ರೋಹಿತ್ ಶರ್ಮಾ ಶತಕ, ಭಾರತಕ್ಕೆ ಇನ್ನಿಂಗ್ಸ್ ಮುನ್ನಡೆ

ನಾಗ್ಪುರ, ಫೆ. 10- ನಾಯಕನ ಜವಾಬ್ದಾರಿಯುತ ಆಟವಾದ ಟೀಮ್ ಇಂಡಿಯಾದ ಕಪ್ತಾನ ರೋಹಿತ್ ಶರ್ಮಾ ( 102* ರನ್, 14 ಬೌಂಡರಿ, 2 ಸಿಕ್ಸರ್) ಶತಕದ ನೆರವಿನಿಂದ ತಂಡವು ಮೊದಲ ಇನ್ನಿಂಗ್ಸ್‍ನಲ್ಲಿ ಮುನ್ನಡೆ ಗಳಿಸಿದೆ. ಮೊದಲ ದಿನದಾಟದ ಅಂತ್ಯಕ್ಕೆ ಒಂದು ವಿಕೆಟ್ ಕಳೆದುಕೊಂಡು ದ್ವಿತೀಯ ದಿನದ ಆಟ ಮುಂದುವರೆಸಿದ ರವಿಚಂದ್ರನ್ ಅಶ್ವಿನ್ ಹಾಗೂ ರೋಹಿತ್ ಶರ್ಮಾ (56* ರನ್) ಆರಂಭದಿಂದಲೂ ಎಚ್ಚರಿಕೆಯ ಆಟ ಪ್ರದರ್ಶಿಸಿ ಇನ್ನಿಂಗ್ಸ್ ಕಟ್ಟುವ ಜವಾಬ್ದಾರಿ ಹೊತ್ತರು. ಮುರ್ಫಿ ಕಮಾಲ್:ಆಸ್ಟ್ರೇಲಿಯಾ ತಂಡದ ಪರ ಪಾದಾರ್ಪಣೆ […]

ಇಂಡಿಯಾದ ನಾಯಕ ರೋಹಿತ್ ಶರ್ಮಾ ಆಸ್ಪತ್ರೆಗೆ ದಾಖಲು

ಮಿರ್‍ಪುರ್, ಡಿ.7- ಬಾಂಗ್ಲಾದೇಶ ವಿರುದ್ಧ ನಡೆಯುತ್ತಿರುವ 2ನೇ ಏಕದಿನ ಪಂದ್ಯದ ವೇಳೆ ಟೀಮ್ ಇಂಡಿಯಾದ ನಾಯಕ ರೋಹಿತ್ ಶರ್ಮಾ ಅವರ ಕೈ ಬೆರಳಿಗೆ ಗಾಯ ಮಾಡಿಕೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಟಾಸ್ ಗೆದ್ದು ಬಾಂಗ್ಲಾದೇಶ ಮೊದಲು ಬ್ಯಾಟಿಂಗ್ ಮಾಡುವ ನಿರ್ಧಾರ ಕೈಗೊಂಡಿತು. 2ನೆ ಓವರ್‍ನಲ್ಲಿ ಮೊಹಮ್ಮದ್ ಶಿರಾಜ್ ಬೌಲಿಂಗ್‍ನಲ್ಲಿ ಬಾಂಗ್ಲಾದ ಆರಂಭಿಕ ಆಟಗಾರ ಅನಮುಲ್ ಹಕ್‍ರ ಬ್ಯಾಟ್ ಸ್ಪರ್ಶಿಸಿದ ಚೆಂಡನ್ನು ಹಿಡಿಯುವ ಭರದಲ್ಲಿ ಟೀಮ್ ಇಂಡಿಯಾದ ನಾಯಕ ರೋಹಿತ್ ಶರ್ಮಾ ಅವರು ತಮ್ಮ ಬಲಗೈನ ಬೆರಳಿಗೆ ಗಾಯ ಮಾಡಿಕೊಂಡಿದ್ದಾರೆ. […]

BIG NEWS: ವಿಶ್ವಕಪ್‍ ಸೆಮಿಫೈನಲ್‌ನಿಂದ ರೋಹಿತ್ ಶರ್ಮಾ ಔಟ್?

ಅಡಿಲೇಡ್, ನ.8- ನೆಟ್ ಸೆಷನ್‍ನಲ್ಲಿ ಬ್ಯಾಟಿಂಗ್ ಅಭ್ಯಾಸದ ವೇಳೆ ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ಅವರ ಮುಂಗೈಗೆ ಗಂಭೀರ ಗಾಯವಾಗಿದೆ. ಗುರುವಾರ ನಡೆಯಲಿರುವ ಇಂಗ್ಲೆಂಡ್ ವಿರುದ್ಧದ ಟಿ20 ವಿಶ್ವಕಪ್‍ನ ಸೆಮಿಫೈನಲ್‍ಗೆ ಮುನ್ನ ರೋಹಿತ್ ಗಾಯಗೊಂಡಿರುವುದು ಭಾರತ ತಂಡಕ್ಕೆ ಆತಂಕ ಶುರುವಾಗಿದೆ. ತಂಡದ ತರಬೇತುದಾರ ಎಸ್ ರಘು ಅವರಿಂದ ಒಂದು ಶಾರ್ಟ್ ಬಾಲ್ ಅವರ ಬಲ ಮುಂದೋಳಿಗೆ ಬಡಿಯಿತು ತಕ್ಷಣವೇ ತೀವ್ರ ನೋವು ಅನುಭವಿಸಿ ಅಭ್ಯಾಸ ಮೊಟಕುಗೊಳಿಸಿ ಚಿಕಿತ್ಸೆಗೆ ತೆರಳಿದರು. ನಂತರ ಅವರ ಬಲಗೈಗೆ ದೊಡ್ಡ […]

ಏಷ್ಯಾ ಕಪ್ ಪಂದ್ಯದ ಭವಿಷ್ಯ ಬಿಸಿಸಿಐ ನಿರ್ಧರಿಸಲಿದೆ ; ರೋಹಿತ್

ನವದೆಹಲಿ,ಅ.22- ಪಾಕಿಸ್ತಾನದಲ್ಲಿ ನಡೆಯಲಿರುವ ಏಷ್ಯಾ ಕಪ್ ಪಂದ್ಯದಲ್ಲಿ ಭಾರತ ತಂಡ ಭಾಗವಹಿಸುವ ಬಗ್ಗೆ ಬಿಸಿಸಿಐ ನಿರ್ಧರಿಸಲಿದೆ ಎಂದು ಭಾರತೀಯ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮ ಅಭಿಪ್ರಾಯಪಟ್ಟಿದ್ದಾರೆ. ಸಧ್ಯ ನಾವು ಟಿ-20 ವಿಶ್ವಕಪ್ ಬಗ್ಗೆ ಮಾತ್ರ ತಲೆಕೆಡಿಸಿಕೊಂಡಿದ್ದೇವೆ. ನಮಗೆ ಮೊದಲು ಕಪ್ ಗೆಲ್ಲುವುದು ಮುಖ್ಯ ಇತರ ಪಂದ್ಯಗಳ ಬಗ್ಗೆ ಬಿಸಿಸಿಐ ತೀರ್ಮಾನ ಕೈಗೊಳ್ಳಲಿದೆ ಎಂದು ಅವರು ತಿಳಿಸಿದ್ದಾರೆ. 2023ರಲ್ಲಿ ಪಾಕ್‍ನಲ್ಲಿ ನಡೆಯಲಿರುವ ಏಷ್ಯಾ ಕಪ್ ಪಂದ್ಯದಲ್ಲಿ ಭಾರತ ಭಾಗವಹಿಸುತ್ತಿಲ್ಲ. ಒಂದು ವೇಳೆ ತಟಸ್ಥ ಸ್ಥಳದಲ್ಲಿ ಪಂದ್ಯ ನಡೆದರೆ […]