ಲಕ್ನೋ,ಆ.14- ಅಯೋಧ್ಯೆಯ ರಾಮಪಥ ಹಾಗೂ ಭಕ್ತಿಪಥದಲ್ಲಿದ್ದ 50 ಲಕ್ಷ ರೂ. ಮೌಲ್ಯದ ಬೀದಿ ದೀಪಗಳನ್ನು ಕಳವು ಮಾಡಲಾಗಿದೆ. ಆ.9 ರಂದು ದೂರು ದಾಖಲಿಸಿದ ನಂತರ ವಿಷಯ ಬೆಳಕಿಗೆ ಬಂದಿದೆ.
3,800ಕ್ಕೂ ಅಧಿಕ ಬೀದಿ ದೀಪಗಳು ಹಾಗೂ 36 ಪೊಜೆಕ್ಟರ್ ದೀಪಗಳನ್ನು ಕಳವು ಮಾಡಲಾಗಿದ್ದು, ಪೊಲೀಸರಿಗೆ ದೂರು ನೀಡಲಾಗಿದೆ. ಮಾರ್ಗಗಳಲ್ಲಿ ದೀಪಗಳನ್ನು ಅಳವಡಿಸಿದ ಸಂಸ್ಥೆಗಳ ಪ್ರತಿನಿಧಿ, ರಾಮಜನಭೂಮಿ ಪೊಲೀಸ್ ಠಾಣೆಯಲ್ಲಿ ನೀಡಿದ ದೂರು ಆಧರಿಸಿ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
ಖಾಸಗಿ ಸಂಸ್ಥೆಗಳಾದ ಯಶ್ ಎಂಟರ್ಪ್ರೈಸಸ್ ಮತ್ತು ಕೃಷ್ಣಾ ಆಟೋಮೊಬೈಲ್ಸ್ ರಾಮಪಥದಲ್ಲಿ 6,400 ಬಿದಿರಿನ ದೀಪಗಳು ಮತ್ತು ಭಕ್ತಿಪಥದಲ್ಲಿ 96 ಗೋಬೋ ಪೊಜೆಕ್ಟರ್ ದೀಪಗಳನ್ನು ಅಳವಡಿಸಿವೆ. ಭಕ್ತಿ ಪಥವು ಅಯೋಧ್ಯೆಯ ರಾಮಮಂದಿರಕ್ಕೆ ಹೋಗುವ ಮುಖ್ಯ ರಸ್ತೆಯಾಗಿದ್ದು, ಶೃಂಗಾರ್ ಘಾಟ್ ಅನ್ನು ಹನುಮಾನ್ ಗರ್ಹಿ ಮತ್ತು ಅಂತಿಮವಾಗಿ ದೇವಸ್ಥಾನಕ್ಕೆ ಸಂಪರ್ಕಿಸುತ್ತದೆ.
ಅಯೋಧ್ಯೆಯಲ್ಲಿ ಹೆಚ್ಚಿನ ಭದ್ರತಾ ಪ್ರದೇಶದಲ್ಲಿರುವ ಭಕ್ತಿ ಪಥ ಮತ್ತು ರಾಮ ಪಥ ಮೇಲೆ ದೀಪಗಳನ್ನು ಅಳವಡಿಸಲಾಗಿತ್ತು. ಅಯೋಧ್ಯೆ ಅಭಿವೃದ್ಧಿ ಪ್ರಾಧಿಕಾರವು ನೀಡಿದ ಗುತ್ತಿಗೆಯಡಿಯಲ್ಲಿ ದೀಪಗಳನ್ನು ಸ್ಥಾಪಿಸಿದ ಯಶ್ ಎಂಟರ್ಪ್ರೈಸಸ್ ಮತ್ತು ಕೃಷ್ಣ ಆಟೋಮೊಬೈಲ್ಸ್ ಸಂಸ್ಥೆಯ ಪ್ರತಿನಿಯಿಂದ ದೂರು ದಾಖಲಾಗಿದೆ.
ರಾಮಪಥದಲ್ಲಿ 6,400 ಬಿದಿರಿನ ದೀಪಗಳು ಮತ್ತು ಭಕ್ತಿ ಪಥದಲ್ಲಿ 96 ಪೊಜೆಕ್ಟರ್ ದೀಪಗಳನ್ನು ಅಳವಡಿಸಲಾಗಿದೆ. ಮಾರ್ಚ್ 19 ರವರೆಗೆ ಎಲ್ಲಾ ದೀಪಗಳು ಇದ್ದವು ಆದರೆ ಮೇ 9 ರಂದು ಪರಿಶೀಲನೆಯ ನಂತರ ಕೆಲವು ದೀಪಗಳು ಕಾಣೆಯಾಗಿರುವುದು ಕಂಡುಬಂದಿದೆ. ಇದುವರೆಗೆ ಸುಮಾರು 3,800 ದೀಪಗಳು ಬಿದಿರಿನ ದೀಪಗಳು ಮತ್ತು 36 ಪೊಜೆಕ್ಟರ್ ದೀಪಗಳನ್ನು ಕಳ್ಳರು ಕ್ದೊಯ್ದಿದ್ದಾರೆ ಎಂದು ಶೇಖರ್ ಶರ್ಮಾ ದೂರಿನಲ್ಲಿ ತಿಳಿಸಿದ್ದಾರೆ.
ಅಯೋಧ್ಯೆಯ ಮತ್ತೊಂದು ಪ್ರಮುಖ ಮಾರ್ಗವಾದ ರಾಮಪಥ, 13 ಕಿಮೀ ಉದ್ದದ ಹೆದ್ದಾರಿಯಾಗಿದ್ದು, ಅದು ಸದಾತ್ಗಂಜ್ ಅನ್ನು ನಯಾ ಘಾಟ್ಗೆ ಸಂಪರ್ಕಿಸುತ್ತದೆ. ಪ್ರಯಾಣಿಕರು ನೇರವಾಗಿ ರಾಮಮಂದಿರಕ್ಕೆ ಪ್ರಯಾಣಿಸಲು ಅನುವು ಮಾಡಿಕೊಡುತ್ತದೆ.
ಖಾಸಗಿ ಸಂಸ್ಥೆಗಳು ಅಯೋಧ್ಯೆಯ ಅತ್ಯಂತ ಭದ್ರತಾ ಪ್ರದೇಶದಲ್ಲಿರುವ ಭಕ್ತಿಪಥ ಮತ್ತು ರಾಮಪಥದಲ್ಲಿ ಅಳವಡಿಸಲಾದ 50 ಲಕ್ಷಕ್ಕೂ ಹೆಚ್ಚು ಮೌಲ್ಯದ 3,800 ಬಿದಿರು ಮತ್ತು 36 ಪೊಜೆಕ್ಟರ್ ಲೈಟ್ಗಳನ್ನು ಸ್ಥಾಪಿಸಲಾಗಿದ್ದು, ಕಳ್ಳತನವಾಗಿದೆ ಎಂದು ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಈ ಸಂಬಂಧ ಎಫ್ಐಆರ್ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಯೋಧ್ಯೆ ಅಭಿವೃದ್ಧಿ ಪ್ರಾಧಿಕಾರದಿಂದ ಮಾರ್ಗಗಳಲ್ಲಿ ದೀಪಗಳನ್ನು ಅಳವಡಿಸುವ ಗುತ್ತಿಗೆಯನ್ನು ಇಬ್ಬರಿಗೆ ನೀಡಲಾಯಿತು. ಜನವರಿ 22 ರಂದು ಪವಿತ್ರ ನಗರದಲ್ಲಿ ರಾಮಮಂದಿರದ ಪ್ರತಿಷ್ಠಾಪನೆ ಸಮಾರಂಭದ ಮೊದಲು ಅಯೋಧ್ಯೆಯನ್ನು ಪ್ರಮುಖ ಯೋಜನೆಯಡಿ ನವೀಕರಿಸಲಾಗಿದೆ.