ಬೆಂಗಳೂರು, ಸೆ. 17- ನಗರದ ರಸ್ತೆ ಗುಂಡಿ ಮತ್ತಿತರ ಅವ್ಯವಸ್ಥೆಗಳಿಂದ ಬೆಸತ್ತಿರುವ ಖಾಸಗಿ ಸಂಸ್ಥೆಯೊಂದು ಬೆಂಗಳೂರಿನಿಂದ ಹೊರ ನಡೆಯಲು ತೀರ್ಮಾನಿಸಿದೆ.ಕಳೆದ ಒಂಬತ್ತು ವರ್ಷಗಳಿಂದ ನಗರದಲ್ಲಿ ಕಾರ್ಯಚರಣೆ ನಡೆಸುತ್ತಿರುವ ಅತಿದೊಡ್ಡ ಲಾಜಿಸ್ಟಿಕ್ ಸಂಸ್ಥೆಯಾದ ಬ್ಲಾಕ್ ಬಕ್ ಕಂಪನಿ ಬೆಂಗಳೂರಿನ ಸಹವಾಸವೇ ಬೇಡ ಎಂಬ ನಿರ್ಧಾರಕ್ಕೆ ಬಂದಿದೆ.
ಕಳೆದ 990 ರಲ್ಲಿ ಲಾಜಿಸ್ಟಿಕ್ ಸೇವೆ ಆರಂಭಿಸಿದ್ದ ಬ್ಲಾಕ್ ಬಕ್ ಸಂಸ್ಥೆ ನಗರದ ಹೊರವರ್ತುಲ ರಸ್ತೆಯಲ್ಲಿ ಸೇವೆ ನೀಡುತ್ತ ಬರುತ್ತಿದೆ. ವೈಟ್‌ಫೀಲ್ಡ್, ಸರ್ಜಾಪುರ, ಮಾರತ್‌ಹಳ್ಳಿ ಮತ್ತು ಬೆಳ್ಳಂದೂರು ಕಡೆಗಳಲ್ಲಿ ಸೇವೆ ನೀಡ್ತಿರೋ ಈ ಸಂಸ್ಥೆ ನಗರದ ಅವ್ಯವಸ್ಥೆಗೆ ಬೇಸತ್ತು ಇಲ್ಲಿಂದ ಜಾಗ ಖಾಲಿ ಮಾಡಲು ನಿರ್ಧರಿಸಿದೆ. ಬ್ಲಾಕ್‌ಬಕ್ ಸಂಸ್ಥೆ ಸಹ-ಸಂಸ್ಥಾಪಕ ಮತ್ತು ಸಿಇಒ ರಾಜೇಶ್ ಯಬಾಜಿ ಅವರು ಎಕ್‌್ಸ ಮಾಡಿ ತಮ ಈ ನಿರ್ಧಾರ ಪ್ರಕಟಿಸಿದ್ದಾರೆ.
ಪೋಸ್ಟ್‌ನಲ್ಲಿ ಕಳೆದ 9 ವರ್ಷದಿಂದ ಬೆಂಗಳೂರಿನಲ್ಲಿ ಸೇವೆ ನೀಡೋಕೆ ಕಷ್ಟ ಆಗ್ತಿದೆ..ಬೆಳ್ಳಂದೂರಿನಲ್ಲಿ ಸೇವೆ ನೀಡೋಕೆ ಕಷ್ಟ ಆಗ್ತಿದೆ. ನಮ್ಮ ಕಚೇರಿ ಇದೀಗ ಕಚೇರಿ ಪ್ಲಸ್ ಮನೆಯಾಗಿ ಪರಿವರ್ತನೆಯಾಗಿದೆ. ಇಲ್ಲಿ ನಾವು ಮುಂದುವರೆಯುವುದು ಕಷ್ಟ ಆಗಲಿದೆ..ನಾವು ಹೊರಗೆ ಹೋಗಲು ತೀರ್ಮಾನಿಸಿದ್ದೇವೆ ಎಂದು ಅಸಮಧಾನ ವ್ಯಕ್ತಪಡಿಸಿದ್ದಾರೆ.
ನಮ ಅಸಮಾಧಾನಕ್ಕೆ ಕಾರಣ..! ನಮ ಸಹೋದ್ಯೋಗಿಗಳ ಪ್ರಯಾಣದ ಸಮಯ ಒಂದೂವರೆ ಗಂಟೆಗೂ ಹೆಚ್ಚಿದೆ. ರಸ್ತೆಗಳು ಗುಂಡಿ ಮತ್ತು ಧೂಳಿನಿಂದ ತುಂಬಿವೆ. ಹಾಳಾದ ರಸ್ತೆಗಳನ್ನ ರಿಪೇರಿ ಮಾಡಲು ಹಿಂದೇಟು ಹಾಕಲಾಗುತ್ತಿದೆ. ಮುಂದಿನ ಐದು ವರ್ಷ ಯಾವುದೇ ಬದಲಾವಣೆ ಕಂಡು ಬರುವುದು ಕಷ್ಟ ಸಾಧ್ಯ ಎನ್ನುವ ಪರಿಸ್ಥಿತಿ ಇರುವ ಹಿನ್ನೆಲೆಯಲ್ಲಿ ಇಂತಹ ನಿರ್ಧಾರ ಕೈಗೊಳ್ಳುವುದು ಅನಿವಾರ್ಯ ಎಂದು ಅವರು ಅಲವತ್ತುಕೊಂಡಿದ್ದಾರೆ.
ಕೆಆರ್ ಪುರಂ ನಿಂದ ಸಿಲ್‌್ಕ ಬೋರ್ಡ್ ವರೆಗೆ 500ಕ್ಕೂ ಐಟಿ ಸಂಸ್ಥೆಗಳಿವೆ ಇಲ್ಲಿ 9.5 ಲಕ್ಷಕ್ಕೂ ಹೆಚ್ಚು ಉದ್ಯೋಗಿಗಳು ಕೆಲಸ ಮಾಡುತ್ತಿದ್ದಾರೆ. ರಾಜ್ಯದ ವಾರ್ಷಿಕ ಆದಾಯದಲ್ಲಿ ಶೆ. 36ರಷ್ಟು ಕೊಡುಗೆ ನಮದೆ ಇದೇ. ಪರಿಸ್ಥಿತಿ ಹೀಗಿದ್ದರೂ ನಮಗೆ ಸೂಕ್ತ ಮೂಲಭೂತ ಸೌಲಭ್ಯ ಸಿಗುತ್ತಿಲ್ಲ ಎಂದು ಅವರು ತಮ ಅಸಮಾಧಾನ ಹೊರ ಹಾಕಿದ್ದಾರೆ.