Friday, December 27, 2024
Homeಜಿಲ್ಲಾ ಸುದ್ದಿಗಳು | District Newsಸರಸಕ್ಕೆ ಒಪ್ಪದ ಸೊಸೆಯನ್ನು ಬರ್ಬರವಾಗಿ ಕೊಂದು ಪರಾರಿಯಾದ ಮಾವ

ಸರಸಕ್ಕೆ ಒಪ್ಪದ ಸೊಸೆಯನ್ನು ಬರ್ಬರವಾಗಿ ಕೊಂದು ಪರಾರಿಯಾದ ಮಾವ

Father-in-law brutally kills daughter-in-law who refused to have sex and flees

ರಾಯಚೂರು,ಡಿ.15-ಸರಸಕ್ಕೆ ಒಪ್ಪದ ಸೊಸೆಯನ್ನು ಬರ್ಬರವಾಗಿ ಕೊಲೆಗೈದಿರುವ ಮಾವ ಪಾರಾರಿಯಾಗಿರುವ ಘಟನೆ ಘಟನೆ ತಾಲ್ಲೂಕಿನ ಜುಲಮಗೇರಾ ಗ್ರಾಮದಲ್ಲಿ ನಡೆದಿದೆ.
ಮೃತ ಮಹಿಳೆಯನ್ನು ದುಳ್ಳಮ (27) ಎಂದು ಗುರುತಿಸಲಾಗಿದೆ. ಮಲಿಂಗಯ್ಯಪಾರಾರಿಯಾಗಿರುವ ಆರೋಪಿಯಾಗಿದ್ದಾನೆ.

ಇತ್ತೀಚೆಗೆ ಸೊಸೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದ ಇದು ಗೊತ್ತಾಗಿ ಗ್ರಾಮದ ಹಿರಿಯರು, ಕುಟುಂಬಸ್ಥರು ಆರೋಪಿ ರಾಮಲಿಂಗಯ್ಯಗೆ ಬೈದು ಬುದ್ಧಿ ಹೇಳಿದ್ದರು. ಆದರೂ ಕಳೆದ ರಾತ್ರಿಮನೆಯಲ್ಲಿ ಯಾರು ಇಲ್ಲದ ವೇಳೆ ಸೊಸೆಯ ಮೇಲೆ ಅತ್ಯಾಚಾರ ಎಸಗಲು ಮುಂದಾಗಿದ್ದ.

ಈ ವೇಳೆ ಸೊಸೆ ನಿರಾಕರಿಸಿದ್ದು,ಕೋಪದಲ್ಲಿ ಸಲಾಕೆಯಿಂದ ತಲೆಗೆ ಹೊಡೆದು ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಘಟನೆ ಬಳಿಕ ಮನೆಬಿಟ್ಟು ಪರಾರಿಯಾಗಿದ್ದಾನೆ.ಇಡಪನೂರು ಪೊಲೀಸ್‌‍ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು, ಆರೋಪಿ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

RELATED ARTICLES

Latest News