ಶ್ರೀನಗರ,ಡಿ.25- ಜಮ್ಮು ಕಾಶ್ಮೀರ ಪೂಂಚ್ ಜಿಲ್ಲೆಯ ಗಡಿ ನಿಯಂತ್ರಣ ರೇಖೆ ಬಳಿ ಸೇನಾ ವಾಹನ ಉರುಳಿಬಿದ್ದು ಸಂಭವಿಸಿದ ಅಪಘಾತದಲ್ಲಿ ಕರ್ನಾಟಕದ ಮೂವರು ಯೋಧರು ಹುತಾತರಾಗಿದ್ದಾರೆ. ಹುತಾತರಾದ ಐದು ಯೋಧರಲ್ಲಿ ಕರ್ನಾಟಕದ ಮೂವರು ಹುತಾತರಾಗಿ ರುವುದನ್ನು ಭಾರತೀಯ ಸೇನೆ ದೃಢಪಡಿಸಿದೆ.
ಬೆಳಗಾವಿ ಜಿಲ್ಲೆಯ ಸಾಂಬ್ರಾ ಗ್ರಾಮದ ಯೋಧ ಸುಬೇದಾರ್ ದಯಾನಂದ್ ತಿರಕಣ್ಣವರ(45), ಉಡುಪಿ ಜಿಲ್ಲೆಯ ಕುಂದಾಪುರ ತಾಲ್ಲೂಕಿನ ಕೋಟೇಶ್ವರ ಬಿಜಾಡಿಯ ಅನೂಪ್(33) ಹಾಗೂ ಬಾಗಲಕೋಟೆ ಜಿಲ್ಲೆ ರಬಕವಿ ಬನಹಟ್ಟಿ ತಾಲ್ಲೂಕಿನ ಮಹಾಲಿಂಗಾಪುರದ ಮಹೇಶ್ ನಾಗಪ್ಪ ಮರಿಗೊಂಡ(25) ಹುತಾತರಾದ ವೀರಯೋಧರು.
ಇವರ ಕುಟುಂಬಕ್ಕೆ ಮಾಹಿತಿಯನ್ನು ನೀಡಲಾಗಿದ್ದು, ಕುಟುಂಬದ ವರ್ಗದವರಲ್ಲಿ ಆಕ್ರಂದನ ಮುಗಿಲು ಮುಟ್ಟಿತ್ತು.
ಜಿಲ್ಲಾಡಳಿತ ಮೂಲಕವು ಮಾಹಿತಿಯನ್ನು ಒದಗಿಸಲಾಗಿದ್ದು, ಹುತಾತ ಯೋಧರ ಮೃತದೇಹಗಳನ್ನು ತವರಿಗೆ ಕರೆತರಲಾಗುತ್ತಿದೆ. ಸಂಜೆ ವೇಳೆಗೆ ಕುಟುಂಬ ವರ್ಗದವರಿಗೆ ಹಸ್ತಾಂತರ ಮಾಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.
ಮಂಗಳವಾರ ಸಂಜೆ 5.40ರ ಸುಮಾರಿಗೆ 11 ಮರಾಠಾ ಲಘು ಪದಾತಿ ದಳದ ಸೇನಾ ವಾಹನವು ನಿಲಂ ಪ್ರಧಾನ ಕಛೇರಿಯಿಂದ ಎಲ್ಒಸಿ ಮೂಲಕ ಬಲ್ನೋಯಿ ಘೋರಾ ಪೋಸ್ಟ್ಗೆ ಪ್ರಯಾಣಿಸುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ಘೋರಾ ಪೋಸ್ಟ್ ಬಳಿಯ 300 ಅಡಿಗಳಷ್ಟು ಕಮರಿಗೆ ಬಿದ್ದಿದೆ.
ಪರಿಣಾಮ ಮರಾಠ ರೆಜಿಮೆಂಟ್ನ ಐವರು ಯೋಧರು ಸಾವನ್ನಪ್ಪಿ, ಚಾಲಕ ಸೇರಿದಂತೆ 12 ಮಂದಿ ಸೈನಿಕರು ಗಾಯಗೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದೆ. ಉಡುಪಿ ಜಿಲ್ಲೆ ಕುಂದಾಪುರದ ಅನೂಪ್ 13 ವರ್ಷಗಳ ಹಿಂದೆ ಸೇನೆಯನ್ನು ಸೇರಿದ್ದರು. ಎರಡು ವರ್ಷಗಳ ಹಿಂದೆ ಅವರಿಗೆ ವಿವಾಹವಾಗಿ ಒಂದು ವರ್ಷದ ಮಗು ಕೂಡ ಇದೆ. ಇದೇ ರೀತಿ ರಬಕವಿ ಬನಹಟ್ಟಿಯ ನಿವಾಸಿ ಮಹೇಶ್ ನಾಗಪ್ಪ ಮಾರಿಕೊಂ ಏಳು ವರ್ಷದ ಹಿಂದೆ ಭಾರತೀಯ ಸೇನೆಯನ್ನು ಸೇರಿದ್ದರು. ಮೂರು ವರ್ಷದ ಹಿಂದೆ ಇವರು ಕೂಡ ವಿವಾಹವಾಗಿದ್ದರು.
ಯೋಧರಿಗೆ ಸಿಎಂ ನಮನ :
ಜಮ್ಮು ಕಾಶ್ಮೀರದಲ್ಲಿ ಸೇನಾ ವಾಹನ ಅಪಘಾತದಲ್ಲಿ ಹುತಾತರಾದ ಯೋಧರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರ ಸಂತಾಪ ಸೂಚಿಸಿದ್ದಾರೆ. ಪೂಂಛ್ ಬಳಿ ಸೇನಾ ವಾಹನ ಅಪಘಾತಕ್ಕೀಡಾಗಿ ಕನ್ನಡಿಗ ಯೋಧರಾದ ದಯಾನಂದ ತಿರಕಣ್ಣವರ, ಅನೂಪ್ ಹಾಗೂ ಮಹೇಶ್ ಮರಿಗೊಂಡ ಅವರು ಹುತಾತರಾದ ಸುದ್ದಿ ತಿಳಿದು ನೋವಾಯಿತು.
ಮೃತ ಯೋಧರ ಆತಕ್ಕೆ ಚಿರಶಾಂತಿ ದೊರಕಲಿ, ಅವರ ಕುಟುಂಬವರ್ಗಕ್ಕೆ ಈ ನೋವು ಭರಿಸುವ ಶಕ್ತಿ ಸಿಗಲೆಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಹೇಳಿದ್ದಾರೆ. ದೇಶ ಸೇವೆಗಾಗಿ ಜೀವ ಮುಡಿಪಿಟ್ಟ ಈ ಹುತಾತ ಯೋಧರ ತ್ಯಾಗ, ಬಲಿದಾನವನ್ನು ನಾಡು ಸದಾಕಾಲ ಸರಿಸಲಿದೆ ಎಂದು ತಮ ಸಂದೇಶದಲ್ಲಿ ತಿಳಿಸಿದ್ದಾರೆ.