ನ್ಯೂಯಾರ್ಕ್,ಜು. 29- ಅಮೆರಿಕದ ನ್ಯೂಯಾರ್ಕ್ ನಗರದ ಕಚೇರಿಯೊಂದಕ್ಕೆ ನುಗ್ಗಿದ ಶಸ್ತ್ರಯುಕ್ತ ವ್ಯಕ್ತಿಯೊಬ್ಬ ಕರ್ತವ್ಯನಿರತ ಪೊಲೀಸ್ ಅಧಿಕಾರಿ ಸೇರಿದಂತೆ ನಾಲ್ವರ ಮೇಲೆ ಗುಂಡುಹಾರಿಸಿ ಕೊಂದಿದ್ದಾನೆ.ಘಟನೆ ನಂತರ ಆತನೂ ಸಹ ಆತಹತ್ಯೆ ಮಾಡಿಕೊಂಡಿದ್ದಾನೆ ಎಂದು ನ್ಯೂಯಾರ್ಕ್ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಕೊಲೆಯಾದ ಅಧಿಕಾರಿ ನದನಯ ದಿದರುಲ್ ಇಸ್ಲಾಂ (36) ಎಂದು ಗುರುತಿಸಲಾಗಿದ್ದು, ಇವರು ಮೂಲತ: ಬಾಂಗ್ಲಾದೇಶದಿಂದ ವಲಸೆ ಬಂದವರು. ಮತ್ತು ನ್ಯೂಯಾರ್ಕ್ ನಗರದಲ್ಲಿ ಸುಮಾರು 4 ವರ್ಷದಿಂದ ಪೊಲೀಸ್ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು ಎಂದು ಪೊಲೀಸ್ ಆಯುಕ್ತ ಜೆಸ್ಸಿಕಾ ಟಿಶ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಪೊಲೀಸರು ಬಂದೂಕುದಾರಿ ವ್ಯಕ್ತಿಯನ್ನು ಲಾಸ್ ವೇಗಾಸ್‌ನ ಶೇನ್ ಟಮುರಾ ಎಂದು ಗುರುತಿಸಿದ್ದಾರೆ ಮತ್ತು ಅವರು ಸ್ವತಃ ಗುಂಡು ಹಾರಿಸಿಕೊಂಡು ಸಾವನ್ನಪ್ಪಿದ್ದಾನೆ ಎಂದು ಹೇಳಿದರು. ಆರೋಪಿಯ ಮಾನಸಿಕ ಆರೋಗ್ಯಮತ್ತು ಆದರ ಹಿಂದಿನ ಉದ್ದೇಶ ಇನ್ನೂ ತಿಳಿದಿಲ್ಲ ತನಿಖೆ ನಡೆಯುತ್ತಿದೆ ಎಂದು ಆಯುಕ್ತರು ಹೇಳಿದರು.
ನಾಲ್ವರು ಮೃತಪಟ್ಟಿದ್ದು ಆರು ಮಂದಿ ಗಾಯಗೊಂಡಿದ್ದಾರೆ ಮತ್ತು ಅದರಲ್ಲಿ ಒಬ್ಬರ ಸ್ಥಿತಿ ಗಂಭೀರವಾಗಿದೆ, ಏನಾಯಿತು ಎಂಬುದನ್ನು ಅಧಿಕಾರಿಗಳು ಇನ್ನೂ ತನಿಖೆ ನಡೆಸುತ್ತಿದ್ದಾರೆ ಎಂದು ನ್ಯೂಯಾರ್ಕ್ ಮೇಯರ್ ಎರಿಕ್ ಆಡಮ್ಸೌ ಹೇಳಿದ್ದಾರೆ. ಕಣ್ಗಾವಲು ವೀಡಿಯೊದಲ್ಲಿ ವಾಹನದಿಂದ ಹೊರಬಂದು ಆರೋಪಿ 4 ರೈಫಲ್ ಹಿಡಿದು ಕಟ್ಟಡದ ಕಡೆಗೆ ನಡೆದುಕೊಂಡು ಹೋಗುತ್ತಿರುವುದನ್ನು ತೋರಿಸಲಾಗಿದೆ. ಕಟ್ಟಡವನ್ನು ಪ್ರವೇಶಿಸುತ್ತಿದ್ದಂತೆ ಪೊಲೀಸ್ ಅಧಿಕಾರಿಯ ಮೇಲೆ ತಕ್ಷಣವೇ ಗುಂಡು ಹಾರಿಸಿದ ಅವರು, ರಕ್ಷಣೆ ಪಡೆಯಲು ಪ್ರಯತ್ನಿಸಿದ ಮಹಿಳೆಯೊಬ್ಬರನ್ನು ಗುಂಡು ಹಾರಿಸಿ, ನಂತರ ಲಾಬಿಯ ಮೇಲೆ ಗುಂಡು ಹಾರಿಸಲು ಪ್ರಾರಂಭಿಸಿದರು ಎಂದು ಟಿಶ್ ಹೇಳಿದರು.
ನಂತರ ಲಿಫ್‌್ಟ ಬ್ಯಾಂಕ್‌ಗೆ ಹೋಗಿ ಭದ್ರತಾ ಮೇಜಿನ ಹಿಂದೆ ರಕ್ಷಣೆ ಪಡೆಯುತ್ತಿದ್ದ ಭದ್ರತಾ ಸಿಬ್ಬಂದಿಯ ಮೇಲೂ ಗುಂಡು ಹಾರಿಸಿ ಲಾಬಿಯಲ್ಲಿದ್ದ ಮತ್ತೊಬ್ಬ ವ್ಯಕ್ತಿಯ ಮೇಲೂ ಗುಂಡು ಹಾರಿಸಿದ್ದಾರೆ ಎಂದು ಆಯುಕ್ತರು ಹೇಳಿದರು.ಪಾರ್ಕ್ ಅವೆನ್ಯೂ ಕಚೇರಿ ಕಟ್ಟಡಕ್ಕೆ ಸಂಜೆ 6.30 ರ ಸುಮಾರಿಗೆ ಗುಂಡಿನ ದಾಳಿ ಬಗ್ಗೆ ಮಾಹಿತಿ ತಿಳಿದ ತಕ್ಷಣ ತುರ್ತು ಸಿಬ್ಬಂದಿಯನ್ನು ಕರೆಸಲಾಯಿತು ಎಂದು ನ್ಯೂಯಾರ್ಕ್‌ನ ಅಗ್ನಿಶಾಮಕ ಇಲಾಖೆ ತಿಳಿಸಿದೆ.
ಸುಮಾರು 40 ಮಹಡಿಯ ಕಟ್ಟಡದಲ್ಲಿ ದೇಶದ ಕೆಲವು ಉನ್ನತ ಹಣಕಾಸು ಸಂಸ್ಥೆಗಳು ಮತ್ತು ರಾಷ್ಟ್ರೀಯ ಫುಟ್‌ಬಾಲ್ ಪ್ರಧಾನ ಕಚೇರಿ ಹೊಂದಿದೆ. ಘಟನೆಯಿಂದ ಸ್ಥಳದಲ್ಲಿದ್ದ ನೂರು ಜನರು ಆತಂಕಗೊಂಡಿದ್ದರು.ತಲೆಯ ಮೇಲೆ ಕೈಗಳನ್ನು ಹೊತ್ತುಕೊಂಡು ಕಚೇರಿ ಕಟ್ಟಡವನ್ನು ಸ್ಥಳಾಂತರಿಸುತ್ತಿರುವ ಜನರ ಸಾಲುಗಳನ್ನು ತೋರಿಸಿವೆ. ಈ ಕಟ್ಟಡವು ಬ್ಲಾಕ್‌ಸ್ಟೋನ್ ಮತ್ತು ಐರ್ಲೆಂಡ್‌ನ ಕಾನ್ಸುಲೇಟ್ ಜನರಲ್ ಕಚೇರಿಗಳನ್ನು ಒಳಗೊಂಡಿದೆ.
- ಬೆಂಗಳೂರಿನಾದ್ಯಂತ ನಾಗರ ಪಂಚಮಿ ಸಂಭ್ರಮ
- ರಾಷ್ಟ್ರಪತಿ ಅಧಿಕಾರ ಕುರಿತ ವಿಚಾರಣೆಗೆ ಸುಪ್ರೀಂಕೋರ್ಟ್ ಸಮ್ಮತಿ
- ರಾಜ್ಯ ರಾಜಕೀಯದಲ್ಲಿ ಭಾರೀ ಸಂಚಲನ ಮೂಡಿಸಿದ ಖರ್ಗೆ ಹೇಳಿಕೆ
- ನಟಿ ರಮ್ಯಾ ದೂರಿನ ಬಗ್ಗೆ ಡಿಸಿಪಿ ನೇತೃತ್ವದಲ್ಲಿ ತನಿಖೆ
- ಚಿಕ್ಕಪ್ಪನ ಮನೆಯಲ್ಲೇ ಕಳವು ಆರೋಪಿತೆ ಸೇರಿ ನಾಲ್ವರ ಸೆರೆ, 65 ಲಕ್ಷ ಮೌಲ್ಯದ ಚಿನ್ನಾಭರಣ ಜಪ್ತಿ