ಮೀರುತ್ (ಉತ್ತರಪ್ರದೇಶ), ಮಾ.24- ಮೊಬೈಲ್ ಚಾರ್ಜರ್ನಿಂದ ಕಾಣಿಸಿಕೊಂಡ ಬೆಂಕಿ ಮನೆಗೆ ವ್ಯಾಪಿಸಿಕೊಂಡು ನಾಲ್ವರು ಸಹೋದರರು ಸಾವನ್ನಪ್ಪಿ , ಪೋಷಕರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಉತ್ತರಪ್ರದೇಶದ ಪಲ್ಲವಪುರ ಪ್ರದೇಶದಲ್ಲಿ ಸಂಭವಿಸಿದೆ.
ಕಳೆದ ತಡರಾತ್ರಿ ಪಲ್ಲವಪುರದ ಜನತಾ ಕಾಲೋನಿಯಲ್ಲಿ ಈ ದುರ್ಘಟನೆ ಸಂಭವಿಸಿದ್ದು, ಮೊಬೈಲ್ ಚಾರ್ಜರ್ನಿಂದ ಕಾಣಿಸಿಕೊಂಡ ಬೆಂಕಿ ಮನೆಯೆಲ್ಲಾ ವ್ಯಾಪಿಸಿದ ಪರಿಣಾಮ ಈ ದುರಂತ ಸಂಭವಿಸಿದೆ.ದುರ್ಘಟನೆಯಲ್ಲಿ ಮೃತಪಟ್ಟವರನ್ನು ಸಾರಿಕಾ (10), ನಿಹಾರಿಕಾ (8), ಶಾಶಂಕರ್ (6), ಕಲು (6) ಮೃತಪಟ್ಟಿದ್ದು , ಪೋಷಕರಾದ ಜಾನ್ (41) ಹಾಗೂ ಬಾಬಿತಾ (37) ಗಂಭೀರವಾಗಿ ಗಾಯ ಗೊಂಡಿದ್ದಾರೆ.
ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಆಗಮಿಸಿದ ಸ್ಥಳೀಯ ಪೊಲೀಸರು ಪೋಷಕರು ಹಾಗೂ ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಿದರಾದರೂ ಚಿಕಿತ್ಸೆ ಫಲಿಸದೆ ನಾಲ್ವರು ಮಕ್ಕಳು ಮೃತಪಟ್ಟರೆ, ಪೋಷಕರು ಪ್ರಾಣಾಪಾಯದಿಂದ ಪಾರಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೊಬೈಲ್ ಫೋನ್ ಚಾರ್ಜರ್ನಿಂದ ಕಾಣಿಸಿಕೊಂಡ ಬೆಂಕಿ ಹಾಸಿಗೆ ಮತ್ತು ಬೆಡ್ಶಿಟ್ಗೂ ವ್ಯಾಪಿಸಿಕೊಂಡು ಈ ದುರಂತ ಸಂಭವಿಸಿದೆ ಎಂದು ಚಿಕಿತ್ಸೆ ಪಡೆಯುತ್ತಿರುವ ಜಾನ್ ತಿಳಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪಲ್ಲಮಪುರ ಠಾಣೆ ಪೊಲೀಸರು ಮುಂದಿನ ಕ್ರಮಕೈಗೊಂಡಿದ್ದಾರೆ.ನಾಲ್ವರು ಮಕ್ಕಳನ್ನು ಕಳೆದುಕೊಂಡ ಪೋಷಕರು ಹಾಗೂ ಸಂಬಂಕರ ಆಕ್ರಂದನ ಮುಗಿಲು ಮುಟ್ಟಿದೆ.