Saturday, August 30, 2025
Homeಜಿಲ್ಲಾ ಸುದ್ದಿಗಳು | District Newsಗಣೇಶ ಮೂರ್ತಿ ಮೆರವಣಿಗೆ ವೇಳೆ ಪಟಾಕಿ ಸ್ಫೋಟ, ಬಾಲಕ ದುರ್ಮರಣ, ಹಲವರಿಗೆ ಗಾಯ

ಗಣೇಶ ಮೂರ್ತಿ ಮೆರವಣಿಗೆ ವೇಳೆ ಪಟಾಕಿ ಸ್ಫೋಟ, ಬಾಲಕ ದುರ್ಮರಣ, ಹಲವರಿಗೆ ಗಾಯ

Firecracker explosion during Ganesh idol procession, boy dies

ದೊಡ್ಡಬಳ್ಳಾಪುರ,ಆ.30– ಗಣೇಶ ವಿಸರ್ಜನೆ ಮೆರವಣಿಗೆಯ ಸಂಭ್ರಮದ ವೇಳೆ ಪಟಾಕಿ ತುಂಬಿದ್ದ ಬಾಕ್‌್ಸ ಸ್ಫೋಟಗೊಂಡ ಪರಿಣಾಮ ಬಾಲಕನೊಬ್ಬ ಸಾವನ್ನಪ್ಪಿ ಹಲವರು ಗಾಯಗೊಂಡಿರುವ ದುರ್ಘಟನೆ ನಗರದ ಮುತ್ತೂರಿನಲ್ಲಿ ನಡೆದಿದೆ.

ತನುಷ್‌ ರಾವ್‌ (15) ಮೃತಪಟ್ಟ ಬಾಲಕ. ತೀವ್ರವಾಗಿ ಗಾಯಗೊಂಡಿದ್ದ ಬಾಲಕನನ್ನು ಹತ್ತಿರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಆತ ಮೃತಪಟ್ಟಿದ್ದಾನೆ.
ನಿನ್ನೆ ಸಂಜೆ ಮುತ್ತೂರಿನ ಫ್ರೆಂಡ್ಸ್ ವಿನಾಯಕ ಗ್ರೂಪ್‌ ವತಿಯಿಂದ ಗಣೇಶ ವಿಸರ್ಜನೆ ಮೆರವಣಿಗೆಗೆ ತಯಾರಿ ನಡೆಸಲಾಗಿತ್ತು. ಟ್ರಾಕ್ಟರ್‌ನಲ್ಲಿ ಗಣೇಶ ಮೂರ್ತಿಯನ್ನು ಮೆರವಣಿಗೆ ಮಾಡಲು ಪ್ರತಿಷ್ಠಾಪಿಸಿ, ಹೆಚ್ಚಿನ ಆಕರ್ಷಣೆಗೆ ಪವರ್‌ ಲಿಫ್ಟರ್‌ ವಾಹನ ಕರೆಸಲಾಗಿತ್ತು. ಪವರ್‌ ಲಿಫ್ಟರ್‌ ವಾಹನದ ಇಂಜಿನ್‌ ಮೇಲ್ಭಾಗದಲ್ಲಿ ಇಡಲಾಗಿದ್ದ ಭಾರಿ ಸದ್ದು ಮಾಡುವ ಪಟಾಕಿಗಳ ಬಾಕ್‌್ಸಏಕಾಏಕಿ ಸ್ಫೋಟಗೊಂಡು ಈ ದುರ್ಘಟನೆ ನಡೆದಿದೆ.

ಇದೇ ವೇಳೆ ವಿದ್ಯಾರ್ಥಿಗಳಾದ ಗಣೇಶ್‌, ಯೋಗೇಶ್‌, ಪವರ್‌ ಲಿಫ್ಟರ್‌ ಚಾಲಕ ಮುನಿರಾಜು, ನಾಗರಾಜು ಹಾಗೂ ಚೇತನ್‌ ಶಾವಿ ಸುಟ್ಟ ಗಾಯಗಳಾಗಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ. ಅಲ್ಲದೆ ಪಟಾಕಿ ಬಾಕ್‌್ಸ ಸ್ಪೋಟದ ತೀವ್ರತೆಗೆ ಮೆರವಣಿಗೆಯ ಬಂದೋಬಸ್ತ್‌ ಕರ್ತವ್ಯದಲ್ಲಿದ್ದ ಪೊಲೀಸ್‌‍ ಕಾನ್‌ಸ್ಟೇಬಲ್‌ ಜಾಕಿರ್‌ ಹುಸೇನ್‌ ಅವರಿಗೂ ಗಂಭೀರ ಗಾಯಗಳಾಗಿದ್ದು, ಅವರನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ ಜಿಲ್ಲಾ ಪೊಲೀಸ್‌‍ ವರಿಷ್ಟಾಧಿಕಾರಿ ಸಿ.ಕೆ. ಬಾಬಾ, ಅಪರ ಪೊಲೀಸ್‌‍ ವರಿಷ್ಠಾಧಿಕಾರಿ ನಾಗರಾಜ್‌, ಡಿವೈಎಸ್ಪಿ ರವಿ ಸೇರಿದಂತೆ ಪೊಲೀಸ್‌‍ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ, ಆಸ್ಪತ್ರೆಗೆ ತೆರಳಿ ಗಾಯಾಳುಗಳ ಆರೋಗ್ಯ ವಿಚಾರಿಸಿದರು. ದೊಡ್ಡಬಳ್ಳಾಪುರ ನಗರ ಪೊಲೀಸ್‌‍ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

Latest News