Thursday, December 19, 2024
Homeರಾಷ್ಟ್ರೀಯ | Nationalಕರೆಂಟ್ ಕದ್ದ ಮಾಜವಾದಿ ಪಕ್ಷದ ಸಂಸದನ ವಿರುದ್ಧ ಎಫ್ಐಆರ್

ಕರೆಂಟ್ ಕದ್ದ ಮಾಜವಾದಿ ಪಕ್ಷದ ಸಂಸದನ ವಿರುದ್ಧ ಎಫ್ಐಆರ್

FIR against SP's Sambhal MP for power theft

ಸಂಭಾಲ್ (ಯುಪಿ), ಡಿ 19-ಇಲ್ಲಿನ ದೀಪಾ ಸರಾಯ್ನಲ್ಲಿರು ಸಮಾಜವಾದಿ ಪಕ್ಷದ ಸಂಭಾಲ್ ಕ್ಷೇತ್ರದ ಸಂಸದ ಜಿಯಾವುರ್ ರೆಹಮಾನ್ ಬಾರ್ಕ್ ಅವರು ತಮ ಮನೆಗೆ ಅಕ್ರಮ ಸಂಕರ್ಪ ಪಡೆದ ಹಿನ್ನಲೆಯಲ್ಲಿ ವಿದ್ಯುತ್ ಕಳ್ಳತನದ ಆರೋಪದ ಮೇಲೆ ಉತ್ತರ ಪ್ರದೇಶ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಸಂಸದರ ವಿರುದ್ಧ ವಿದ್ಯುತ್ ಕಾಯ್ದೆ, 2003, (ವಿದ್ಯುತ್ ಕಳ್ಳತನ ಅಥವಾ ಅನಧಿಕೃತ ವಿದ್ಯುತ್ ಬಳಕೆ) ಸೆಕ್ಷನ್ 135 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ವಿದ್ಯುತ್ ಪರೀಕ್ಷಾ ಪ್ರಯೋಗಾಲಯದಿಂದ ಪಡೆದ ಗ್ರಾಹಕರ ಮೀಟರ್ ಪರಿಶೀಲಿಸಿದಾಗ ಮೀಟರ್ ಬೈಪಾಸ್ ಮಾಡಿ ಅಕ್ರಮವಾಗಿ ವಿದ್ಯುತ್ ಬಳಕೆ ಮಾಡಿ ವಿದ್ಯುತ್ ಕಳ್ಳತನ ಮಾಡಿರುವುದು ಸ್ಪಷ್ಟವಾಗಿದೆ ಎಂದು ವಿದ್ಯುತ್ ಇಲಾಖೆ ಅಧಿಕಾರಿಯೊಬ್ಬರು ನೀಡಿದ ದೂರಿನ ಮೇರೆಗೆ ಎಫ್ಐಆರ್ದಾಖಲಿಸಲಾಗಿದೆ.

ಭಾರೀ ಭದ್ರತೆಯ ನಡುವೆ ಇಂದು ಬೆಳಗ್ಗೆ ಸಂಸದರ ನಿವಾಸವನ್ನು ಇಲಾಖೆ ಪರಿಶೀಲಿನೆ ಕೂಡ ನಡೆಸಿದೆ.ಕಳೆದ ನವೆಂಬರ್ 24 ರಂದು ನಗರದ ಕೋಟ್ ಗಾರ್ವಿ ಪ್ರದೇಶದಲ್ಲಿರುವ ಶಾಹಿ ಜಾಮಾ ಮಸೀದಿಯನ್ನು ನ್ಯಾಯಾಲಯದ ಆದೇಶದ ಸಮೀಕ್ಷೆಯ ಸಂದರ್ಭದಲ್ಲಿ ಭದ್ರತಾ ಸಿಬ್ಬಂದಿಯೊಂದಿಗೆ ಘರ್ಷಣೆಯಲ್ಲಿ ನಾಲ್ವರು ಸ್ಥಳೀಯರ ಸಾವಿಗೆ ಕಾರಣವಾದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಪೊಲೀಸರು ದಾಖಲಿಸಿರುವ ಪ್ರಕರಣದಲ್ಲೂ ಬಾರ್ಕ್ ಹೆಸರೂ ಕೂಡ ಇದೆ.

ತನ್ನ ಬಂಧನಕ್ಕೆ ತಡೆ ಕೋರಿ ಅಲಹಾಬಾದ್ ಹೈಕೋರ್ಟ್ನಲ್ಲಿ ರಿಟ್ ಅರ್ಜಿ ಸಲ್ಲಿಸಿರುವ ಅವರು ತಮ ವಿರುದ್ಧ ದಾಖಲಾಗಿರುವ ಎಫ್ಐಆರ್ ರದ್ದುಗೊಳಿಸುವಂತೆ ಕೋರಿದ್ದಾರೆ. ನವೆಂಬರ್ 24 ರಂದು ಸಂಸದರು ಜನರನ್ನು ಪ್ರಚೋದಿಸಿದ್ದಾರೆ ಎಂದು ಆರೋಪಿಸಲಾಗಿದ್ದು, ಸಮೀಕ್ಷೆಯ ವೇಳೆ ಹಿಂಸಾಚಾರಕ್ಕೆ ಅವರ ಪ್ರಚೋದನಕಾರಿ ಭಾಷಣವೇ ಕಾರಣ ಎಂದು ಪೊಲೀಸರು ಆರೋಪಿಸಿದ್ದಾರೆ.ಈಗ ವಿದ್ಯುತ್ ಕಳ್ಳತನ ಕುರಿತು ಎಫ್ಐಆರ್ ದಾಖಲಾಗಿದೆ.

RELATED ARTICLES

Latest News