Wednesday, September 17, 2025
Homeರಾಷ್ಟ್ರೀಯ | Nationalಮಕ್ಕಳ ಮದುವೆಯಲ್ಲೇ ಬೀಗರ ಜೊತೆ ಓಡಿ ಹೋದ ಬೀಗತಿ..!

ಮಕ್ಕಳ ಮದುವೆಯಲ್ಲೇ ಬೀಗರ ಜೊತೆ ಓಡಿ ಹೋದ ಬೀಗತಿ..!

ಲಕ್ನೋ,ಜು.17– ಮದುವೆ ಆಗಬೇಕಿದ್ದ ಗಂಡಿನ ತಂದೆ ಹಾಗೂ ಹೆಣ್ಣಿನ ತಾಯಿ ನಡುವೆ ಪ್ರೇಮಾಂಕುರವಾಗಿ ಮನೆ ಬಿಟ್ಟು ಓಡಿ ಹೋಗಿರುವ ಘಟನೆ ಉತ್ತರ ಪ್ರದೇಶದ ಕಾಸ್‌‍ಗಂಜ್‌ನಲ್ಲಿ ನಡೆದಿದೆ. ಮದುವೆ ಗಂಡಿನ ತಂದೆ ಶಕೀಲ್‌ಗೆ 10 ಮಕ್ಕಳಿದ್ದು ಅತ್ತ ವಧುವಿನ ತಾಯಿಗೆ 6 ಮಕ್ಕಳಿವೆ.

ಎರಡು ತಿಂಗಳ ಹಿಂದೆ ಈ ಎರಡು ಕುಟುಂಬದ ನಡುವೆ ಮಕ್ಕಳ ಮದುವೆ ಬಗ್ಗೆ ಚರ್ಚೆ ನಡೆದು ನಿಶ್ಚಿತಾರ್ಥ ಮಾಡಿ ಮುಗಿಸಿದ್ದರು. ಅದರಂತೆ ಮದುವೆ ದಿನಾಂಕವನ್ನು ನಿಗದಿ ಮಾಡಿದ್ದರು. ಜುಲೈ 17 ಅಂದರೆ ಇಂದು ಮದುವೆಯಾಗಬೇಕಿತ್ತು.

ಆದರೆ ಎರಡು ತಿಂಗಳಿಂದಲೂ ಮದುವೆ ನೆಪದಲ್ಲಿ ವಧುವಿನ ತಾಯಿ, ವರನ ತಂದೆ ಪರಸ್ಪರ ಮೊಬೈಲ್‌ನಲ್ಲಿ ಮಾತನಾಡುತ್ತಿದ್ದರು. ಈ ವೇಳೆ ಇಬ್ಬರ ನಡುವೆ ಪ್ರೇಮಾಂಕುರವಾಗಿ ಮಕ್ಕಳ ಮದುವೆ ಬಗ್ಗೆ ಚಿಂತಿಸದೇ ಓಡಿ ಹೋಗಿದ್ದಾರೆ ಎಂದು ತಿಳಿದುಬಂದಿದೆ.

ದಿನಾಂಕ ನಿಗದಿಯಂತೆ ಇಂದು ಮಕ್ಕಳ ಮದುವೆಯಾಗಬೇಕಿತ್ತು. ಇದಕ್ಕೂ ಮೊದಲೇ ವರನ ತಂದೆ ಹಾಗೂ ವಧುವಿನ ತಾಯಿ ಇಬ್ಬರು ಮನೆ ಬಿಟ್ಟು ಓಡಿ ಹೋಗಿದ್ದು, ಎಲ್ಲಿದ್ದಾರೆ ಎಂಬುದು ಗೊತ್ತಿಲ್ಲ. ವಿಷಯ ಗೊತ್ತಾಗುತ್ತಿದ್ದಂತೆ ಆ ಹೆಣ್ಣಿನ ತಂದೆ ಶಾಕ್‌ ಆಗಿದ್ದಾರೆ. ಈ ಸಂಬಂಧ ಪೊಲೀಸ್‌‍ ಠಾಣೆ ಮೆಟ್ಟಿಲೇರಿರುವ ಅವರು, ನನ್ನ ಹೆಂಡತಿಯನ್ನು ಅಪಹರಿಸಲಾಗಿದೆ ಕೊತ್ವಾಲಿ ಗಂಜ್ದುಂದ್ವಾರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ಇಬ್ಬರಿಗಾಗಿ ಹುಡುಕಾಟ ನಡೆಸಿದ್ದಾರೆ.

RELATED ARTICLES

Latest News