Thursday, October 24, 2024
Homeರಾಷ್ಟ್ರೀಯ | Nationalಕಾರಿನ ಟೈರ್ ಸಿಡಿದು ಒಂದೇ ಕುಟುಂಬದ 5 ಮಂದಿ ಸಾವು

ಕಾರಿನ ಟೈರ್ ಸಿಡಿದು ಒಂದೇ ಕುಟುಂಬದ 5 ಮಂದಿ ಸಾವು

Five members of the same family died in a car tire burst

ಜೈಪುರ, ಅ. 24 (ಪಿಟಿಐ) ಕಾರಿನ ಟೈರ್ ಸಿಡಿದು ಸಂಭವಿಸಿದ ಅಪಘಾತದಲ್ಲಿ ಒಂದೇ ಕುಟುಂಬದ ಐದು ಮಂದಿ ಧಾರುಣವಾಗಿ ಸಾವನ್ನಪ್ಪಿರುವ ಘಟನೆ ರಾಜಸ್ಥಾನದಲ್ಲಿ ನಡೆದಿದೆ.

ಸಿರೋಹಿ ಜಿಲ್ಲೆಯ ಹೆದ್ದಾರಿಯೊಂದರಲ್ಲಿ ಟೈರ್ ಒಡೆದ ಪರಿಣಾಮ ಕಾರು ಪಲ್ಟಿಯಾಗಿ ಇಂದು ಬೆಳಗ್ಗೆ ಒಂದೇ ಕುಟುಂಬದ ಐವರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಪಘಾತದಲ್ಲಿ ಮೃತಪಟ್ಟ ಕುಟುಂಬವು ಜೋಧಪುರಕ್ಕೆ ತೆರಳುತ್ತಿದ್ದಾಗ ಬೇವಾರರ್-ಪಿಂಡ್ವಾರಾ ಹೆದ್ದಾರಿಯಲ್ಲಿ ಈ ದುರ್ಘಟನೆ ಸಂಭವಿಸಿದೆ ಎಂದು ಅವರು ಹೇಳಿದರು.

ಚಾಲಕ ಕಾರನ್ನು ಅತಿವೇಗದಲ್ಲಿದ್ದ ಚಲಾಯಿಸುತ್ತಿದ್ದ ಹಿನ್ನೆಲೆಯಲ್ಲಿ ಕಾರಿನ ಟೈರ್ ಸಿಡಿದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಐದು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಶವಾಗಾರಕ್ಕೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

RELATED ARTICLES

Latest News