ವಾಷಿಂಗ್ಟನ್,ಜು.27- ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹತ್ಯೆ ಯತ್ನದ ಘಟನೆಯಲ್ಲಿ ಟ್ರಂಪ್ ಅವರ ಕಿವಿಗೆ ತಾಗಿ ಗಾಯಗೊಳಿಸಿದ್ದು ನಿಜವಾಗಿಯೂ ಬಂದೂಕಿನ ಗುಂಡು ಎಂದು ಘಟನೆ ನಡೆದು ಸುಮಾರು ಎರಡು ವಾರಗಳ ಬಳಿಕ ಎಫ್ಬಿಐ ದೃಢಪಡಿಸಿದೆ.
ತನೂಲಕ ಪೆನ್ಸಿಲ್ವೇನಿಯಾ ರ್ಯಾಲಿಯಲ್ಲಿ ಟ್ರಂಪ್ ಗಾಯಗೊಳ್ಳಲು ನಿಜವಾದ ಕಾರಣ ಏನು ಎಂಬ ಬಗ್ಗೆ ಹುಟ್ಟಿಕೊಂಡಿದ್ದ ವಿವಾದಗಳಿಗೆ ತೆರೆ ಎಳೆಯಲು ಎಫ್ಬಿಐ ಪ್ರಯತ್ನಿಸಿದೆ.ಹತ ಹಂತಕನ ಬಂದೂಕಿನಿಂದ ಹಾರಿದ ಗುಂಡು ತಾಗಿ ಟ್ರಂಪ್ ಗಾಯಗೊಂಡರೇ ಅಥವಾ ಅನ್ಯ ಕಾರಣ ಇದೆಯೇ ಎಂದು ಈ ವಾರದ ಆರಂಭದಲ್ಲಿ ನಿರ್ದೇಶಕ ಕ್ರಿಸ್ಟೋಫರ್ ರೇ ಅವರು ನೀಡಿದ್ದ ಹೇಳಿಕೆಗೆ ಟೀಕೆಗಳು ವ್ಯಕ್ತವಾದ ಹಿನ್ನಲೆಯಲ್ಲಿ ಎಫ್ಬಿಐ ಈ ಸ್ಪಷ್ಟನೆ ನೀಡಿದೆ.
ರೇ ಅವರ ಹೇಳಿಕೆ ಟ್ರಂಪ್ ಮತ್ತು ಅವರ ನಿಕಟವರ್ತಿಗಳನ್ನು ರೊಚ್ಚಿಗೆದ್ದಿಸಿತ್ತು. ಉಭಯ ಬಣಗಳ ನಡುವೆ ರಾಜಕೀಯ ಮೇಲಾಟಕ್ಕೆ ಕಾರಣವಾಗಿತ್ತು. ಇದುವರೆಗೆ ಸೀಕ್ರೆಟ್ ಸರ್ವೀಸ್ ಸಂಸ್ಥೆಯೊಂದಿಗೆ ಈ ಘಟನೆಯ ತನಿಖೆ ನಡೆಸುತ್ತಿರುವ ಎಫ್ಬಿಐ ಟ್ರಂಪ್ ಗಾಯಗೊಳ್ಳಲು ಕಾರಣವೇನು ಎಂದು ಮಾಹಿತಿ ಒದಗಿಸಲು ನಿರಾಕರಿಸಿತ್ತು.
ಟ್ರಂಪ್ ಅವರಿಗೆ ಪ್ರಥಮ ಚಿಕಿತ್ಸೆ ನೀಡಿದ ಆಸ್ಪತ್ರೆಯಿಂದಲೂ ಈ ಬಗ್ಗೆ ವೈದ್ಯಕೀಯ ದಾಖಲೆಗಳು ಬಿಡಗಡೆಗೊಂಡಿರಲಿಲ್ಲ.