Sunday, September 8, 2024
Homeರಾಷ್ಟ್ರೀಯ | NationalUnion Budget 2024 Updates: 9 ಆದ್ಯತೆಗಳ ಬಜೆಟ್ ಮಂಡಿಸಿದ ನಿರ್ಮಲಾ

Union Budget 2024 Updates: 9 ಆದ್ಯತೆಗಳ ಬಜೆಟ್ ಮಂಡಿಸಿದ ನಿರ್ಮಲಾ

ಉದ್ಯೋಗ ಸೃಷ್ಟಿ ಕೌಶಲ್ಯಕ್ಕೆ 2 ಲಕ್ಷ ಕೋಟಿ ರೂ. ಮೀಸಲು
* ಪ್ರಧಾನಮಂತ್ರಿಯವರ 5 ವಿಶೇಷ ಯೋಜನೆಗಳ ಘೋಷಣೆ
* ದೇಶದ ಸಮಗ್ರ ಸರ್ವರ ಅಭಿವೃದ್ಧಿ ಸಂಕಲ್ಪ
* ಕೃಷಿ, ಉದ್ಯೋಗ, ಕೌಶಲ್ಯಾಭಿವೃದ್ಧಿಗೆ ಒತ್ತು
* ಹಣದುಬ್ಬರ ನಿಯಂತ್ರಣಕ್ಕೆ ಉಪಕ್ರಮ


ನವದೆಹಲಿ,ಜು.23- ವಿಕಸಿತ ಭಾರತದ ಸಹಕಾರಕ್ಕಾಗಿ ಸುಸ್ಥಿರ ಪ್ರಯತ್ನದ 9 ಆದ್ಯತಾ ವಲಯಗಳಲ್ಲಿ ಗುರುತಿಸುವ ಬಜೆಟ್ ಅನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಲೋಕಸಭೆಯಲ್ಲಿ ಮಂಡಿಸಿದರು. ಮುಂಗಾರು ಅಧಿವೇಶನದ ಆರಂಭದ ಮೊದಲ ದಿನವಾದ ಇಂದು ಸತತವಾದ ತಮ್ಮ 7ನೇ ಬಜೆಟ್ ಅನ್ನು ಮಂಡಿಸಿದ ನಿರ್ಮಲಾ ಸೀತಾರಾಮನ್ ಅವರು, ಬಹಳಷ್ಟು ಅವಕಾಶಗಳ ಸೃಷ್ಟಿಗಾಗಿ 9 ಆದ್ಯತಾ ವಲಯಗಳನ್ನು ಗುರುತಿಸಿದ್ದಾರೆ.

ಕೃಷಿ ಕ್ಷೇತ್ರದಲ್ಲಿ ಉತ್ಪಾದನೆ ಹಾಗೂ ಸ್ವಾವಲಂಬನೆ, 2ನೇಯದಾಗಿ ಉದ್ಯೋಗ ಮತ್ತು ಕೌಶಲ್ಯ, 3- ಮಾನವ ಸಂಪನ್ಮೂಲ ಅಭಿವೃದ್ಧಿ ಒಳಗೊಳ್ಳುವಿಕೆ ಹಾಗೂ ಸಾಮಾಜಿಕ ನ್ಯಾಯ, 4- ಉತ್ಪಾದನೆ ಹಾಗೂ ಸೇವೆ, 5- ನಗರಾಭಿವೃದ್ಧಿ, 6- ಇಂಧನ ಭದ್ರತೆ, 7- ಮೂಲಸೌಕರ್ಯ ಅಭಿವೃದ್ಧಿ, 8-ಅನ್ವೇಷಣೆ, ಸಂಶೋಧನೆ, ಅಭಿವೃದ್ಧಿ ಮತ್ತು 9ನೆಯದಾಗಿ ಮುಂದಿನ ಪೀಳಿಗೆಯ ಸುಧಾರಣೆ ಸೇರಿ ಆದ್ಯತಾ ವಲಯಗಳನ್ನು ಪ್ರಕಟಿಸಿದ್ದಾರೆ.

ಈ ಹಿಂದೆ ಲೋಕಸಭಾ ಚುನಾವಣೆಗೂ ಪೂರ್ವದಲ್ಲಿ ಮಂಡಿಸಲಾದ ಬಜೆಟ್‍ನಲ್ಲಿ ವಿಕಸಿತ ಭಾರತದ ಸಹಕಾರಕ್ಕಾಗಿ ವಿಸತವಾದ ನೀಲನಕ್ಷೆಯನ್ನು ಪ್ರಸ್ತಾಪಿಸಲಾಗಿತ್ತು. ಅದರ ಮುಂದುವರೆದ ಭಾಗವಾಗಿ 9 ತಾಂತ್ರಿಕ ಆದ್ಯತೆಗಳನ್ನು ಘೋಷಿಸುತ್ತಿದ್ದೇನೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ಮಧ್ಯಂತರ ಬಜೆಟ್‍ನಲ್ಲಿ ಬಡವರು, ಮಹಿಳೆಯರು, ಯುವಕರು, ಅನ್ನದಾತ ಸೇರಿ ನಾಲ್ಕು ವರ್ಗಗಳನ್ನು ಗುರಿಯಾಗಿಸಿ ಯೋಜನೆ ರೂಪಿಸಲಾಗಿತ್ತು. ಅನ್ನದಾತರಿಗೆ ಕಳೆದ ತಿಂಗಳ ಹಿಂದೆ ಎಲ್ಲಾ ಪ್ರಮುಖ ಬೆಳೆಗಳ ಉತ್ಪಾದನಾ ವೆಚ್ಚದ ಮೇಲೆ ಶೇ.50 ರಷ್ಟು ಹೆಚ್ಚುವರಿ ಅಂತರದೊಂದಿಗೆ ಕನಿಷ್ಠ ಬೆಂಬಲ ಬೆಲೆಯನ್ನು ಘೋಷಿಸಲಾಗಿದೆ. ಈ ಮೂಲಕ ನಮ್ಮ ಭರವಸೆಯನ್ನು ಈಡೇರಿಸಿದ್ದೇವೆ ಎಂದು ಹೇಳಿದರು.

ಪ್ರಧಾನಮಂತ್ರಿ ಗರೀಬ್‍ಕಲ್ಯಾಣ ಅನ್ನಯೋಜನೆಯನ್ನು 5 ವರ್ಷಗಳಿಗೆ ವಿಸ್ತರಿಸಿದ್ದು, 80 ಕೋಟಿ ಜನ ಫಲಾನುಭವಿಗಳಾಗಿದ್ದಾರೆ. ಮಧ್ಯಂತರ ಬಜೆಟ್‍ನ ಘೋಷಣೆಗಳಿಗೆ ಆಡಳಿತಾತ್ಮಕ ಹಾಗೂ ಅನುಷ್ಠಾನ ಆದೇಶಗಳು ಪ್ರಗತಿಯಲ್ಲಿವೆ ಎಂದರು.

2024-25ನೇ ಸಾಲಿನ ಬಜೆಟ್ ವರ್ಷಪೂರ್ತಿ ಗಮನವನ್ನು ಕೇಂದ್ರೀಕರಿಸುವ ಧ್ಯೇಯವನ್ನು ಒಳಗೊಂಡಿದೆ. ಪ್ರಮುಖವಾಗಿ ಉದ್ಯೋಗ, ಕೌಶಲ್ಯ, ಸಣ್ಣ, ಸೂಕ್ಷ್ಮ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮಧ್ಯಮ ವರ್ಗವನ್ನು ಆದ್ಯತೆಯನ್ನಾಗಿ ಪರಿಗಣಿಸಲಾಗಿದೆ ಎಂದರು.

ಪ್ರಧಾನಮಂತ್ರಿ ವಿಶೇಷ ಪ್ಯಾಕೇಜ್‍ನಲ್ಲಿ 5 ಯೋಜನೆಗಳನ್ನು ಘೋಷಿಸಲಾಗಿದ್ದು, ಮುಂದಿನ 5 ವರ್ಷಗಳಲ್ಲಿ 4.1 ಕೋಟಿ ಯುವಕರಿಗೆ ಉದ್ಯೋಗ ಸೃಷ್ಟಿ, ಕೌಶಲ್ಯಾಭಿವೃದ್ಧಿ ಹಾಗೂ ಇತರ ಅವಕಾಶಗಳನ್ನು ಒದಗಿಸಲು ಕೇಂದ್ರ ಸರ್ಕಾರ 2 ಲಕ್ಷ ಕೋಟಿ ರೂ.ಗಳನ್ನು ಒದಗಿಸುತ್ತಿದೆ ಎಂದು ಹೇಳಿದರು. ಈ ವರ್ಷ 1.8 ಲಕ್ಷ ಕೋಟಿ ರೂ.ಗಳನ್ನು ಶಿಕ್ಷಣ, ಉದ್ಯೋಗ ಮತ್ತು ಕೌಶಲ್ಯಕ್ಕೆ ಒದಗಿಸಲಾಗಿದೆ ಎಂದು ತಿಳಿಸಿದರು.

ಬಜೆಟ್ ಮಂಡನೆಯ ಆರಂಭದಲ್ಲಿ ನಿರ್ಮಲಾ ಸೀತಾರಾಮನ್ ಅವರು ದೇಶದ ಜನ ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವದ ಮೇಲೆ ನಂಬಿಕೆ ಹಾಗೂ ವಿಶ್ವಾಸವಿಟ್ಟು ಸತತ ಮೂರನೇ ಬಾರಿಗೆ ಐತಿಹಾಸಿಕವಾಗಿ ಚುನಾಯಿಸಿರುವುದಕ್ಕಾಗಿ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು. ಜನರ ಬೆಂಬಲ ಹಾಗೂ ವಿಶ್ವಾಸಕ್ಕೆ ತಾವು ಚಿರ ಋಣಿ. ಜಾತಿ, ಧರ್ಮ, ಲಿಂಗ, ವಯಸ್ಸನ್ನು ಮೀರಿ ದೇಶದ ಎಲ್ಲಾ ಪ್ರಜೆಗಳ ಆಶೋತ್ತರಗಳನ್ನು ಈಡೇರಿಸಲು ಮತ್ತು ಜೀವನದ ಗುರಿ ಸಾ„ಸಲು ಬೆಂಬಲ ನೀಡುವುದಾಗಿ ಹೇಳಿದ್ದಾರೆ.

ಕೇಂದ್ರ ಸರ್ಕಾರದ ಸ್ಥಿರತೆ ಹಾಗೂ ನೀತಿಗಳಿಂದಾಗಿ ಜಾಗತಿಕ, ಆರ್ಥಿಕತೆಗಳಲ್ಲಿ ಭಾರತ ಈಗಲೂ ತನ್ನ ಹಿಡಿತವನ್ನು ಹೊಂದಿದೆ ಎಂದು ವಿಶ್ವಮಾನ್ಯ ದೃಷ್ಟಿಯಿಂದ ಪರಿಗಣಿಸುವುದಾಗಿ ಹೇಳಿದ್ದಾರೆ.
ಹಣದುಬ್ಬರವನ್ನು ಮತ್ತು ಆರ್ಥಿಕ ಅಪಾಯಗಳನ್ನು ನಿಭಾಯಿಸಲು ನಮ್ಮ ಸರ್ಕಾರ ಬದ್ಧವಾಗಿದೆ. ಆಸ್ತಿಮೌಲ್ಯ ಹೆಚ್ಚಳಕ್ಕೆ ಒತ್ತು ನೀಡಿದ್ದು, ರಾಜಕೀಯ ಅಸ್ಥಿರತೆಯನ್ನು ಹತ್ತಿಕ್ಕಲಾಗಿದೆ. ಭಾರತದ ಆರ್ಥಿಕತೆ ಮುಂದಿನ ದಿನಗಳಲ್ಲಿ ತನ್ನ ಪ್ರಕಾಶಮಾನತೆಯನ್ನು ಕಾಯ್ದುಕೊಳ್ಳಲಿದ್ದು, ಹಣದುಬ್ಬರ ಕೆಳಹಂತದಲ್ಲಿ ಮುಂದುವರೆದಿದ್ದು, ಸ್ಥಿರತೆಯನ್ನು ಕಾಯ್ದುಕೊಂಡಿದೆ. ಶೇ.4 ರಷ್ಟು ಮಿತಿಗೆ ತಂದು ನಿಲ್ಲಿಸುವ ಗುರಿಯತ್ತ ಹೆಜ್ಜೆ ಹಾಕಿದ್ದೇವೆ. ತೈಲ ಹಾಗೂ ಆಹಾರೇತರ ಕ್ಷೇತ್ರವನ್ನೊಳಗೊಂಡ ಸಹ ಹಣದುಬ್ಬರ ಪ್ರಸ್ತುತ ಶೇ.3.1 ರಷ್ಟು ಮಿತಿಯಲ್ಲಿದೆ. ದೈನಂದಿನ ವಸ್ತುಗಳ ಬೇಡಿಕೆ ಅನುಸಾರ ಮಾರುಕಟ್ಟೆ ಪೂರೈಕೆಗೆ ಒತ್ತು ನೀಡಲಾಗಿದೆ ಎಂದು ಹೇಳಿದ್ದಾರೆ.

ದೇಶವನ್ನು ಅಭಿವೃದ್ಧಿಯ ಹಾದಿಯಲ್ಲಿ ನಡೆಸಲು ದೇಶದ ಜನ ನಮಗೆ ವಿಶೇಷ ಅವಕಾಶ ನೀಡಿದ್ದು, ಇದನ್ನು ಬಳಸಿಕೊಂಡು ಸರ್ವವೃತ್ತಗಳಲ್ಲೂ ಸಮೃದ್ಧಿಯನ್ನು ಸಾ„ಸುವ ಪ್ರಯತ್ನ ಮಾಡುತ್ತೇವೆ ಎಂದರು.

RELATED ARTICLES

Latest News