Monday, March 10, 2025
Homeಅಂತಾರಾಷ್ಟ್ರೀಯ | Internationalಅರ್ಜೆಂಟೀನಾದಲ್ಲಿ ಕರಾವಳಿಯಲ್ಲಿ ಭಾರೀ ಮಳೆಯಿಂದ ಪ್ರವಾಹ ಉಂಟಾಗಿ 16 ಜನ ಸಾವು

ಅರ್ಜೆಂಟೀನಾದಲ್ಲಿ ಕರಾವಳಿಯಲ್ಲಿ ಭಾರೀ ಮಳೆಯಿಂದ ಪ್ರವಾಹ ಉಂಟಾಗಿ 16 ಜನ ಸಾವು

Flooding in Argentinian city leaves at least 16 dead

ಬ್ಯೂನಸ್ ಐರಿಸ್, ಮಾ.10- ಅರ್ಜೆಂಟೀನಾದಲ್ಲಿ ಕರಾವಳಿಯಲ್ಲಿ ಭಾರೀ ಮಳೆಯಿಂದ ಉಂಟಾಗಿರುವ ಭೀಕರ ಪ್ರವಾಹದಲ್ಲಿ ಸುಮಾರು 16 ಜನರು ಸಾವನ್ನಪ್ಪಿದ್ದಾರೆ ಮತ್ತು ಹಲವಾರು ಮಂದಿ ಕಣ್ಮರೆಯಾಗಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಅರ್ಜೆಂಟೀನಾದ ಪೂರ್ವ ಕರಾವಳಿಯ ರಭಸ ಮಳೆಯಿಂದ ನಗರಗಳು ಪ್ರವಾಹಕ್ಕೆ ಸಿಲುಕಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಾಣೆಯಾಗಿರುವ ಜನರನ್ನು ರಕ್ಷಣಾ ತಂಡಗಳು ಹುಡುಕುತ್ತಿವೆ. ಕಳೆದ ಶುಕ್ರವಾರ ಬಹಿಯಾ ಬ್ಲಾಂಕಾ ನಗರದಲ್ಲಿ ಸುರಿಯುತ್ತಿರುವ ಮಳೆಯಿಂದ ಉಂಟಾದ ಪ್ರವಾಹದಲ್ಲಿ ಹಲವರು ಕೊಚ್ಚಿ ಹೋಗಿದ್ದಾರೆ ಎಂದು ತಿಳಿಸಿದ್ದಾರೆ.

ಬ್ಯೂನಸ್ ಐರಿಸ್‌ನಿಂದದಕ್ಷಿಣದಲ್ಲಿರುವ ನಗರದಿಂದ ಸುಮಾರು 1,450 ಕ್ಕೂ ಹೆಚ್ಚು ಜನರನ್ನು ಸಿಬ್ಬಂದಿ ಸ್ಥಳಾಂತರಿಸಿದ್ದಾರೆ. ಸ್ಥಳಾಂತರಿಸಿದವರಲ್ಲಿ ಸ್ಥಳೀಯ ಆಸ್ಪತ್ರೆಯ ರೋಗಿಗಳು ಸೇರಿದ್ದಾರೆ. ಇತ್ತೀಚಿನ ದಿನಗಳಲ್ಲಿ ದಾಖಲೆಯ 300 ಮಿಲಿಮೀಟರ್ ಮಳೆಯಾಗಿದೆ.

RELATED ARTICLES

Latest News