Thursday, September 19, 2024
Homeರಾಷ್ಟ್ರೀಯ | Nationalಆಟಿಕೆ ಎಂದು ಹಾವನ್ನು ಕಚ್ಚಿಕೊಂದ ಒಂದು ವರ್ಷದ ಮಗು

ಆಟಿಕೆ ಎಂದು ಹಾವನ್ನು ಕಚ್ಚಿಕೊಂದ ಒಂದು ವರ್ಷದ ಮಗು

ಪಾಟ್ನಾ,ಆ.21- ಮೂರು ಅಡಿ ಉದ್ದದ ಹಾವನ್ನು ಆಟಿಕೆ ಎಂದು ಭಾವಿಸಿದ ಒಂದು ವರ್ಷದ ಮಗುವೊಂದು ಅದನ್ನು ಕಚ್ಚಿ ಕೊಂದು ಹಾಕಿರುವ ಘಟನೆ ಬಿಹಾರದಲ್ಲಿ ನಡೆದಿದೆ.

ಬಿಹಾರದ ಗಯಾದ ಫತೇಪುರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿರುವ ಈ ಘಟನೆ ಸ್ಥಳೀಯರನ್ನು ಬೆಚ್ಚಿ ಬೀಳಿಸಿದೆ.ಹಾವನ್ನು ಕಚ್ಚಿಕೊಂದಿರುವ ಮಗುವಿಗೆ ಯಾವುದೇ ಅಪಾಯ ಆಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಠಾಣಾ ವ್ಯಾಪ್ತಿಯ ಜಮುಹರ್ ಪ್ರದೇಶದಲ್ಲಿ ಒಂದು ವರ್ಷದ ಮಗು ತನ್ನ ಮನೆಯ ಟೆರೇಸ್ ಮೇಲೆ ಆಟವಾಡುತ್ತಿದ್ದ ವೇಳೆ ಬಂದ ಮೂರು ಅಡಿ ಉದ್ದದ ಹಾವನ್ನು ಆಟಿಕೆ ಎಂದು ಭಾವಿಸಿ ಅದನ್ನು ಕಚ್ಚಿ ಕೊಂದು ಹಾಕಿದೆ.

ಮಗುವಿನ ಕೈಯಲ್ಲಿ ಸತ್ತ ಹಾವನ್ನು ಕಂಡು ಪೋಷಕರು ಬೆಚ್ಚಿಬಿದ್ದಿದ್ದು, ತಕ್ಷಣ ಮಗುವನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಮಗುವನ್ನು ಪರೀಕ್ಷಿಸಿದ ವೈದ್ಯರು ಆರೋಗ್ಯ ಸ್ಥಿತಿ ಕಂಡು ಅಚ್ಚರಿಗೊಂಡಿದ್ದಾರೆ.

ಆಸ್ಪತ್ರೆಯ ಅಧಿಕಾರಿಗಳು ಮಗುವಿಗೆ ಎಲ್ಲಾ ರೀತಿಯ ಪರೀಕ್ಷೆಗಳನ್ನು ಮಾಡಿ ಮಗು ಸಂಪೂರ್ಣವಾಗಿ ಆರೋಗ್ಯವಾಗಿದ್ದು, ಯಾವುದೇ ಅಪಾಯವಾಗಿಲ್ಲ ಎಂದು ಖಚಿತಪಡಿಸಿದ್ದಾರೆ.

ಮಗು ಕಚ್ಚಿದ ಕಾರಣ ಹಾವು ಸಾವನ್ನಪ್ಪಿದೆ. ಮಳೆಗಾಲದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವ ಈ ಹಾವು ವಿಷಕಾರಿಯಲ್ಲ, ಆದ್ದರಿಂದ ಯಾವುದೇ ಅಪಾಯವಿಲ್ಲ ಎಂದು ವೈದ್ಯರು ಹೇಳಿದ್ದಾರೆ.

RELATED ARTICLES

Latest News