ಥಾಣೆ, ಆ.26-ನವಿ ಮುಂಬೈನಲ್ಲಿ ಮದ್ಯದ ಅಂಗಡಿ ಪರವಾನಗಿ ಕೊಡಿಸುವುದಾಗಿ ಭರವಸೆ ನೀಡಿ ನಾಶಿಕ್‌ನ ಯುವ ರೈತನಿಗೆ 1.44 ಕೋಟಿ ರೂ. ವಂಚಿಸಿರು ಘಟನೆ ನಡೆದಿದೆ. ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಕಲ್ಯಾಣ್ ಮೂಲದ ವ್ಯಕ್ತಿಯೊಬ್ಬ ನವಿ ಮುಂಬೈನ ಪನ್ವೇಲ್‌ನಲ್ಲಿರುವ ಮದ್ಯದ ಅಂಗಡಿಯ ಪರವಾನಗಿಯನ್ನು ಕೊಡಿಸುವುದಾಗಿ ರೈತನ ಮನವೊಲಿಸಿದ್ದ.
ಅವರನ್ನು ನಂಬಿ, ನೆರೆಯ ನಾಶಿಕ್ ಜಿಲ್ಲೆಯ ನಿಫಾದ್‌ಗ್ರಮದ ರೈತ , ತನ್ನ ಸಹೋದರನೊಂದಿಗೆ ಜುಲೈ 2024 ರಿಂದ ಈ ವರ್ಷದ ಜನವರಿ ನಡುವೆ ಬಹು ಕಂತುಗಳಲ್ಲಿ 1.44 ಕೋಟಿ ರೂ.ಗಳನ್ನು ಪಾವತಿಸಿದ್ದಾನೆ.
ಮೊತ್ತವನ್ನು ಸಂಗ್ರಹಿಸಿದ ನಂತರ, ಆರೋಪಿ ಮದ್ಯದ ಅಂಗಡಿ ಮಾಲೀಕರಿಗೆ 61 ಲಕ್ಷ ರೂ.ಗಳನ್ನು ಪಾವತಿಸಿದ್ದಾನೆ, ಉಳಿದ 83 ಲಕ್ಷ ರೂ.ಗಳನ್ನು ದುರುಪಯೋಗಪಡಿಸಿಕೊಂಡಿದ್ದಾನೆ ಎಂದು ಎಂಎಫ್‌ಸಿ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ವಹಿವಾಟಿನಲ್ಲಿ ಕೆಲವು ಸಂದೇಹವಿದೆ ಎಂದು ಕರಾರು ಕಡಿತಗೊಳಿಸಲು ಮುಂದಾದಾಗ ಆರೋಪಿಯು ಚಕ್ ನೀಡಿದ್ದ. ಅದು ಬೌನ್ಸ್ ಆದ ಕಾರಣ ಪೊಲೀಸರಿಗೆ ದೂರು ನೀಡಲಾಗಿದೆ. ಪ್ರಕರಣದ ಬಗ್ಗೆ ವಿವರವಾದ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.