ನವದೆಹಲಿ,ಅ 6 (ಪಿಟಿಐ)- ಏರ್ ಇಂಡಿಯಾ ವಿಮಾನದಲ್ಲಿ ಸಿಬ್ಬಂದಿಗೆ ಅಶ್ಲೀಲ ಪದಗಳಿಂದ ನಿಂದಿಸಿ ಆರೋಪದ ಮೇಲೆ ವ್ಯಕ್ತಿಯೊಬ್ಬನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.
ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕ ಅಭಿನವ್ ಶರ್ಮಾ ಅಶ್ಲೀಲ ಪದ ಬಳಕೆ ಮಾಡುತ್ತಿದ್ದರು ಆ ಸಂದರ್ಭದಲ್ಲಿ ಎಕಾನಮಿ ಕ್ಲಾಸ್ ಕ್ಯಾಬಿನೆಟ್‍ನಲ್ಲಿ ಕೆಲಸ ಮಾಡುವ ಸಿಬ್ಬಂದಿಗಳು ಲಿಖಿತ ಎಚ್ಚರಿಕೆ ನೀಡಿದರು ಆತ ಬಾಯಿಗೆ ಬಂದಂತೆ ಮಾತನಾಡುತ್ತಿದ್ದರು. ನಂತರ ಅದೇ ರೀತಿ ವರ್ತಿಸಿದ್ದರಿಂದ ಸಿಬ್ಬಂದಿ ಆತನನ್ನು ತಡೆದರು ಎಂದು ಎಫ್ಐಆರ್‍ನಲ್ಲಿ ತಿಳಿಸಲಾಗಿದೆ.
ಕಬಡ್ಡಿ ಫೈನಲ್‍ಗೆ ಲಗ್ಗೆ ಇಟ್ಟ ಭಾರತ ಮಹಿಳಾ ತಂಡ
ಎಫ್ಐಆರ್‍ನ ಪ್ರಕಾರ ಪ್ರಯಾಣಿಕ ದೂರುದಾರರು ಮತ್ತು ಇತರ ಮಹಿಳಾ ಸಿಬ್ಬಂದಿಯನ್ನು ಬಾಯಿಗೆ ಬಂದಂತೆ ನಿಂದಿಸಿದ್ದಾರೆ ಎಂದು ಆರೋಪಿಸಲಾಗಿದೆ. ಅವನು ತುಂಬಾ ಜೋರಾಗಿ ಮಾತನಾಡುತ್ತಿದ್ದನು ಮತ್ತು ಅವನ ಸುತ್ತ ಕುಳಿತಿದ್ದ ಪ್ರಯಾಣಿಕರು ಮತ್ತು ಕುಟುಂಬಗಳನ್ನು ಹೆದರಿಸುವಂತಹ ಅಸಭ್ಯ ಭಾಷೆಯನ್ನು ಬಳಸಿದನು. ಅವನು ನಮ್ಮ ದೇಶದ (ಭಾರತ) ಬಗ್ಗೆ ತುಂಬಾ ಅಗೌರವ ತೋರುತ್ತಿದ್ದನು ಮತ್ತು ಅವನ ನಡವಳಿಕೆಯು ತುಂಬಾ ಆಕ್ರಮಣಕಾರಿಯಾಗಿತ್ತು ಎಂದು ಎಫ್ಐಆರ್ ಹೇಳಿದೆ.
ಭಾರತೀಯ ದಂಡ ಸಂಹಿತೆಯ ಸೆಕ್ಷನ್ 509 (ಪದ, ಸನ್ನೆ ಅಥವಾ ಮಹಿಳೆಯ ನಮ್ರತೆಯನ್ನು ಅವಮಾನಿಸುವ ಉದ್ದೇಶದಿಂದ) ಮತ್ತು ವಿಮಾನ ನಿಯಮಗಳ ಸೆಕ್ಷನ್ 22 ಮತ್ತು 23 ರ ಅಡಿಯಲ್ಲಿ ಆರೋಪಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪಂಜಾಬ್‍ನ ಜಲಂಧರ್ ಎಂದು ಪೊಲೀಸರು ತಿಳಿಸಿದ್ದಾರೆ.