ಬೆಂಗಳೂರು, ಮೇ 24- ಚಲನ ಚಿತ್ರ ನಿರ್ಮಾಪಕ ಹಾಗೂ ಉದ್ಯಮಿ ಸೌಂದರ್ಯ ಜಗದೀಶ್ ಆತಹತ್ಯೆ ಪ್ರಕರಣ ಸಂಬಂಧ ಮೂವರು ಪಾಲದಾರರ ವಿರುದ್ಧ ಮಹಾಲಕ್ಷ್ಮೀ ಲೇಔಟ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಉದ್ಯಮದ ಪಾಲುದಾರರಾದ ಸುರೇಶ್, ಹೊಂಬಣ್ಣ ಹಾಗೂ ಸುಧೀಂದ್ರ ಎಂಬುವವರು ಮೋಸ ಮಾಡಿದ್ದರಿಂದ ಮಾನಸಿಕವಾಗಿ ನೊಂದು ನನ್ನ ಪತಿ ಆತಹತ್ಯೆ ಮಾಡಿಕೊಂಡಿದ್ದಾರೆ ಎಂದು ಪತ್ನಿ ಶಶಿರೇಖಾ ಅವರು ದೂರು ನೀಡಿದ್ದಾರೆ.
ಅಲ್ಲದೇ ಇವರುಗಳಿಂದ ನಮ್ಮ ಕುಟುಂಬಕ್ಕೆ ಜೀವಬೆದರಿಕೆ ಇದೆ ಎಂದು ಆರೋಪಿಸಿದ್ದಾರೆ. ಈ ದೂರಿನನ್ವಯ ಪೊಲೀಸರು ಈ ಮೂವರ ವಿರುದ್ಧ ಎಫ್‌ಐಆರ್ ದಾಖಲಿಸಕೊಂಡು ತನಿಖೆ ಚುರುಕುಗೊಳಿಸಿದ್ದಾರೆ.ಸೌಂದರ್ಯ ಜಗದೀಶ್ ಅವರು ಆತಹತ್ಯೆಗೂ ಮುನ್ನ ಬರೆದಿಟ್ಟಿರುವ ಡೆತ್ ನೋಟ್ ಸಿಕ್ಕಿದೆ ಎಂದು ಶಶಿರೇಖಾ ಅವರು ಪೊಲೀಸರಿಗೆ ತಿಳಿಸಿದ್ದಾರೆ.
ಮೇ 18ರಂದು ಜಗದೀಶ್ ಅವರ ರೂಮಿನಲ್ಲಿದ್ದ ಬಟ್ಟೆಯನ್ನು ಪೂಜೆಗಿಡಲು ತೆಗೆದುಕೊಳ್ಳುವಾಗ ಡೆತ್ ನೋಟ್ ಪತ್ತೆಯಾಗಿದೆ. ಅದರಲ್ಲಿ, ಸೌಂದರ್ಯ ಕನ್‌ಸ್ಟ್ರಕ್ಷನ್‌ನ ಸಹ ಪಾಲುದಾರರಾದ ವಿ.ಎಸ್.ಸುರೇಶ್, ಹೊಂಬಣ್ಣ ಎಸ್.ಪಿ ಹಾಗೂ ಸುಧೀಂದ್ರ ಎಂಬವರು ಜಗದೀಶ್ ಅವರಿಂದ ಹಣವನ್ನು ಹೂಡಿಕೆ ಮಾಡಿಸಿದ್ದರು.
ಕಂಪನಿ ಲಾಭದಲ್ಲಿದ್ದರೂ ಸಹ ಸುಳ್ಳು ನಷ್ಟ ತೋರಿಸಿ ತಮ ಕುಟುಂಬದ ಆಸ್ತಿಗಳನ್ನು ಬ್ಯಾಂಕ್‌ನಲ್ಲಿ ಅಡವಿರಿಸಿ ಸಾಲ ಪಡೆದು ಸುಮಾರು 60 ಕೋಟಿ ರೂ.ನಷ್ಟು ಹಣವನ್ನು ವೈಯಕ್ತಿಕವಾಗಿ ಬಳಸಿಕೊಂಡಿದ್ದಾರೆ ಎಂದು ದೂರಿನಲ್ಲಿ ವಿವರಿಸಿದ್ದಾರೆ.
ಈ ಮೂವರು ಸಬೂಬು ಹೇಳಿ ಖಾಲಿ ಚೆಕ್ ಹಾಗೂ ಖಾಲಿ ಹಾಳೆಗಳ ಮೇಲೆ ಜಗದೀಶ್ ಸಹಿ ಪಡೆದು ಹಣ ದುರುಪಯೋಗಪಡಿಸಿಕೊಂಡಿದ್ದಾರೆ. ಇದನ್ನು ಪ್ರಶ್ನಿಸಿದ ಜಗದೀಶ್ ಅವರಿಗೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ.
ಈ ವಿಚಾರವಾಗಿ ಸುರೇಶ್ ಹಾಗೂ ಹೊಂಬಣ್ಣ ಅವರ ಬಳಿ ಕೇಳಿದಾಗ ಅವರು ಹಣ ಕೊಡುವುದಾಗಿ ಹೇಳಿ ಮೋಸ ಮಾಡಿದ್ದಾರೆ. ಆತಹತ್ಯೆ ಮಾಡಿಕೊಳ್ಳುವ ಒಂದು ವಾರಗಳ ಹಿಂದೆ ಸುರೇಶ್ ಹಾಗೂ ಹೊಂಬಣ್ಣ ಅವರು ಜಗದೀಶ್ ಅವರಿಗೆ ನಿರಂತರವಾಗಿ ಕರೆ ಮಾಡುತ್ತಿದ್ದರು. ಆ ಕರೆಗಳು ಬಂದಾಗ ಜಗದೀಶ್ ಜರ್ಜರಿತರಾಗುತ್ತಿದ್ದರು ಎಂದು ಶಶಿರೇಖಾ ಆರೋಪಿಸಿದ್ದಾರೆ.