಸ್ಸರಿ ಮೂಲದವರಾದ ಮ್ಯಾಥ್ಯೂ ಮುಜಾಕಲ್ ತಾಯಿ ಹಾಗೂ ಮೂವರು ಸಹೋದರಿಯರನ್ನು ಅಗಲಿದ್ದಾರೆ. ಕಳೆದ ಗುರುವಾರವಷ್ಟೇ ಅವರು ತಮ್ಮ ಮಕ್ಕಳು ಹಾಗೂ ಪತ್ನಿ ಜೊತೆ ರಜೆ ಮುಗಿಸಿಕೊಂಡು ಕುವೈತ್‍ಗೆ ತೆರಳಿದ್ದರು. ಮ್ಯಾಥ್ಯೂ ಕೇರಳದಿಂದ ಕುವೈತನ ಮನೆ ಬಂದ ಬಳಿಕ ತಾಯಿಗೆ ಕರೆ ಮಾಡಿ ನಾವು ಸುರಕ್ಷಿತವಾಗಿ ಮನೆ ತಲುಪಿದ್ದೇವೆ. ದಣಿದಿರುವುದರಿಂದ ವಿಶ್ರಾಂತಿ ಪಡೆಯಬೇಕೆಂದು ಹೇಳಿ ಮಲಗಿದ್ದರು. ಈ ವೇಳೆ ಘಟನೆ ಸಂಭವಿಸಿದೆ.

ಇನ್ನು ಬೆಂಕಿ ಅವಘಡದ ವೇಳೆ ನೆರೆಹೊರೆಯವರು ಅಗ್ನಿಶಾಮಕ ಮತ್ತು ರಕ್ಷಣಾ ಘಟಕಕ್ಕೆ ಮಾಹಿತಿ ನೀಡಿದ್ದು ಅಗ್ನಿ ನಂದಿಸಿ ಕುಟುಂಬವನ್ನು ರಕ್ಷಿಸಲು ಸಾಧ್ಯವಾಗಿಲ್ಲ. ಕುವೈತ್‍ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಕೇರಳದಲ್ಲಿರುವ ಕುಟುಂಬದ ಸಂಬಂ„ಕರೊಂದಿಗೆ ಸಂಪರ್ಕದಲ್ಲಿದೆ ಮತ್ತು ಪಾರ್ಥಿವ ಶರೀರವನ್ನು ಆದಷ್ಟು ಬೇಗ ಮನೆಗೆ ಕಳುಹಿಸುವುದನ್ನು ಖಚಿತಪಡಿಸಿಕೊಳ್ಳುವುದಾಗಿ ಹೇಳಿದೆ.

RELATED ARTICLES

Latest News