ಬೆಂಗಳೂರು,ನ.1-ದಾರಿಹೋಕ ಒಂಟಿ ಮಹಿಳೆಯರ ಸರಗಳನ್ನು ಎಗರಿಸುತ್ತಿದ್ದ ಕುಖ್ಯಾತ ಐದು ಮಂದಿ ಸರಗಳ್ಳರನ್ನು ಕೆಂಗೇರಿ ಠಾಣೆ ಪೊಲೀಸರು ಬಂಧಿಸಿ 8ಲಕ್ಷ ರೂ ಮೌಲ್ಯದ 75 ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.
ಕೆಂಗೇರಿಯ ನವೀನ್ (32), ಮಹೇಶ್ (26), ಸುದೀಪ್ (24), ದರ್ಶನ್ (23) ಮತ್ತು ಮೂಲತಃ ಕೋಲಾರದ ಆರ್‌ಆರ್‌ನಗರದಲ್ಲಿ ವಾಸವಾಗಿದ್ದ ಹರ್ಷವರ್ಧನ್ (23)ಬಂಧಿತ ಸರಗಳ್ಳರು.
ಕೆಂಗೇರಿಯ ಕೆಹೆಚ್‌ಬಿ ಪ್ಲಾಟಿನಂ ಅಪಾರ್ಟ್‌ಮೆಂಟ್ ಹಿಂಭಾಗದ ನಿವಾಸಿ ಹೇಮಾವತಿ ಎಂಬುವವರು ಅ.20 ರಂದು ಸಂಜೆ 6.30 ರ ಸುಮಾರಿನಲ್ಲಿ ಕೆಂಗೇರಿ ಉಪನಗರದ 80 ಅಡಿ ರಸ್ತೆಯ ಜೆಕೆ ಮೋಟಾರ್‌ರಸ ಕಾರ್ ಕೇರ್ ಸೆಂಟರ್ ಎದುರಿನ ಪುಟ್‌ಪಾತ್ ಬಳಿ ನಡೆದುಕೊಂಡು ಹೋಗುತ್ತಿದ್ದಾಗ ಬೈಕ್‌ನಲ್ಲಿ ಹಿಂಭಾಲಿಸಿಕೊಂಡು ಬಂದ ಸರಗಳ್ಳರು 75 ಗ್ರಾಂ ತೂಕದ ಎರಡು ಚಿನ್ನದ ಸರಗಳನ್ನು ಎಗರಿಸಿ ಪರಾರಿಯಾಗಿದ್ದರು.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ಸರಗಳ್ಳರ ಪತ್ತೆಗಾಗಿ ವಿಶೇಷ ತಂಡವನ್ನು ರಚಿಸಲಾಗಿತ್ತು.ಈ ತಂಡ ಕಾರ್ಯಾಚರಣೆ ನಡೆಸಿ ವಿವಿಧ ಆಯಾಮಗಳಲ್ಲಿ ಮಾಹಿತಿಗಳನ್ನು ಕಲೆಹಾಕಿ ಐದು ಮಂದಿ ಆರೋಪಿಗಳನ್ನು ಪತ್ತೆಹಚ್ಚಿ ಬಂಧಿಸಿ ವಿಚಾರಣೆ ನಡೆಸಿ ಎರಡು ದ್ವಿಚಕ್ರ ವಾಹನಗಳು, ನಾಲ್ಕು ಮೊಬೈಲ್ ಫೋನ್‌ಗಳು 75 ಗ್ರಾಂ ತೂಕದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ. ಇವುಗಳ ಒಟ್ಟು ಮೌಲ್ಯ 8 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.
ಈ ಕಾರ್ಯಾಚರಣೆಯನ್ನು ಇನ್‌್ಸಪೆಕ್ಟರ್ ಜಗದೀಶ್ ಅವರನ್ನೊಳಗೊಂಡ ಸಿಬ್ಬಂದಿ ತಂಡ ಕೈಗೊಂಡು ಐದು ಮಂದಿ ಸರಗಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.
