Home ಇದೀಗ ಬಂದ ಸುದ್ದಿ ರೋಹಿತ್, ಕೊಹ್ಲಿ ನಿವೃತ್ತಿಗೆ ಸೂಕ್ತ ಕಾಲ : ಅಭಿಮಾನಿಗಳ ಆಕ್ರೋಶ

ರೋಹಿತ್, ಕೊಹ್ಲಿ ನಿವೃತ್ತಿಗೆ ಸೂಕ್ತ ಕಾಲ : ಅಭಿಮಾನಿಗಳ ಆಕ್ರೋಶ

0
ರೋಹಿತ್, ಕೊಹ್ಲಿ ನಿವೃತ್ತಿಗೆ ಸೂಕ್ತ ಕಾಲ : ಅಭಿಮಾನಿಗಳ ಆಕ್ರೋಶ

ಅಡಿಲೇಡ್, ಡಿ.8– ಆಸ್ಟ್ರೇಲಿಯಾ ವಿರುದ್ಧ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ 10 ವಿಕೆಟ್ ಗಳ ಹೀನಾಯ ಸೋಲು ಕಂಡ ಬೆನ್ನಲ್ಲೇ ತಂಡದಲ್ಲಿರುವ ಹಿರಿಯ ಆಟಗಾರರು ನಿವೃತ್ತಿ ಘೋಷಿಸಲು ಇದು ಸರಿಯಾದ ಸಮಯ ಎಂದು ಭಾರತ ತಂಡದ ಅಭಿಮಾನಿಗಳು ತಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪರ್ತ್ ಟೆಸ್ಟ್ ನಲ್ಲಿ ತವರಿನ ಅಂಗಳದಲ್ಲಿ ಹೀನಾಯ ಸೋಲು ಕಂಡಿದ್ದ ಭಾರತ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ್ದ ಜಸ್ ಪ್ರೀತ್ ಬೂಮ್ರಾ ಅವರೇ ಇಡೀ ಸರಣಿಯನ್ನು ಮುನ್ನಡೆಸಬೇಕು ಎಂದು ಮಾಜಿ ಕ್ರಿಕೆಟಿಗ ಸುನೀಲ್ ಗಾವಸ್ಕರ್ ಆಗ್ರಹಿಸಿದ್ದರು.

ಆದರೆ ಎರಡನೇ ಟೆಸ್ಟ್ ಪಂದ್ಯದಲ್ಲಿ ಬೂಮ್ರಾ ಬದಲಿಗೆ ರೋಹಿತ್ ಶರ್ಮಾ ಅವರೇ ತಂಡವನ್ನು ಮುನ್ನಡೆಸಿದ್ದು ನಾಯಕರಾಗಿ ಸರಿಯಾದ ನಿರ್ಣಯ ತೆಗೆದುಕೊಳ್ಳುವಲ್ಲಿ ಎಡವಿದ್ದಲ್ಲದೆ ಬ್ಯಾಟಿಂಗ್ ನಲ್ಲೂ ಎರಡಂಕಿ (3 ಹಾಗೂ 6 ರನ್) ದಾಟಲು ಸಾಧ್ಯವಾಗದೇ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಯುವ ಆಟಗಾರರಿಗೆ ದಾರಿ ಕಲ್ಪಿಸಿ:
ಪರ್ತ್ ಟೆಸ್ಟ್ ನ ಎರಡನೇ ಇನಿಂಗ್ಸ್ ನಲ್ಲಿ ಶತಕ ಸಿಡಿಸಿದ್ದ ವಿರಾಟ್ ಕೊಹ್ಲಿ ಕೂಡ ಅಡಿಲೇಡ್ ಟೆಸ್ಟ್ ನಲ್ಲಿ ಅಲ್ಪ ಮೊತ್ತಕ್ಕೆ (7 ಮತ್ತು 11 ರನ್)ವಿಕೆಟ್ ಒಪ್ಪಿಸಿದರೆ, ವಾಷಿಂಗ್ಟನ್ ಸುಂದರ್ ಬದಲಿಗೆ ಪ್ಲೇಯಿಂಗ್ 11ರಲ್ಲಿ ಸ್ಥಾನ ಪಡೆದಿದ್ದ ರವಿಚಂದ್ರನ್ ಅಶ್ವಿನ್ ಕೂಡ ಪರಿಣಾಮಕಾರಿ ಬೌಲಿಂಗ್ (1 ವಿಕೆಟ್) ಮಾಡುವಲ್ಲಿ ಎಡವಿದ್ದು, ಈ ಹಿರಿಯ ಆಟಗಾರರು ತಮ ಕ್ರಿಕೆಟ್ ಜೀವನಕ್ಕೆ ನಿವೃತ್ತಿ ಘೋಷಿಸಿ ಯುವ ಆಟಗಾರರಿಗೆ ದಾರಿ ಕಲ್ಪಿಸಿಕೊಡಬೇಕೆಂದು ಮತ್ತೊಬ್ಬ ಅಭಿಮಾನಿ ತಮ ಎಕ್‌್ಸ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಬಿಸಿಸಿಐ ನಡೆಗೆ ಖಂಡನೆ:
ದಕ್ಷಿಣ ಆಫ್ರಿಕಾ ತಂಡವನ್ನು ಮಣಿಸಿ ಟ್ವೆಂಟಿ-20-ಐ ವಿಶ್ವಕಪ್ ಗೆದ್ದ ಬೆನ್ನಲ್ಲೇ ಬಿಸಿಸಿಐ ಆಟಗಾರರಿಗೆ 125 ಕೋಟಿ ಬಹುಮಾನ ಘೋಷಿಸಿತ್ತು. ಆದರೆ ತಂಡವು ಈ ರೀತಿಯ ಹೀನಾಯ ಸೋಲು ಕಂಡ ಅದರ ನಿಲುವೇನು ಎಂದು ಅಭಿಮಾನಿಗಳು ಬಿಸಿಸಿಐ ನಡೆಯನ್ನು ಟೀಕಿಸಿದೆ.