Friday, November 22, 2024
Homeರಾಷ್ಟ್ರೀಯ | Nationalಡಿಜಿಪಿ ಡಿಜಿಪಿ ಕಮಲ್ ಪಂಥ್ ಅವರಿಗೆ ನಾಳೆ ಬೀಳ್ಕೊಡುಗೆ

ಡಿಜಿಪಿ ಡಿಜಿಪಿ ಕಮಲ್ ಪಂಥ್ ಅವರಿಗೆ ನಾಳೆ ಬೀಳ್ಕೊಡುಗೆ

ಬೆಂಗಳೂರು,ಜೂ.28- ಗೃಹ ರಕ್ಷಕದಳ ಮತ್ತು ಅಗ್ನಿಶಾಮಕ ದಳದ ಡಿಜಿಪಿ ಕಮಲ್ ಪಂಥ್ ಅವರು ನಾಳೆ ಸೇವೆಯಿಂದ ನಿವೃತ್ತರಾಗು ತ್ತಿದ್ದು, ಅವರಿಗೆ ನಾಳೆ ಬೀಳ್ಕೊಡುಗೆ ಕವಾಯತು ಹಮಿಕೊಳ್ಳಲಾಗಿದೆ.ಕೋರಮಂಗಲದ ಕೆಎಸ್ಆರ್ಪಿ ಪರೇಡ್ ಮೈದಾನದಲ್ಲಿ ನಾಳೆ ಬೆಳಗ್ಗೆ ಬೀಳ್ಕೊಡುಗೆ ಕವಾಯತು ಏರ್ಪಡಿಸಲಾಗಿದ್ದು, ಕಾರ್ಯಕ್ರಮದಲ್ಲಿ ಇಲಾಖೆಯ ಹಿರಿಯ ಹಾಗೂ ಕಿರಿಯ ಅಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ.

ಯುಪಿಎಸ್ಸಿ ಪರೀಕ್ಷೆ ಬರೆದ ಕಮಲ್ಪಂಥ್ ಅವರು 1990ರಲ್ಲಿ ಕರ್ನಾಟಕ ಕೇಡರ್ ಪೊಲೀಸ್ ಅಧಿಕಾರಿಯಾಗಿ ಆಯ್ಕೆಯಾದ ನಂತರ ತರಬೇತಿ ಮುಗಿಸಿ ಶಿವಮೊಗ್ಗ, ದಕ್ಷಿಣಕನ್ನಡ, ಮಂಗಳೂರು ಮುಂತಾದ ಕಡೆ ಎಸ್ಪಿಯಾಗಿ ಸೇವೆ ಸಲ್ಲಿಸಿದ್ದಾರೆ.

ಸಿಬಿಐನಲ್ಲೂ ಎಸ್ಪಿಯಾಗಿ ಕರ್ತವ್ಯ ನಿರ್ವಹಿಸಿ ನಂತರ ಕೇಂದ್ರ ವಲಯ ಐಜಿಪಿಯಾಗಿಯೂ ಸೇವೆ ಸಲ್ಲಿಸಿದ್ದಾರೆ. ತದನಂತರದಲ್ಲಿ ಹೆಚ್ಚುರಿ ಪೊಲೀಸ್ ಮಹಾನಿರ್ದೇಶಕರಾಗಿ (ಎಡಿಜಿಪಿ) ಕಾರಾಗೃಹ, ಕಾನೂನು ಮತ್ತು ಸುವ್ಯವಸ್ಥೆ ವಿಭಾಗದಲ್ಲಿ, ನಂತರ ಬೆಂಗಳೂರುನಗರ ಪೊಲೀಸ್ ಆಯುಕ್ತರಾಗಿ ಸೇವೆ ಸಲ್ಲಿಸಿದ್ದು, ಆ ಸಂದರ್ಭದಲ್ಲಿ ಅವರು ಸಾಕಷ್ಟು ಸುಧಾರಣೆ ಮಾಡಿದ್ದಾರೆ.

ಮಾಸಿಕ ಜನಸಂಪರ್ಕ ಸಭೆ, ಸಾರ್ವಜನಿಕ ನೆರವಿಗೆ 112 ಸೇರಿದಂತೆ ಹಲವು ಜನಪರ ಕಾರ್ಯಗಳನ್ನು ಜಾರಿಗೆ ತಂದಿದ್ದಾರೆ. ಪ್ರಸ್ತುತ ಕಮಲ್ ಪಂಥ್ ಅವರು ಅಗ್ನಿಶಾಮಕ ಮತ್ತು ಗೃಹರಕ್ಷಕ ದಳದ ಡಿಜಿಪಿಯಾಗಿ ಸೇವೆ ಸಲ್ಲಿಸುತ್ತಿದ್ದು, ನಾಳೆ ನಿವೃತ್ತಿ ಹೊಂದಲಿದ್ದಾರೆ.
ಕಮಲ್ ಪಂಥ್ ಅವರ ಅತ್ಯುತ್ತಮ ಹಾಗೂ ಶ್ಲಾಘನೀಯ ಸೇವೆಗಾಗಿ ರಾಷ್ಟ್ರಪತಿಯವರ ಪದಕಗಳು ಲಭಿಸಿವೆ.

ಕಮಲ್ಪಂಥ್ ಅವರು ನಿವೃತ್ತಿಯಾಗುತ್ತಿರುವ ಹಿನ್ನಲೆಯಲ್ಲಿ ಹಿರಿಯ ಎಡಿಜಿಪಿ ಪ್ರಣವ್ ಮೊಹಾಂತಿ ಅವರು ಡಿಜಿಪಿ ಹುದ್ದೆಗೆ ಬಡ್ತಿ ಪಡೆಯಲಿದ್ದಾರೆ.

RELATED ARTICLES

Latest News