ಬೆಂಗಳೂರು,ಮೇ 10- ಪಾರ್ಟಿ ವೇಳೆ ಇಬ್ಬರು ಸ್ನೇಹಿತರ ನಡುವೆ ಜಗಳವಾಗಿ ಒಬ್ಬನ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಮಡಿವಾಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ರಾತ್ರಿ ನಡೆದಿದೆ. ವೆಂಕಟೇಶ್ವರ ಲೇಔಟ್, 18 ನೇ ಎ ಕ್ರಾಸ್‌ನ ಕಟ್ಟಡವೊಂದರ 2ನೇ ಮಹಡಿಯಲ್ಲಿ ವಾಸವಾಗಿದ್ದ ಮಾರ್ಟಿನ್ ಸೈಮನ್ (28) ಕೊಲೆಯಾದವರು.
ಐದು ವರ್ಷದಿಂದ ಈ ಮನೆಯಲ್ಲಿ ಕುಟುಂಬದೊಂದಿಗೆ ವಾಸವಾಗಿದ್ದ ಮಾರ್ಟಿನ್ ಸೈಮನ್ ಸಾ್ಟ್‌ವೇರ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದನು. ಈ ಕಟ್ಟಡದಲ್ಲೇ ಒಂದೂವರೆ ವರ್ಷದಿಂದ ವಾಸವಾಗಿರುವ ಇನ್ಸೆಂಟ್ ರಾಜು (26) ಸ್ನೇಹಿತರಾಗಿದ್ದುಘಿ, ರಾತ್ರಿ 10 ಗಂಟೆ ಸುಮಾರಿನಲ್ಲಿ ಇವರಿಬ್ಬರೂ ಸೇರಿ ಟೆರೆಸ್‌ನಲ್ಲಿ ಪಾರ್ಟಿ ಮಾಡಿದ್ದಾರೆ.
ಆ ಸಂದರ್ಭದಲ್ಲಿ ಇವರಿಬ್ಬರ ಮಧ್ಯೆ ಯಾವುದೋ ವಿಚಾರವಾಗಿ ಜಗಳವಾಗಿದೆ. ಕುಡಿದ ಅಮಲಿನಲ್ಲಿ ಇಬ್ಬರೂ ಕಿತ್ತಾಡಿಕೊಂಡಿದ್ದು, ಗಲಾಟೆ ವಿಕೋಪಕ್ಕೆ ತಿರುಗಿದಾಗ ಕೈಗೆ ಸಿಕ್ಕಿದ ಸಿಮೆಂಟ್ ಇಟ್ಟಿಗೆಯಿಂದ ಮಾರ್ಟಿನ್ ಸೈಮನ್ ತಲೆಗೆ ಹೊಡೆದು ಕೊಲೆ ಮಾಡಿ ಇನ್ಸೆಂಟ್ ರಾಜು ಪರಾರಿಯಾಗಿದ್ದಾನೆ.
ಗಲಾಟೆ ಶಬ್ದ ಕೇಳಿ ಕಟ್ಟಡದಲ್ಲಿ ಇದ್ದ ನಿವಾಸಿಗಳು ಹೊರಗೆ ಬಂದಾಗ ಇನ್ಸೆಂಟ್ ರಾಜು ಹೊರಗೆ ಓಡಿ ಹೋಗುತ್ತಿರುವುದನ್ನು ನೋಡಿದ್ದಾರೆ.ನಂತರ ಟೆರೆಸ್ ಮೇಲೆ ಹೋಗಿ ನೋಡಿದಾಗ ರಕ್ತದ ಮಡುವಿನಲ್ಲಿ ಮಾರ್ಟಿನ್ ಸೈಮನ್ ಕೊಲೆಯಾಗಿರುವುದು ಕಂಡು ಬಂದಿದೆ.
ತಕ್ಷಣ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ ಕುಟುಂಬಸ್ಥರಿಂದ ಮಾಹಿತಿ ಪಡೆದುಕೊಂಡು, ಮೃತದೇಹವನ್ನು ಸೆಂಟ್‌ಜಾನ್ ಆಸ್ಪತ್ರೆಗೆ ರವಾನಿಸಿದ್ದಾರೆ. ಕೊಲೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಪರಾರಿಯಾಗಿರುವ ಆರೋಪಿಗಾಗಿ ಶೋಧ ಕೈಗೊಂಡಿದ್ದುಘಿ, ಆತ ಸಿಕ್ಕಿದ ನಂತರವಷ್ಟೇ ಇವರಿಬ್ಬರ ಮಧ್ಯೆ ಯಾವ ವಿಚಾರಕ್ಕೆ ಜಗಳವಾಗಿದೆ ಎಂಬುವುದು ಗೊತ್ತಾಗಲಿದೆ.