ಬೆಂಗಳೂರು,ಜ.2- ರೈತರು, ಕನ್ನಡಪರ ಹೋರಾಟ ಗಾರರು ಸೇರಿದಂತೆ ಅಮಾಯಕರ ವಿರುದ್ಧ ದಾಖಲಾಗಿದ್ದ ಪ್ರಕರಣಗಳ ಪೈಕಿ 300 ರಿಂದ 400 ರಷ್ಟನ್ನು ಹಿಂಪಡೆಯಬೇಕು ಎಂದು ಅರ್ಜಿಗಳು ಬಂದಿದ್ದು, ಅವುಗಳನ್ನು ಪರಿಶೀಲಿಸಲಾ ಗುತ್ತಿದೆ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ಏಕಾಏಕಿ ಪ್ರಕರಣಗಳನ್ನು ಹಿಂಪಡೆಯು ವುದಿಲ್ಲ. ಇದಕ್ಕಾಗಿ ತಮ್ಮ ಅಧ್ಯಕ್ಷತೆಯಲ್ಲಿ ಸಚಿವ ಸಂಪುಟ ಉಪಸಮಿತಿ ರಚಿಸಲಾಗಿದೆ. ಅಲ್ಲಿ ಪರಿಶೀಲನೆ ನಡೆಸಲಾಗು ವುದು.
ಪೊಲೀಸ್ ಅಧಿಕಾರಿಗಳು ಪ್ರಕರಣ ಹಿಂಪಡೆಯ ಬಹುದೇ ಅಥವಾ ಬೇಡವೇ ಎಂಬುದರ ಬಗ್ಗೆ ಸ್ಪಷ್ಟ ಶಿಫಾರಸ್ಸಿನೊಂದಿಗೆ ಕಡತ ಮಂಡಿಸಲಿದ್ದಾರೆ. ಉಪಸಮಿತಿ ಅದನ್ನು ಪರಿಶೀಲಿಸಲಿದೆ. ಸೂಕ್ತವಾಗಿದ್ದರೆ ಹಿಂಪಡೆಯುವ ಬಗ್ಗೆ ಪ್ರಕ್ರಿಯೆ ಮುಂದುವರೆಸಲು ಸಂಪುಟಕ್ಕೆ ಶಿಫಾರಸ್ಸು ಮಾಡಲಾಗುವುದು. ಇಲ್ಲವಾದರೆ ಪ್ರಕರಣವನ್ನು ಮುಂದುವರೆಸಲು ಪೊಲೀಸರಿಗೆ ಸೂಚಿಸಲಾಗುವುದು ಎಂದರು.
ರಾಜ್ಯಾದ್ಯಂತ 400ಕ್ಕೂ ಹೆಚ್ಚು ಅರ್ಜಿಗಳು ಪ್ರಕರಣವನ್ನು ಹಿಂಪಡೆಯುವ ಸಲುವಾಗಿ ಬಂದಿವೆ. ಇದರಲ್ಲಿ ಸ್ಪಷ್ಟವಾದ ಮಾರ್ಗಸೂಚಿ ಪಾಲನೆ ಮಾಡಲಾಗುವುದು. ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಎಂಬ ಆದ್ಯತೆಗಳಿರುವುದಿಲ್ಲ ಎಂದು ಹೇಳಿದರು. ರಾಜ್ಯಾದ್ಯಂತ ಇರುವ ಬಾಕಿ ಪ್ರಕರಣಗಳನ್ನು ಇತ್ಯರ್ಥಪಡಿಸುವಂತೆ ಪೊಲೀಸರಿಗೆ ಸೂಚನೆ ನೀಡಿದ್ದೇನೆ. ಎಲ್ಲಾ ಜಿಲ್ಲೆಗಳ ಎಸ್ಪಿಗಳು, ನಗರ ಪ್ರದೇಶದ ಆಯುಕ್ತರು ಪರಿಶೀಲನೆ ನಡೆಸುತ್ತಿದ್ದಾರೆ. ಹುಬ್ಬಳ್ಳಿಯಲ್ಲಿ ಪರಿಶೀಲನೆ ನಡೆಸುವಾಗ 32 ಪ್ರಕರಣಗಳು ಕಂಡುಬಂದಿವೆ. ಅದರಲ್ಲಿ ರಾಮ ಜನ್ಮಭೂಮಿ ಹೋರಾಟ ಪ್ರಕರಣದಲ್ಲಿ ಭಾಗಿಯಾದವರೂ ಸೇರಿದ್ದಾರೆ. ಆದರೆ ಅದೊಂದೇ ಪ್ರಕರಣವನ್ನು ನಾವು ಕೆದಕಿಲ್ಲ. ರಾಜ್ಯಾದ್ಯಂತ ಪರಿಶೀಲನೆ ನಡೆಯುವಾಗ ಹುಬ್ಬಳ್ಳಿ ಪ್ರಕರಣವೂ ಕಂಡುಬಂದಿದೆ. ಅಯೋಧ್ಯೆ ರಾಮಮಂದಿರ ಉದ್ಘಾಟನೆ ವೇಳೆ ಇದು ಕಂಡುಬಂದಿರುವುದು ಕಾಕತಾಳೀಯವಷ್ಟೇ ಎಂದರು.
ಕೋವಿಡ್ ಮೇಲೆ ನಿಗಾ: ಉನ್ನತ ಮಟ್ಟದ ಅಧಿಕಾರಿಗಳೊಂದಿಗೆ ಸಭೆ
ಬಿಜೆಪಿಯವರು ಇದನ್ನು ರಾಜಕೀಯಕ್ಕಾಗಿ ಬಳಸಿಕೊಳ್ಳುವುದು ಅನಗತ್ಯ. ಹಳೆಯ ಪ್ರಕರಣಗಳಲ್ಲಿ ಆರೋಪಿಗಳು ಖುಲಾಸೆಯಾದರೂ ಆಗಬೇಕು, ಶಿಕ್ಷೆಗಾದರೂ ಒಳಗಾಗಬೇಕು. ಎಷ್ಟು ದಿನ ಎಂದು ಅವು ಬಾಕಿ ಪ್ರಕರಣಗಳಲ್ಲಿ ನನೆಗುದಿಯಲ್ಲಿರಲು ಸಾಧ್ಯ. ಯಡಿಯೂರಪ್ಪ ಸೇರಿದಂತೆ ಬಿಜೆಪಿಯ ಮುಖಂಡರೂ ಕೂಡ ಅಧಿಕಾರ ನಡೆಸಿದ್ದಾರೆ. ಅವರಿಗೆ ಈ ವಿಚಾರ ಗೊತ್ತಿಲ್ಲವೇ ಎಂದು ತಿರುಗೇಟು ನೀಡಿದರು.
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ವಿರುದ್ಧ ಸಿಬಿಐ ತನಿಖೆಗೆ ವಹಿಸುವಾಗ ನಿಯಮ ಪಾಲನೆಯಾಗಿಲ್ಲ ಎಂಬ ಲೋಪ ಕಂಡುಬಂದಿದೆ. ಅದನ್ನು ಸರಿಪಡಿಸಲು ನಾವು ಸಿಬಿಐ ತನಿಖೆಗೆ ನೀಡಿದ್ದ ಅನುಮತಿಯನ್ನು ಹಿಂಪಡೆದಿದ್ದೇವೆ. ಮುಂದಿನ ತನಿಖೆಗೆ ಪ್ರಕರಣವನ್ನು ಲೋಕಾಯುಕ್ತಕ್ಕೆ ಒಪ್ಪಿಸಲಾಗಿದೆ. ಇದು ಸರ್ಕಾರದ ಆದೇಶ. ನಂತರದ ಬೆಳವಣಿಗೆಯಲ್ಲಿ ಲೊಕಾಯುಕ್ತರು ಸಿಬಿಐ ಅಧಿಕಾರಿಗಳು ಸಂಪರ್ಕಿಸಿ ದಾಖಲಾತಿಗಳನ್ನು ಪಡೆದುಕೊಳ್ಳಬೇಕು. ಒಂದು ವೇಳೆ ಸಿಬಿಐನವರು ನಾವೇ ತನಿಖೆ ಮುಂದುವರೆಸುತ್ತೇವೆ ಎಂದರೆ ಅದರಿಂದಾಗುವ ಕಾನೂನು ವಿಚಾರಗಳ ಬಗ್ಗೆ ಮುಂದಿನ ದಿನಗಳಲ್ಲಿ ಪರಿಶೀಲನೆ ನಡೆಸಲಾಗುವುದು ಎಂದು ಹೇಳಿದರು.