ಮುಂಬೈ, ಮಾ. 9– ಮುಂಬೈನ ಅಂಧೇರಿ ಪ್ರದೇಶದ ರಸ್ತೆಯೊಂದರಲ್ಲಿ ಸೋರಿಕೆಯಾದ ಗ್ಯಾಸ್ ಪೈಪ್ ಲೈನ್‌ಗೆ ಮುಂಜಾನೆ ಬೆಂಕಿ ಹೊತ್ತಿಕೊಂಡ ಪರಿಣಾಮ ಮೂವರು ಗಾಯಗೊಂಡಿದ್ದಾರೆ.
ಅಂಧೇರಿ (ಪೂರ್ವ) ಪ್ರದೇಶದ ತಕ್ಷಿಲಾದಲ್ಲಿ ಗುರುದ್ವಾರದ ಸಮೀಪವಿರುವ ಶೇರ್, ಇ-ಪಂಜಾಬ್ ಸೊಸೈಟಿಯ ರಸ್ತೆಯ ಮಧ್ಯದಲ್ಲಿ ಹಾದುಹೋದ ಮಹಾನಗರ ಗ್ಯಾಸ್ ಲಿಮಿಟೆಡ್‌ನ ಸರಬರಾಜು ಪೈಪ್ ಲೈನ್‌ನಲ್ಲಿ 12.35 ಕ್ಕೆ ಬೆಂಕಿ ಕಾಣಿಸಿಕೊಂಡಿದೆ ಎಂದು ಅಗ್ನಿಶಾಮಕ ಅಧಿಕಾರಿ ತಿಳಿಸಿದ್ದಾರೆ.
ಇದು ಲೆವೆಲ್ -ಒನ್ ಬೆಂಕಿಯಾಗಿದ್ದು, ಮೂವರು ಗಾಯಗೊಂಡಿದ್ದಾರೆ ಎರಡು ವಾಹನ ಹಾನಿಯಾಗಿದೆ ಎಂದು ಹೇಳಿದರು. ನೀರಿನ ಟ್ಯಾಂಕರ್, ಅಗ್ನಿಶಾಮಕ ವಾಹನ ಮತ್ತು ಇತರ ನೆರವಿನೊಂದಿಗೆ ಸ್ಥಳಕ್ಕೆ ಧಾವಿಸಲಾಯಿತು ಸುಮಾರು 1.34 ಕ್ಕೆ ಬೆಂಕಿಯನ್ನು ನಂದಿಸಲಾಗಿದೆ, ಬೆಂಕಿಗೆ ನಿಖರವಾದ ಕಾರಣವನ್ನು ಇನ್ನೂ ತಿಳಿದುಬಂದಿಲ್ಲ ಎಂದರು.