Thursday, August 14, 2025
Homeರಾಷ್ಟ್ರೀಯ | Nationalಲಿವ್‌ ಇನ್‌ನಲ್ಲಿದ್ದ ಮಗಳನ್ನು ಕೊಂದು ಆತ್ಮಹತ್ಯೆ ಎಂದು ಬಿಂಬಿಸಿದ್ದ ತಂದೆ

ಲಿವ್‌ ಇನ್‌ನಲ್ಲಿದ್ದ ಮಗಳನ್ನು ಕೊಂದು ಆತ್ಮಹತ್ಯೆ ಎಂದು ಬಿಂಬಿಸಿದ್ದ ತಂದೆ

Father kills daughter over live-in relationship, stages it as suicide in Gujarat

ಅಹಮದಾಬಾದ್‌ ಆ. 14: ಲಿವ್‌ ಇನ್‌ ಸಂಬಂಧದಲ್ಲಿದ್ದ ಮಗಳನ್ನು ಹತ್ಯೆಗೈದು ಅದನ್ನು ಆತಹತ್ಯೆ ಎಂದು ಬಿಂಬಿಸಿದ್ದ ತಂದೆಯ ನೀಚತನ ಬಯಲಾಗಿರುವ ಘಟನೆ ಗುಜರಾತ್‌ನಲ್ಲಿ ನಡೆದಿದೆ. ಮಗಳು ಯಾರೊಂದಿಗೋ ಲಿವ್‌‍-ಇನ್‌ ಸಂಬಂಧದಲ್ಲಿರುವುದನ್ನು ತಿಳಿದ ತಂದೆ ಕೋಪಕ್ಕೆ ಆಕೆಯನ್ನು ಕೊಲೆ ಮಾಡಿ, ಆತ್ಮಹತ್ಯೆಯ ಕಥೆ ಕಟ್ಟಿದ್ದ ಎನ್ನಲಾಗಿದೆ.

ಮಗಳನ್ನು ಕೊಂದು ರಾತ್ರೋ ರಾತ್ರಿ ತನ್ನ ಸಹೋದರನ ಜತೆ ಸೇರಿ ಅಂತ್ಯಕ್ರಿಯೆಯನ್ನೂ ನಡೆಸಿದ್ದರು ಎನ್ನುವ ವಿಚಾರ ಇದೀಗ ಬಯಲಾಗಿದೆ.ಎರಡು ತಿಂಗಳ ಹಿಂದಷ್ಟೇ ಆ ಯುವತಿಯದ್ದು ಆತ್ಮಹತ್ಯೆ ಎಂದು ಘೋಷಿಸಲಾಗಿತ್ತು, ಆದರೆ ಆಕೆಯ ಪ್ರಿಯಕರ ಗುಜರಾತ್‌ ಹೈಕೋರ್ಟ್‌ ಮೊರೆ ಹೋದಾಗ ಘಟನೆ ಬೆಳಕಿಗೆ ಬಂದಿದೆ.

ಗುಜರಾತ್‌ನ ಬನಸ್ಕಾಂತ ಜಿಲ್ಲೆಯಲ್ಲಿ ಈ ಕೊಲೆ ನಡೆದಿದೆ ಎಂದು ಹೇಳಲಾಗಿದೆ.ಹರೀಶ್‌ ಎಂಬುವವರು ಫೆಬ್ರವರಿಯಲ್ಲಿ ಪಾಲನ್‌ಪುರದಲ್ಲಿ ಚಂದ್ರಿಕಾಳನ್ನು ಭೇಟಿಯಾದರು ಇಬ್ಬರ ನಡುವೆ ಪ್ರೀತಿ ಚಿಗುರಿತ್ತು. ಒಮ್ಮೆ ಚಂದ್ರಿಕಾ ಮನೆಗೆ ಮರಳಿದಾಗ ಮತ್ತೆ ಕುಟುಂಬವು ಆಕೆಯನ್ನು ಪಾಲನ್‌ಪುರಕ್ಕೆ ಹಿಂದಿರುಗಲು ಅವಕಾಶ ನೀಡಲಿಲ್ಲ.

ಆಕೆಯ ಕುಟುಂಬವು ನನ್ನ ಮದುವೆಯನ್ನು ಬೇರೆ ವ್ಯಕ್ತಿಯ ಜತೆ ಮಾಡಬಹುದು ಎನ್ನುವ ಭಯವನ್ನೂ ವ್ಯಕ್ತಪಡಿಸಿ ಅದಷ್ಟು ಬೇಗ ಬಂದು ಕರೆದುಕೊಂಡು ಹೋಗುವಂತೆ ಮೆಸೆಜ್‌ ಕಳುಹಿಸಿದ್ದರು.

ಕಳೆದ ಜೂನ್‌ 4ರಂದು ಹರೀಶ್‌ ಚಂದ್ರಿಕಾರನ್ನು ಅಹಮದಾಬಾದ್‌ಗೆ ಕರೆದೊಯ್ದಿದ್ದರು.ಅಲ್ಲಿ ಅವರು ಲಿವ್‌‍-ಇನ್‌ ಸಂಬಂಧ ಒಪ್ಪಂದಕ್ಕೆ ಸಹಿ ಹಾಕಿದರು. ಬಳಿಕ ಚಂದ್ರಿಕಾ ಕುಟುಂಬ ತನ್ನ ಮಗಳು ಕಾಣೆಯಾಗಿದ್ದಾಳೆ ಎಂದು ಪೊಲೀಸರಿಗೆ ದೂರು ನೀಡಿದ್ದರು. ಜೂನ್‌ 12ರಂದು ಪೊಲೀಸರು ಅವರಿಬ್ಬರನ್ನು ಪತ್ತೆ ಮಾಡಿದ್ದರು, ಆಕೆಯನ್ನು ಕುಟುಂಬಕ್ಕೆ ಒಪ್ಪಿಸಿದ್ದರು.

ಹರೀಶ್‌ನನ್ನು ಬಂಧಿಸಲಾಗಿತ್ತು. ಜೂನ್‌ 21 ರಂದು ಜೈಲಿನಿಂದ ಬಿಡುಗಡೆಯಾದಾಗ, ಅವರ ಫೋನ್‌ ಡೇಟಾ ಅಳಿಸಿಹೋಗಿರುವುದು ಕಂಡುಬಂದಿದೆ.ಅವರ ಇನ್‌ಸ್ಟಾಗ್ರಾಮ್‌‍ ಖಾತೆಯನ್ನು ಪರಿಶೀಲಿಸಿದಾಗ, ಚಂದ್ರಿಕಾ ಅವರ ಹಲವಾರು ಸಂದೇಶಗಳು ಕಂಡುಬಂದಿದ್ದವು. ಅದರಲ್ಲಿ ಚಂದ್ರಿಕಾ ಮೆಸೇಜ್‌ ಇತ್ತು. ಬೇರೆ ಮದುವೆಗೆ ಪೋಷಕರು ಒತ್ತಾಯಿಸುತ್ತಿದ್ದಾರೆ ಎಂದು ಬರೆಯಲಾಗಿತ್ತು.ನಂತರ ಹರೀಶ್‌ ಗುಜರಾತ್‌ ಹೈಕೋರ್ಟ್‌ನಲ್ಲಿ ಹೇಬಿಯಸ್‌‍ ಕಾರ್ಪಸ್‌‍ ಅರ್ಜಿ ಸಲ್ಲಿಸಿದರು.

ಜೂನ್‌ 24 ರಂದು ವಿಚಾರಣೆ ನಡೆಯುವ ಮೊದಲು, ಚಂದ್ರಿಕಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಸುದ್ದಿ ಹೊರಬಿತ್ತು.ಆಕೆಯ ತಂದೆ ಹಾಗೂ ಚಿಕ್ಕಪ್ಪ ಆಕೆಯದ್ದು ಆತ್ಮಹತ್ಯೆ ಎಂದು ಬಿಂಬಿಸಲು ಪ್ರಯತ್ನಿಸಿದ್ದರು. ಹರೀಶ್‌ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.

RELATED ARTICLES

Latest News