ಬೆಂಗಳೂರು, ಮೇ 28-ಮಗನಿಗೆ ವಿದ್ಯಾಭ್ಯಾಸ ಹಾಗೂ ಉತ್ತಮ ಸಂಸ್ಕಾರ ಕಲಿಸಬೇಕಾದ ತಂದೆಯೇ ಮಗನನ್ನು ಬಳಸಿಕೊಂಡು ಮನೆಗಳ್ಳತನ ಮಾಡುತ್ತಿದ್ದ ತಂದೆಯನ್ನು ಎಲೆಕ್ಟ್ರಾನಿಕ್ ಸಿಟಿ ಠಾಣೆ ಪೊಲೀಸರು ಬಂಧಿಸಿ 16.50 ಲಕ್ಷ ರೂ. ಮೌಲ್ಯದ 188 ಗ್ರಾಂ ಚಿನ್ನಾಭರಣ, 550 ಗ್ರಾಂ ಬೆಳ್ಳಿ ವಸ್ತುಗಳು ಹಾಗೂ 1500 ಹಣ ವಶಪಡಿಸಿಕೊಂಡಿದ್ದಾರೆ.
ಶಿಕಾರಿಪಾಳ್ಯದ ಬಾಬುಜಾನ್ (26) ಬಂಧಿತ ಆರೋಪಿ. ಈತ 16 ವರ್ಷದ ತನ್ನ ಮಗನನ್ನು ಕಳ್ಳತನಕ್ಕೆ ಬಳಸಿಕೊಂಡಿರುವುದು ಪೊಲೀಸರ ವಿಚಾರಣೆಯಿಂದ ಗೊತ್ತಾಗಿದೆ. ಮಹಿಳೆಯರು ಬೆಳಗ್ಗೆ 11 ಗಂಟೆ ಸುಮಾರಿನಲ್ಲಿ ಒಗೆದ ಬಟ್ಟೆ ಒಣಹಾಕಲು ಮಹಡಿಯ ಮೇಲೆ ಹೋಗುವ ಸಮಯವನ್ನೇ ಕಾದಿದ್ದು, ಆ ಮನೆಯ ಹೊರಗೆ ಆರೋಪಿ ತಂದೆ ನಿಂತುಕೊಂಡು ಯಾರಾದರೂ ಬರುತ್ತಾರೆಯೇ ಎಂದು ಗಮನಿಸುತ್ತಿದ್ದನು. ಆ ವೇಳೆ ಮನೆಯ ಬಾಗಿಲು ಚಿಲಕ ತೆಗೆದು ಮಗ ಒಳಗೆ ಹೋಗಿ ಕಳ್ಳತನ ಮಾಡುತ್ತಿದ್ದದು ಪೊಲೀಸರ ತನಿಖೆಯಿಂದ ತಿಳಿದುಬಂದಿದೆ.
ಬೆಟ್ಟದಾಸನಪುರದ ಮಹಿಳೆಯೊಬ್ಬರು ಮನೆಯ ಮುಂಬಾಗಿಲು ತೆರೆದು ಒಗೆದ ಬಟ್ಟೆಗಳನ್ನು ಒಣ ಹಾಕಲು ಎರಡನೇ ಮಹಡಿಗೆ ಹೋಗಿದ್ದರು. ಇತ್ತ ಮನೆಯೊಳಗೆ ನುಗ್ಗಿ ಕಳ್ಳತನ ಮಾಡಿಕೊಂಡು ಬಾಲಕನೊಬ್ಬ ಓಡಿಹೋಗುತ್ತಿರುವುದನ್ನು ಕೆಳಗೆ ಇಳಿಯುವಾಗ ಮಹಿಳೆ ನೋಡಿದ್ದಾರೆ. ತಕ್ಷಣ ಮನೆಯೊಳಗೆ ಹೋಗಿ ನೋಡಿದಾಗ ಬೀರುವಿನಲ್ಲಿದ್ದ 49 ಗ್ರಾಂ ಚಿನ್ನಾಭರಣ, 700 ಗ್ರಾಂ ಬೆಳ್ಳಿ ವಸ್ತುಗಳು ಹಾಗೂ 2 ಸಾವಿರ ಹಣ ಕಳ್ಳತನವಾಗಿರುವುದು ಕಂಡುಬಂದಿದೆ. ತಕ್ಷಣ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.
ತನಿಖೆ ಮುಂದುವರೆಸಿದ ಪೊಲೀಸರು ಮೈಲಸಂದ್ರದ ಗ್ರಾಮದಲ್ಲಿ ಆರೋಪಿ ಬಾಬುಜಾನ್‌ನ್ನು ಬಂಧಿಸಿ ವಿಚಾರಣೆ ನಡೆಸಿದಾಗ, ಕಾನೂನು ಸಂಘರ್ಷಕ್ಕೊಳಗಾದ 16 ವರ್ಷದ ತನ್ನ ಮಗನನ್ನು ಕಳ್ಳತನಕ್ಕೆ ಬಳಸಿಕೊಂಡು ಮನೆಗಳ್ಳತನ ಮಾಡಿರುವುದು ಗೊತ್ತಾಗಿದೆ. ಆರೋಪಿಯಿಂದ ಒಂದು ದ್ವಿಚಕ್ರ ವಾಹನ, ಅದರ ಡಿಕ್ಕಿಯಲ್ಲಿದ್ದ 550 ಗ್ರಾಂ ಬೆಳ್ಳಿ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ತನಿಖೆ ಮುಂದುವರೆಸಿದ ಪೊಲೀಸರು ಆರೋಪಿಯಿಂದ ಒಟ್ಟು 180 ಗ್ರಾಂ ಚಿನ್ನಾಭರಣ ಹಾಗೂ 1500 ಹಣ ವಶಪಡಿಸಿಕೊಂಡಿದ್ದು, ಆರೋಪಿಯ ಬಂಧನದಿಂದ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯ 7 ಹಾಗೂ ಹೆಬ್ಬಗೋಡಿ ಪೊಲೀಸ್ ಠಾಣೆಯ ಎರಡು ಮನೆಗಳವು ಪ್ರಕರಣಗಳು ಸೇರಿ ಒಟ್ಟು 9 ಪ್ರಕರಣಗಳನ್ನು ಪತ್ತೆ ಹಚ್ಚುವಲ್ಲಿ ಇನ್‌್ಸಪೆಕ್ಟರ್ ನವೀನ್ ಹಾಗೂ ಸಿಬ್ಬಂದಿ ತಂಡ ಯಶಸ್ವಿಯಾಗಿದೆ.