Saturday, August 23, 2025
Homeರಾಷ್ಟ್ರೀಯ | Nationalಆರ್‌ಜೆಡಿ ನಾಯಕ ತೇಜಸ್ವಿ ಯಾದವ್‌ ವಿರುದ್ಧ ಎಫ್‌ಐಆರ್‌

ಆರ್‌ಜೆಡಿ ನಾಯಕ ತೇಜಸ್ವಿ ಯಾದವ್‌ ವಿರುದ್ಧ ಎಫ್‌ಐಆರ್‌

FIR against RJD leader Tejashwi Yadav

ಶಹಜಹಾನ್‌ಪುರ,ಆ.23- ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್‌ ಮಾಡಿರುವ ಕುರಿತು ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ನಾಯಕ ತೇಜಸ್ವಿ ಯಾದವ್‌ ವಿರುದ್ಧ ಇಲ್ಲಿನ ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದಾರೆ.

ಈ ಸಂಬಂಧ ಬಿಜೆಪಿ ನಗರಾಧ್ಯಕ್ಷೆ ಶಿಲ್ಪಿ ಗುಪ್ತಾ ದೂರು ದಾಖಲಿಸಿ ಎಫ್‌ಐಆರ್‌ ದಾಖಲಿಸಲಾಗಿದೆ ಎಂದು ಪೊಲೀಸ್‌‍ ವರಿಷ್ಠಾಧಿಕಾರಿ (ಎಸ್‌‍ಪಿ) ರಾಜೇಶ್‌ ದ್ವಿವೇದಿ ಹೇಳಿದ್ದಾರೆ. ಪ್ರಧಾನಿ ವಿರುದ್ಧ ಯಾದವ್‌ ಅವರ ಅಸಭ್ಯ ಹೇಳಿಕೆ ದೇಶದ ಜನರಲ್ಲಿ ಅಪಾರ ಕೋಪವನ್ನು ಉಂಟುಮಾಡಿದೆ ಎಂದು ಗುಪ್ತಾ ಅವರ ದೂರಿನಲ್ಲಿ ಆರೋಪಿಸಲಾಗಿತ್ತು.

ಸದರ್‌ ಬಜಾರ್‌ ಪೊಲೀಸ್‌‍ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್‌ ಹಾಗೂ ಪೋಸ್ಟ್‌ ಸಾರ್ವಜನಿಕರು ಮತ್ತು ಬಿಜೆಪಿ ಕಾರ್ಯಕರ್ತರಲ್ಲಿ ಅಸಮಾಧಾನವನ್ನು ಸೃಷ್ಟಿಸಿದೆ ಎಂದು ಆರೋಪಿಸಿದೆ.ಈ ಪೋಸ್ಟ್‌ ಅನ್ನು ಅಧಿಕೃತ ಆರ್‌ಜೆಡಿ ಖಾತೆಯಿಂದ ಮಾಡಲಾಗಿದೆ ಎಂದು ಗುಪ್ತಾ ಹೇಳಿದರು.

ಇಂದು, ಮತ ಕಳ್ಳ ಬಿಹಾರದ ಗಯಾಕ್ಕೆ ಬರುತ್ತಾನೆ ಮತ್ತು ಬಿಹಾರಿಗಳ ಮುಂದೆ ಸುಳ್ಳಿನ ಮೇಲೆ ಸುಳ್ಳು ಹೇಳುತ್ತಾನೆ ಎಂದು ಯಾದವ್‌ ಪೋಸ್ಟ್‌ ಹಾಕಿದ್ದರು. ಬಿಹಾರದ ಮಾಜಿ ಉಪಮುಖ್ಯಮಂತ್ರಿಯ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್‌ 353(2) (ವದಂತಿಗಳನ್ನು ಹರಡುವುದು) ಮತ್ತು 197(1)ಂ (ಚಿತ್ರದ ಮೂಲಕ ಆರೋಪ ಮಾಡುವುದು) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಏತನಧ್ಯೆ, ಸ್ಥಳೀಯ ಶಾಸಕ ಮಿಲಿಂದ್‌ ನರೋಟೆ ಅವರ ದೂರಿನ ಮೇರೆಗೆ ಮಹಾರಾಷ್ಟ್ರದ ಗಡ್ಚಿರೋಲಿ ಜಿಲ್ಲೆಯಲ್ಲಿ ಯಾದವ್‌ ವಿರುದ್ಧ ಪ್ರತ್ಯೇಕ ಎಫ್‌ಐಆರ್‌ ದಾಖಲಿಸಲಾಗಿದೆ.

ಯಾದವ್‌ ವಿರುದ್ಧ ಬಿಎನ್‌ಎಸ್‌‍ ಸೆಕ್ಷನ್‌ 196 (ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು), 356 (ಮಾನನಷ್ಟ), 352 (ಶಾಂತಿ ಭಂಗವನ್ನು ಪ್ರಚೋದಿಸುವ ಉದ್ದೇಶದಿಂದ ಉದ್ದೇಶಪೂರ್ವಕ ಅವಮಾನ), ಮತ್ತು 353 (ಸಾರ್ವಜನಿಕ ದುಷ್ಕೃತ್ಯಕ್ಕೆ ಕಾರಣವಾಗುವ ಹೇಳಿಕೆಗಳು) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್‌‍ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

RELATED ARTICLES

Latest News